ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಊರಿನ ಹೆಸರೇ ಸ್ವಲ್ಪ ತಲೆಕೆಡಿಸುವಂತದ್ದು,ಹಾಗಿತ್ತು ಆ ಹೆಸರು. ಧರ್ಮಸ್ಥಳದಿಂದ ಕೊಕ್ಕಡಕ್ಕೆ ಸಾಗುವ ದಾರಿಯಲ್ಲಿ ಸುಮಾರು 10-14 ಕಿ.ಮೀ ದೂರ ಕ್ರಮಿಸುತ್ತಿದ್ದಂತೆಯೇ ಎರಡನೇ ಸೇತುವೆಯ ಮುಂಚೆ ಸಿಗುವ ಊರಿನ ಹೆಸರೇ "ಪೆರ್ಪಿಕಲ್". ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕಾಣಸಿಗದು ಈ ಊರಿನ ಹೆಸರು. ಈ ಪ್ರದೇಶದಲ್ಲಿರುವ ಅದ್ಭುತ ಜಲಪಾತದ ವಿಚಾರ ಬಲ್ಲವರು ಬೆರಳೆಣಿಕೆಯ ಮಂದಿ ಮಾತ್ರ... ಕೇವಲ ಒಂದು ಗೂಡಂಗಡಿ ಇರುವ ಊರಿನ ಬಸ್ಸು ನಿಲ್ದಾಣ. ಅಲ್ಲಿಂದ ಸ್ವಲ್ಪವೇ ಹೆಜ್ಜೆಯ ದೂರದಲ್ಲಿ ಸಣ್ಣದೊಂದು ಸೇತುವೆ.ಸೇತುವೆಯ ಕೆಳಗೆ ಕಲ್ಲುಗಳ ಮಹಾಸಭೆಯಂತೆ ಗೊಚರಿಸುವ ಕಗ್ಗಲ್ಲುಗಳು. ಅದರ ನಡುವೆ ಕಪಿಲೆಯ (ನದಿಯ ಹೆಸರು) ತುಸು ಬಳುಕೆಯ ನಡಿಗೆ. ಇಷ್ಟು ಆ ಜಾಗದ ಒಂದು ಸಣ್ಣ ಪರಿಚಯ.ಸೇತುವೆಯ ಬದಿಯಿಂದ ನದಿಗೆ ಇಳಿದು ಕಗ್ಗಲ್ಲುಗಳನ್ನು ದಾಟುತ್ತಾ ನದಿಯ ದಾರಿಯಲ್ಲಿ ಸ್ವಲ್ಪ ಪ್ರಯಾಸದ ಪ್ರಯಾಣ. ಪಾಚಿ ಹಿಡಿದ ಕಲ್ಲುಗಳ ಮೇಲೆ ಹಿಡಿತ ತಪ್ಪಿದರೆ ಕೇವಲ ಮೊಣಕಾಲೆತ್ತರದ ನೀರಿಗೇ...! ಮೈಯೆಲ್ಲಾ ಕಣ್ಣಾಗಿಸಿಕೊಂಡು ನಡಿಗೆ, ಅಲ್ಲಿಗೆ ಸಣ್ಣದೊಂದು ಜಲಪಾತದ ಇಂಪಾದ ಮೆಲುದನಿ ನಮ್ಮನ್ನು ಆಕರ್ಷಿಸುತ್ತದೆ... ಆಕರ್ಷಣಿಯೆಡೆಗೆ ಪಯಣ , ಆಹಾ !!! ಸುಂದರ ಕಪಿಲೆಯು ಸುಮಾರು ಮೂರಾಳೆತ್ತರದಿಂದ ಧುಮುಕುವ ದೃಶ್ಯವದು. ಆ ದೃಶ್ಯವನ್ನು ಕಣ್ಣಾರೆ ಆನಂದಿಸಿಕೊಂಡು ನಾ ಆ ಜಲಪಾತಕ್ಕೆ ಮಾಡಿದ ನಾಮಕರಣವೇ "ಪೆರ್ಪಿಕಲ್ ಫಾಲ್ಸ್" . ಜಲಪಾತದ ಸುತ್ತಮುತ್ತಲಿನ ಪ್ರದೇಶವು ನಿಜವಾಗಿಯೂ ಪ್ರಕೃತಿಯ ಕಲಾಕೃತಿಗೆ ಹಿಡಿದ ಕೈಗನ್ನಡಿ.

ಚಂದ್ರನ ಮೇಲೆ ನಡೆದ ಅನುಭವವದು, ವರ್ಷಾನು ವರ್ಷಗಳ ನೀರಿನ ರಭಸಕ್ಕೆ ಕಗ್ಗಲ್ಲುಗಳು ತಾಳಬಾರದ ವಿಚಿತ್ರ, ಕೌತುಕ. ಹುಚ್ಚುಹಿಸುವಂತಹ ಕಲಾಕೃತಿಗಳನ್ನು ತಳೆದಿತ್ತು .ಮುಂದೆ ಪಾತಾಳದಂತಹ ಕಲ್ಲಿನ ಕಂದಕಗಳನ್ನು ನಿರ್ಮಿಸಿಕೊಂಡು ಸಾಗಿದ್ದಳು ಕಪಿಲೆ.ಮುಗಿದಿತ್ತು ಚಾರಣದಂತಹ ಆ ಪಯಣ. ಬೇರೆ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಈ ಜಲಪಾತ ವಿಶಿಷ್ಟ ರೀತಿಯಲ್ಲಿ ಮುಂದಿದೆ.ಕೊನೆಯದಾಗಿ ಆ ಜಲಪಾತದ ಹೆಸರು ನಿಜವಾಗಿಯೂ ತಿಳಿದಿಲ್ಲ ಆದರೆ ಚಾರಣದಂತಹ ಪ್ರಯಾಣ ಸುತ್ತಿ ಬಂದು ಬಸ್ಸು ನಿಲ್ದಾಣದ ಬದಿಯ ಗೂಡಂಗಡಿಯ ಹುಳಿ, ಜೀರಿಗೆ ಮೆಣಸು ಸೇರಿಸಿದ ಸೋಡಾ ಶರಬತ್ನ ಖಾರ ಮಾತ್ರ ಇನ್ನೂ ಮರೆತಿಲ್ಲ.ಅಭಿಲಾಷ್ ಪಿ. ಎಸ್
ಪತ್ರಿಕೋದ್ಯಮ ವಿಭಾಗ,ಆಳ್ವಾಸ್ ಕಾಲೇಜು
ಮೂಡುಬಿದಿರೆ.

0 comments:

Post a Comment