ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನಗುನಗುತಾ ನಲಿ

ಮಂಜಣ್ಣ ಇವತ್ತು ಯಾಕೋ ತುಂಬಾ ಬೇಸರವಾಗುತ್ತಿದೆ ಕಣ್ರಿ...
ಮನಸ್ಸು ಯಾವುದೋ ಸಂಕಷ್ಟಕ್ಕೆ ಸಿಲುಕಿದಾಗ, ಹಾಗಾಗೋದು ಸಹಜ ಕಣಪ್ಪಾ....ಈ ಪ್ರಪಂಚಗಲ್ಲಿ ಕಷ್ಟ-ಸುಖ ನಮಗಲ್ಲದೆ ಬಂಡೆಗಳಿಗೆ ಬರುತ್ತದೆಯೇ...ಬೇಸರದಿಂದ ಪರಾಗೋದಿಕ್ಕೆ ಒಂದು ಉಪಾಯ ಹೇಳ್ತೀನಿ ಕೇಳು... ಮನಸ್ಸಿಗೆ ಬೇಸರ ಕಾಡುತ್ತಿದ್ದರೆ,ನಮ್ಮನ್ನು ನಾವು ಬೇರೆ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ತೋಟಗಾರಿಕೆ,ಕಸೂತಿಕೆಲಸ,ಚಿತ್ರಕಲೆ ಅಥವಾ ನಮಗೆ ಇಷ್ಟವಾದದ್ದನ್ನು ಮಾಡಿ ನಮ್ಮ ಮನಸ್ಸನ್ನು ಬೇರೆ ಕಡೆಗೆ ಪರಿವರ್ತಿಸಿಕೊಳ್ಳಬೇಕು. ಮನುಷ್ಯ ಸ್ನೇಹ ಜೀವಿ. ಒಂದಲ್ಲ ಒಂದು ರೀತಿ ಅವನಿಗೆ ನಂಟು ಬೇಕು. ನಮ್ಮ ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ನಲುಮೆಯಿಂದ ಬಾಳುವುದನ್ನು ಕಲಿತುಕೊಳ್ಳಬೇಕು.ಮುಖ ಸಪ್ಪೆ ಮಾಡಿಕೊಂಡು ಕುಳಿತರೆ ಅದರಿಂದ ನಮಗೂ ನಮ್ಮ ಸುತ್ತಮುತ್ತಲಿನ ಜನರಿಗೂ ಕಳವಳ ಉಂಟಾಗುತ್ತದೆ. ನಗುನಗುತಾ ಇರೋದನ್ನ ಕಲಿಯಪ್ಪಾ. ನಮ್ಮ ನಗುವಿನಿಂದ ನಮ್ಮ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ಪರಿವರ್ತಿಸಬಹುದು ಎಂದು ಡೇಲ್ ಕಾರ್ನಗಿ ಹೇಳಿದ್ದಾನೆ. ಇಲಿನೈಸ್ ವಿಶ್ವವಿದ್ಯಾಲಯ 2002ನೇ ಸಾಲಿನ ವಿದ್ಯಾರ್ಥಿಗಳು ಅನ್ವೇಷಣೆ ನಡೆಸಿದ ವರದಿಯ ಪ್ರಕಾರ ನಮ್ಮ ನಿಕಟ ಸ್ನೇಹಿತರ ಮತ್ತು ಕುಟುಂಬ ಹಾಗೂ ಸಂಬಂಧಿಕರ ಜೊತೆ ಸಂಬಂಧ, ಆ ಸಂಬಂಧಗಳನ್ನು ಜೀವ ತುಂಬಲು ನಾವು ಮುಡುಪಾಗಿಡುವ ಪ್ರತಿದಿನ ಪ್ರತ್ಯೇಕ "ಸಮಯ" ನಮ್ಮ ಸಂತೋಷದ ಮಿತಿಯನ್ನು ಬಹಳವಾಗಿ ಹೆಚ್ಚಿಸುತ್ತದಂತೆ.

ಮನಶಾಸ್ತ್ರಜ್ಞ ಮಾರ್ಟಿನ್ ಸೆಲಿಗ್ ಮ್ಯಾನ್ ಪ್ರಕಾರ ನಮ್ಮ ಸಂತೋಷ ಹೆಚ್ಚು ಮಾಡಿಕೊಳ್ಳಬೇಕಾದರೆ ಕರುಣಾಮಯಿ ಕೆಲಸಗಳನ್ನು ಮಾಡಬೇಕಂತೆ. ಬೇರೆಯವರೊಂದಿಗೆ ಸಹಾಯಹಸ್ತ ಚಾಚಬೇಕು. ಸಾಮಾಜಿಕ ಹಿತದೃಷ್ಟಿಗಾಗಿ, ಮಾನವಕುಲದ ಒಳಿತಿಗಾಗಿ ನಿರಪೇಕ್ಷಭಾವದಿಂದ ಕಾರ್ಯಕರ್ತರಾಗಬೇಕು. ಆಗ ಮನಸ್ಸಿಗೆ ಒಂದು ರೀತಿ ತೃಪ್ತಿ ಮತ್ತು ಸಂತೋಷ ಸಿಗುತ್ತದಪ್ಪಾ...

- - - ಜಬೀವುಲ್ಲಾ ಖಾನ್.

0 comments:

Post a Comment