ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಸಾಮಾನ್ಯವಾಗಿ ನಮ್ಮ ಕೈಗೆ ಹಣ್ಣು-ತರಕಾರಿಗಳು ಸಿಕ್ಕರೆ ಏನು ಮಾಡುತ್ತೇವೆ? ಅವು ನಮ್ಮ ಹೊಟ್ಟೆ ಸೇರಲು ಏನು ವ್ಯವಸ್ಥೆ ಬೇಕೋ ಅದನ್ನು ಮಾಡುತ್ತೇವೆ. ಆದರೆ ಹುಬ್ಬಳ್ಳಿಯಲ್ಲಿ ಕೇಶವನ್ ಗಾಂಧಿ ಎನ್ನುವವರು ಹಣ್ಣು-ತರಕಾರಿಗಳನ್ನು ಉಪಯೋಗಿಸಿಕೊಂಡು ವಿವಿಧ ಕಲಾಕೃತಿಗಳನ್ನು ರಚಿಸುತ್ತಾರೆ!! ಮದುವೆ ಹಾಗು ಇನ್ನಿತರ ಸಮಾರಂಭಗಳಲ್ಲಿ ಕೇಶವನ್ ಅವರು ತಮ್ಮ ಕಲಾಕೃತಿಗಳ ಪ್ರದರ್ಶನ ನಡೆಸುತ್ತಾರೆ.ಕುಂಬಳಕಾಯಿಯಿಂದ ಗಣಪತಿಯನ್ನು ರಚಿಸಿದರೆ, ಬಿಟರೂಟ, ಗಜ್ಜರಿ, ಮೂಲಂಗಿ, ಕಲ್ಲಂಗಡಿ ಇವನ್ನೆಲ್ಲ ಬಳಸಿಕೊಂಡು ಹೂವು ತಯಾರಿಸುತ್ತಾರೆ. ಬಾಳೆಹಣ್ಣು, ಮೆಣಸಿನಕಾಯಿ, ಸವತೆಕಾಯಿಗಳಿಂದ ವಿವಿಧ ಪ್ರಾಣಿಗಳು ಸಿದ್ಧವಾಗುತ್ತವೆ.


ಆಕೃತಿಗಳನ್ನು ರಚಿಸಿ ಸಭೆ- ಸಮಾರಂಭಗಳಲ್ಲಿ ಪ್ರದರ್ಶಿಸಿ ಅದರಿಂದ ಬರುವ ಆದಾಯದಿಂದಲೇ ಅವರ ಜೀವನ ನಿರ್ವಹಣೆಯಂತೆ!
ಶ್ರೀಧರ ಅಣಲಗಾರ,
ನಂದೊಳ್ಳಿ, ಯಲ್ಲಾಪುರ

0 comments:

Post a Comment