ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಏಕಚಿತ್ತ

ಯಾವುದೇ ಸಾಧನೆ ಸಫಲಗೊಳ್ಳಬೇಕಾದರೆ ಶ್ರಮ ಪಡಬೇಕು. ಕೇವಲ ಶ್ರಮಪಟ್ಟರೆ ಸಾಲದು, ಸಾಧನೆ ಫಲಿಸುವವರೆಗೂ ನಿರಂತರ ಪ್ರಯತ್ನವನ್ನು ಏಕಚಿತ್ತದಿಂದ ಮಾಡಬೇಕಾಗುತ್ತದೆ. ಮನಸಿದ್ದರೆ ಮಾರ್ಗ ಎಂಬ ಮಾತನ್ನು ಬಿಹಾರಿನ ದಶರಥ ಮಾಂಜಿ ಕಾರ್ಯರೂಪದಲ್ಲಿ ಮಾಡಿ ತೋರಿಸಿದ್ದಾನೆ. ಗಯಾ ಜಿಲ್ಲೆಯ ಗೆಲೌರ್ ಆತನ ಕುಗ್ರಾಮ. ಅಲ್ಲಿಯ ಜನ ಕುಡಿಯುವ ನೀರಿಗಾಗಿ ಪಕ್ಕದ ಹಳ್ಳಿಯಾದ ವಜೀರ್ಗಂಜ್ ಗೆ ಹೋಗಬೇಕು. ಅಲ್ಲಿಗೆ ಹೋಗಲು ದಾರಿ ಸರಿಯಾಗಿಲ್ಲ. ಎರಡು ಹಳ್ಳಿಗಳ ಮಧ್ಯೆ ಒಂದು ಗುಡ್ಡ ಇದೆ. ಅದನ್ನು ಬಳಸಿಕೊಂಡು ಕಾಲುದಾರಿಯಲ್ಲಿ ಹೋಗಬೇಕಾಗುತ್ತದೆ. ನೀರು ತರಲು ದೂರವೂ ನಡೆಯಬೇಕು ಮತ್ತು ಹೆಚ್ಚು ಶ್ರಮವೂ ಪಡಬೇಕು.


ದಶರಥನ ಪತ್ನಿ ಫಗುಣಿದೇವಿ ನೀರು ತರಲು ಹೋಗಿ ತುಂಬಾ ಹೊತ್ತಾಗಿದೆ. ಅವಳ ಬರುವನ್ನೇ ಕಾಯುತ್ತಾ ದಶರಥ ತನ್ನ ಗುಡಿಸಲ ಮುಂದೆ ಕುಳಿತಿದ್ದಾನೆ. ಏಕೆ ಈ ದಿನ ಇಷ್ಟು ತಡಮಾಡುತ್ತಿದ್ದಾಳೆ ಎಂದು ಯೋಚಿಸುವಷ್ಟರಲ್ಲಿ, ದೂರದಲ್ಲಿ ಅವಳ ಹೆಂಡತಿ ಕುಂಟುತ್ತಾ ಬರುತ್ತಿರುವದನ್ನು ನೋಡಿದ. ಆಕೆ ಸಮೀಪ ಬಂದಳು. ವಿಚಾರಿಸಿದಾಗ, ಕಾಲು ಜಾರಿ ಬಿದ್ದು ಗಾಯಗಳಾಗಿವೆ, ಇದ್ದ ಒಂದೇ ಒಂದು ಮಡಕೆಯೂ ಸಹ ಚೂರುಚೂರಾಗಿ ಹೋಯಿತೆಂದು ನೋವಿನಿಂದ ಹೇಳಿಕೊಂಡಲು.

ಗಂಡನಿಗೆ ಎಲ್ಲಿಲ್ಲದ ಕೋಪ ಬಂತು. ಯಾರ ಮೇಲೆ ಕೋಪ....? ಹೆಂಡತಿಯ ಮೇಲಲ್ಲ. ಹಾಳು ಹಳ್ಳಿಯ ಮೇಲಲ್ಲ. ತನ್ನ ಕಡು ಬಡತನದ ಮೇಲಲ್ಲ. ರಾಜಕಾರಣಿಗಳ ಮೇಲಲ್ಲ. ಸಮಾಜದ ವ್ಯವಸ್ಥೆಯ ಮೇಲಲ್ಲ. ಆತನಿಗೆ ಕೋಪ ಬಂದಿದ್ದು ಗುಡ್ಡದ ಮೇಲೆ. ಗುಡ್ಡ ಸೀಳಿ, ಎರಡು ಹಳ್ಳಿಗಳ ಮಧ್ಯೆ ದಾರಿ ಮಾಡಬೇಕೆಂದು ಯೋಚಿಸಿದ. ಇದರಿಂದ ಜನರಿಗೂ ಅನುಕೂಲವಾಗುತ್ತದೆ ಮತ್ತು ತನ್ನ ಪ್ರೀತಿಯ ಪತ್ನಿ ನೀರಿಗಾಗಿ ಕಷ್ಟ ಪಡುವುದು ತಪ್ಪುತ್ತದೆ ಎಂದು ಮನಗಂಡು ಸುತ್ತಿಗೆ ಹಿಡಿದು ಗುಡ್ಡದ ತಪ್ಪಲಿಗೆ ಬಂದು ಗುಡ್ಡ ಸೀಳುವುದನ್ನು ಪ್ರಾರಂಭಿಸಿದ. ಒಬ್ಬಂಟಿಯಾಗಿ 22 ವರ್ಷಗಳ ಕಾಲ ಬೆಟ್ಟ ಕೊರದು, 360 ಅಡಿ ಉದ್ದದ ಮತ್ತು 16 ಅಡಿಗಳಷ್ಟು ಅಗಲದ ದಾರಿ ಮಾಡಿದ. ಆ ಮುದಿ ವಯಸ್ಸಿನಲ್ಲೂ ಎಂತಹ ಸಾಧನೆ ನೋಡಿ. ಇದು ಸಾಧನೆಯಲ್ಲವೆಂದು ನಿಮಗನಿಸಿದರೆ, ನಿಮ್ಮ ಮನೆಯಂಗಳದಲ್ಲಿ ಒಂದು ತೆಂಗಿನ ಸಸಿ ನಡೆಲು ಹಳ್ಳ ತೋಡಿ ನೋಡಿ, ಆಗ ನಿಮಗೆ ದಶರಥನ ಶ್ರಮ ಅರ್ಥವಾಗುತ್ತದೆ.

ದಶರಥ ಇಂದು ನಮ್ಮ ನಡುವೆ ಇಲ್ಲ. ಆದರೆ ಅವನು ನಿರ್ಮಿಸಿದ ದಾರಿಯಲ್ಲಿ ಜನ ಓಡಾಡುತ್ತಿದ್ದಾರೆ. ಏಕಚಿತ್ತದಿಂದ ನಿರಂತರ ಶ್ರಮಪಟ್ಟರೆ ಪ್ರತಿಫಲ ಸಿಗದೆ ಇರಲಾರದು. ಪ್ರಿತಿಯೊಬ್ಬರಲ್ಲೂ ಏಕಚಿತ್ತವಿದೆ ಆದರೆ ಅದು ನಮ್ಮಲ್ಲಿ ಎಷ್ಟು ಸಮಯವಿರಬಲ್ಲದು ಎಂಬುವುದೇ ಮೂಲ ಪ್ರಶ್ನೆ.

ಅಮೀತಾಬ್ ಬಚ್ಚನ್ಗೆ ಈಗ 70 ವರ್ಷ ತುಂಬಲಿದೆ. ಸಿನಿಮಾರಂಗದಲ್ಲಿ ಬಂದ ಹೊಸ ಮುಖಗಳು ಒಂದೇ ಒಂದು ವರ್ಷದಲ್ಲಿ ಮರೆಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಬಚ್ಚನ್ ರ ಏಕಚಿತ್ತವೇ ಅವರನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

- ಜಬೀವುಲ್ಲಾ ಖಾನ್.

0 comments:

Post a Comment