ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಉತ್ತರ ಕನ್ನಡ ಜಿಲ್ಲೆ 'ಜಲಪಾತಗಳ ತವರೂರು' ಎಂದೆನಿಸಿದೆ. ಮಳೆಗಾಲ ಬಂತೆಂದರೆ ಸಾಕು ಇಲ್ಲಿನ ಜಲಪಾತಗಳೆಲ್ಲ ಹುಚ್ಚೆದ್ದು ಕುಣಿಯಲಾರಂಭಿಸುತ್ತವೆ. ಮಳೆಗಾಲದಲ್ಲಿ ನೂರಾರು ಹೊಸ ಜಲಪಾತಗಳು ತಲೆ ಎತ್ತುತ್ತವೆ. ಬೆಟ್ಟ-ಗುಡ್ಡಗಳಿಂದ ಹರಿದು ಬರುವ ನೀರು ಜಲಪಾತಗಳಂತೆ ಧುಮುಕುತ್ತವೆ. ಅದನ್ನು ನೋಡಲು ಖುಶಿ ಎನಿಸುತ್ತದೆ.ಚಿತ್ರದಲ್ಲಿರುವುದು ಯಾವುದೇ ಪ್ರಸಿದ್ಧ ಜಲಪಾತವಲ್ಲ. ಮಳೆಗಾಲದಲ್ಲಿ ಸೃಷ್ಟಿಯಾದ ಜಲಪಾತ. ಇದು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಿಸಗೋಡದ ಬಳಿ. ಇಲ್ಲಿ 15-20 ಅಡಿ ಮೇಲಿನಿಂದ ನೀರು ಬೀಳುತ್ತದೆ. ಮಳೆಗಾಲದಲ್ಲಿ ಈ ಧಾರೆ ದೊಡ್ಡ ಜಲಪಾತಗಳ ಮುಂದೆ ತಾನೇನೂ ಕಡಿಮೆ ಅಲ್ಲ ಎಂದು ಹೇಳುವಂತೆ ಭಾಸವಾಗುತ್ತದೆ.

- ಶ್ರೀಧರ ಅಣಲಗಾರ

0 comments:

Post a Comment