ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಧರ್ಮಸ್ಥಳ: ರಾಜ್ಯದ ರಾಜಕೀಯ ವಿದ್ಯಮಾನಗಳ; ಅದರಲ್ಲೂ ಪ್ರಮುಖವಾಗಿ ಪಕ್ಷ ಪಕ್ಷಗಳ ನಡುವಿನ ಕೆಸರೆರಚಾಟ, ಆರೋಪ , ಪ್ರತ್ಯಾರೋಪಗಳನ್ನು ವರದಿ ಮಾಡುವುದನ್ನು ರಾಜ್ಯದ ಸಮಸ್ತ ಮಾಧ್ಯಮಗಳು ನಿಲ್ಲಿಸಿದ್ದೇ ಆದಲ್ಲಿ ವ್ಯವಸ್ಥಿತವಾದ ರಾಜಕಾರಣ ನಡೆಯಲು ಸಾಧ್ಯ. ಮಾಧ್ಯಮಗಳ ಮುಂದೆ ಪ್ರತಿಭಟನೆ ಮಾಡಿಸುವುದು; ಪ್ರತಿಭಟನೆಗೆ ಕುಮ್ಮಕ್ಕು ನೀಡಿ ತಾವು ಸಭ್ಯರಂತೆ ಫೋಸ್ ನೀಡುವುದು ...ಇದು ಇಂದಿನ ರಾಜಕಾರಣಿಗಳು ರಾಜಕೀಯ ಪಕ್ಷಗಳು ನಡೆದುಕೊಳ್ಳುವ ರೀತಿ.


ಅದಕ್ಕೆ ತಕ್ಕಂತೆ ಮಾಧ್ಯಮಗಳು ಈ ಎಲ್ಲಾ ವಿದ್ಯಮಾನಗಳನ್ನು ವರದಿ ಮಾಡುತ್ತಾ ಕ್ಷಣ ಕ್ಷಣಕ್ಕೆ ಮಾಹಿತಿಗಳನ್ನು ಭಿತ್ತರಿಸಿ ಮತ್ತಷ್ಟು ಕೊಳಕು ರಾಜಕೀಯಕ್ಕೆ ಪ್ರಚಾರ ನೀಡುವ ಕಾರ್ಯ ನಡೆಸುತ್ತದೆ.ಅಷ್ಟಕ್ಕೂ ಇಂದಿನ ಬಹುತೇಕ ಮಾಧ್ಯಮಗಳು ರಾಜಕಾರಣಿಗಳ ಕಪಿಮುಷ್ಠಿಯಲ್ಲಿದೆ ಹಾಗೂ ಅವರ ನೇರ/ಪರೋಕ್ಷ ಆಡಳಿತದಲ್ಲಿದೆ ಎಂಬುದು ಕೂಡಾ ಅಷ್ಟೇ ಮಹತ್ವದ್ದು!ಧರ್ಮಸ್ಥಳದ ಮಂಜುನಾಥನಿಗೆ ಹರಕೆ, ಆಣೆ ಹೊತ್ತ ಬಿ.ಎಸ್.ಯಡಿಯೂರಪ್ಪ ಹಾಗೂ ಇವರ ಆಣೆಗೆ ಸವಾಲು ಸ್ವೀಕರಿಸಿದ ಕುಮಾರ ಸ್ವಾಮಿ ಅವರ ವಿಚಾರವನ್ನೇ ತೆಗೆದುಕೊಳ್ಳೋಣ. ಅವರೀರ್ವರ ಈ ಆಣೆ ಪ್ರಮಾಣಗಳು ರಾಷ್ಟ್ರೀಯ ಸುದ್ದಿಯಾಗಿ ಭಿತ್ತರಗೊಂಡವು. ಅಷ್ಟೇ ಅಲ್ಲದೆ ಆಣೆ ಹರಕೆ ಸಲ್ಲಿಸುವ ಸೋಮವಾರದಂದು ಕ್ಷಣ ಕ್ಷಣಕ್ಕೆ ಪ್ರಾದೇಶಿಕ ಸುದ್ದಿವಾಹಿನಿಗಳು/ ರಾಷ್ಟ್ರೀಯ ಸುದ್ದಿವಾಹಿನಿಗಳು ಸ್ಥಳದಲ್ಲೇ ಬೀಡು ಬಿಟ್ಟು ನೇರ ವರದಿಯನ್ನು (ಲೈವ್ ರಿಪೋರ್ಟಿಂಗ್)ನೀಡಿದವು.
ಇದೇ ಸಂದರ್ಭದಲ್ಲಿ ಜೆ.ಡಿ.ಎಸ್ ಬೆಂಬಲಿಗರ ಗುಂಪೊಂದು ಸುದ್ದಿ ವಾಹಿನಿಗಳ ಕ್ಯಾಮರಾ ಮುಂದೆ ಘೋಷಣೆ ಕೂಗಿ ಯಡಿಯೂರಪ್ಪರ ವಿರುದ್ಧ ಪ್ರತಿಭಟನೆ ಕೈಗೊಂಡವು. ರಾಷ್ಟ್ರೀಯ ಸುದ್ದಿ ವಾಹಿನಿಗಳು ಸೇರಿದಂತೆ ಪ್ರತಿಯೊಂದು ಸುದ್ದಿ ವಾಹಿನಿಗಳು ಈ ಘಟನೆಯನ್ನು ನೇರ ವರದಿ ಮಾಡಿದವು. ಹಾಗಾದರೆ ಕ್ಯಾಮರಾ ಎದುರಿಗಿದ್ದರಷ್ಟೇ ಈ ಪ್ರತಿಭಟನಾ ಕಾರರಿಗೆ ಪ್ರತಿಭಟನೆ ಕೈಗೊಳ್ಳಲು ಸಾಧ್ಯವೇ...ಏತನ್ಮಧ್ಯೆ " ಈ ಸುದ್ದಿ ಎಷ್ಟು ಗಂಟೆಗೆ ಪ್ರಸಾರ ಆಗುತ್ತೇರೀ?" ಎಂದು ಕೇಳಿದ್ದು ನೋಡಿದರೆ ಕೇವಲ ಕ್ಯಾಮರಾ ಮುಂದೆ ನಿಂತು ಪ್ರಚಾರ ಗಿಟ್ಟಿಸಿಕೊಳ್ಳುವುದಷ್ಟೇ ನಮ್ಮ ಉದ್ದೇಶ ಎಂಬುದು ಸ್ಪಷ್ಟವಾಗುತ್ತಿತ್ತು.

ಇಂತಹ ಸುದ್ದಿಯನ್ನು ವಾಹಿನಿಗಳು/ಮಾಧ್ಯಮಗಳು ಏನೋ ದೊಡ್ಡ ಘಟನೆ ನಡೆಯಿತು ಎಂಬಂತೆ ಭಿತ್ತರಿಸಬೇಕೇ...? ನಿಜವಾಗಿಯೂ ಪ್ರತಿಭಟನೆಯ ಹಿಂದಿರುವ ಉದ್ದೇಶ ಏನು ಎಂಬುದನ್ನು ಯಾಕೆ ನೀಡುತ್ತಿಲ್ಲ...ಅಥವಾ ಇಂದು ನೀಡಿಲ್ಲ...? ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಏನು ಮಾಡಿದೆಯೋ ಹೇಗೆ ಕಾರ್ಯನಿರ್ವಹಿಸುತ್ತಿದೆಯೋ ಎಂಬುದನ್ನು ಹಂತ ಹಂತವಾಗಿ ನೀಡುವ ಮಾಧ್ಯಮಗಳು ಅದರಲ್ಲೂ ಸುದ್ದಿ ವಾಹಿನಿಗಳು ಈ ವ್ಯವಸ್ಥಿತ ಸಂಚನ್ನು ಜನತೆಗೆ ತಿಳಿಸುವ ಕಾರ್ಯ ಮಾಡಬೇಕಾಗಿತ್ತು.

ಕುಮಾರ ಸ್ವಾಮಿ ಹಾಗೂ ಯಡಿಯೂರಪ್ಪರ ಆಣೆ ಪ್ರಮಾಣಗಳ ಕುರಿತಾಗಿ ಕ್ಷಣ ಕ್ಷಣಕ್ಕೆ ಮಾಹಿತಿ, ವಿಶೇಷ ಸಂದರ್ಶನ, ನೇರ ಪ್ರಸಾರಗಳ ಕಾರ್ಯಕ್ರಮಗಳನ್ನು ಒಟ್ಟಾರೆಯಾಗಿ ಇಡೀ ಮಾಧ್ಯಮ ಸಮೂಹ ವರದಿ ಮಾಡದೇ ಇದ್ದಿದ್ದಲ್ಲಿ ಈ ಘಟನೆ ಇಷ್ಟೊಂದು ಮಹತ್ವ ಪಡೆಯುತ್ತಿರಲಿಲ್ಲ.

ಪಕ್ಷಗಳ ನಡುವಣ ಇಂತಹ ಹೊಲಸು ರಾಜಕೀಯವನ್ನು ಮಾಧ್ಯಮಗಳು ವರದಿಮಾಡುವುದನ್ನು ಒಂದಷ್ಟುಕಾಲ ನಿಲ್ಲಿಸಿದ್ದೇ ಆದಲ್ಲಿ ಈ ರಾಜಕೀಯ ಫುಡಾರಿಗಳ ಕೆಟ್ಟ ಚಾಳಿಗೆ ಕಡಿವಾಣ ಬೀಳುವುದರಲ್ಲಿ ಸಂದೇಹವೇ ಇಲ್ಲ...

1 comments:

Anonymous said...

Madhyamada naduve oggattu ideya.. hogli patrakarthara naduve oggattu ideya.. boycott maadteeve andre.. yaraadru obru scoop antha suddi maadiye bidthare.. !!!!

umesh kumar

Post a Comment