ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಎಸ್ಕ್ಲೂಸಿವ್...
ಧರ್ಮಸ್ಥಳ: ಆಣೆ ಪ್ರಮಾಣದ ಹೆಸರಿನಲ್ಲಿ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಮಾಜಿ ಮತ್ತು ಹಾಲಿ ಸಿ.ಎಂ. ಸೋಮವಾರ ಆಗಮಿಸಿದ್ದಾರೆ. ಮಾಜಿ - ಹಾಲಿಗಳ ಮಧ್ಯೆ ಏನೇ ಕೆಸರೆರಚಾಟಗಳು ನಡೆದಿರಲಿ ಆದರೆ ಅವರ ಹಾಗೂ ಅವರ ಪಕ್ಷ , ಬೆಂಬಲಿಗರ ವರ್ತನೆಯಿಂದಲೇ ಅವರವರ ಸಂಸ್ಕಾರಗಳು ಗೊತ್ತಾಗುತ್ತಿದ್ದುದು ಮಾತ್ರ ವಿಶೇಷ.


ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 9.15ನಿಮಿಷಕ್ಕೆ ಸರಿಯಾಗಿ ಶ್ರೀ ಕ್ಷೇತ್ರದ ಸನ್ನಿಧಿ ಅತಿಥಿ ಗೃಹದಿಂದ ತನ್ನ ಬೆಂಬಲಿಗ ಶಾಸಕ,ಸಚಿವರೊಂದಿಗೆ ವಿಶೇಷ ಬಸ್ಸಿನ ಮೂಲಕ ಕ್ಷೇತ್ರಕ್ಕೆ ಬಂದಿಳಿಯುವ ಸಂದರ್ಭದಲ್ಲಿ ಅತ್ಯಂತ ಶಿಸ್ತುಬದ್ಧ ಕಾರ್ಯಕರ್ತರು, ಹಾಗೂ ಪಕ್ಷದ ಬೆಂಬಲಿಗರು ಯಾವುದೇ ರೀತಿಯ ಗೊಂದಲಗಳಿಲ್ಲದೆ ಉಪಸ್ಥಿತರಿದ್ದು, ಸಿ.ಎಂ. ಅವರನ್ನು ಬರಮಾಡಿಕೊಂಡು ಕ್ಷೇತ್ರದೊಳಕ್ಕೆ ಕರೆದೊಯ್ದರು. ಏತನ್ಮಧ್ಯೆ ಜೆ.ಡಿ.ಎಸ್ ಕಾರ್ಯಕರ್ತರು, ಬೆಂಬಲಿಗರ ಗುಂಪೊಂದು ಯಡಿಯೂರಪ್ಪ ಅವರ ವಿರುದ್ಧ ತೀವ್ರ ಪ್ರತಿಭಟನೆ ಕೈಗೊಂಡಿತು. ಮಾತ್ರವಲ್ಲದೆ ಕೆಟ್ಟ ಶಬ್ಧಗಳನ್ನು ಬಳಸಿ ಧಿಕ್ಕಾರ ಕೂಗಿ ಗೊಂದಲ ಸೃಷ್ಟಿಗೆ ಆಸ್ಪದವೊದಗಿಸಿಕೊಟ್ಟಿತು. ಪೋಲೀಸರ ಮಧ್ಯ ಪ್ರವೇಶದ ನಡುವೆಯೂ ಪ್ರತಿಭಟನೆ ಮುಂದುವರಿದಿತ್ತು...

ಮಧ್ಯಾಹ್ನ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಸಂದರ್ಭದಲ್ಲಿ ಜೆ.ಡಿ.ಎಸ್.ಕಾರ್ಯಕರ್ತರು,ಮುಖಂಡರು ಆಗಮನಕ್ಕೂ ಮುನ್ನ ಕ್ಷೇತ್ರದ ಮುಂದೆ ಜಮಾಯಿಸಿದ್ದರು. ಕುಮಾರ ಸ್ವಾಮಿ ಆಗಮನಕ್ಕೂ ಮುನ್ನ ಸುಮಾರು ಅರ್ಧಗಂಟೆಗೂ ಮೊದಲೇ ಕಾರ್ಯಕರ್ತರ ಜೈಕಾರ, ಯಡಿಯೂರಪ್ಪ ಅವರ ವಿರುದ್ಧದ ತೀವ್ರ ಧಿಕ್ಕಾರಗಳು ಮುಗಿಲು ಮುಟ್ಟಿದ್ದವು.
ಮಧ್ಯಾಹ್ನ 12.20ರ ಸುಮಾರಿಗೆ ಕುಮಾರ ಸ್ವಾಮಿ ಕಾರಿನಲ್ಲಿ ಬಂದಿಳಿಯುತ್ತಿದ್ದಂತೆಯೇ ಕಾರ್ಯಕರ್ತರು ಅವರನ್ನು ಮುತ್ತಿ ಜೈಕಾರ ಹಾಕಿದರು. ಹಾಗೂ ಅವರೊಂದಿಗೆ ದೇವಳದೊಳಗೆ ಪ್ರವೇಶಿಸಲು ಮುಂದಾದರು. ತದನಂತರ ಮಾಧ್ಯಮದವರನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ವೇದಿಕೆಯೇರಿದ ಕಾರ್ಯಕರ್ತರು ಆ ಸಂದರ್ಭದಲ್ಲೇ ಕುಮಾರ ಸ್ವಾಮಿಯವರನ್ನು ಸನ್ಮಾನಿಸುವುದಕ್ಕೂ ಮುಂದಾಗಿ ಗೊಂದಲದ ವಾತಾವರಣಕ್ಕೆ ಕಾರಣರಾದರು. ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿ ಜೈಕಾರಗಳನ್ನು ಹಾಕುತ್ತಾ ತೀವ್ರ ಅಡಚಣೆಗೆ ಕಾರಣರಾದರು. ಒಟ್ಟಾರೆಯಾಗಿ ಜೆ.ಡಿ.ಎಸ್ ಕಾರ್ಯಕರ್ತರ ಅಶಿಸ್ತಿನ ವರ್ತನೆ ಮಾಧ್ಯಮ ವಲಯ ಹಾಗೂ ಪೋಲೀಸ್ ಇಲಾಖೆಯ ಕೆಂಗಣ್ಣಿಗೆ ಕಾರಣವಾಗುವಂತಾಯಿತು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ತನ್ನ ಎಂದಿನ ಚಾಳಿ ಮುಂದುವರಿಸಿದರು. ಮತ್ತೆ ಮುಖ್ಯಮಂತ್ರಿಗಳನ್ನು ಕೆಣಕುವ, ಸರಕಾರದ ಮೇಲೆ ಗೂಬೆಕೂರಿಸುವ ಕಾರ್ಯವನ್ನು ಮಾಡಿದರು. ಧರ್ಮಸ್ಥಳದ ಮಂಜುನಾಥನ ಸನ್ನಿಧಿಯ ಮುಂಭಾಗದಲ್ಲಿ ರಾಜಕೀಯದ ಮಾತುಗಳನ್ನಾಡುವ ಮೂಲಕ ಮಾಜಿ ಮುಖ್ಯಮಂತ್ರಿಗಳು ತಮ್ಮ ಕೆಟ್ಟ ಚಾಳಿಯನ್ನು ಜನತೆಯೆದುರು ಪ್ರದರ್ಶಿಸಿದರು.

2 comments:

prasca said...

ನಿನ್ನೆ ಸಂಜೆ ೫ ಗಂಟೆ ಸುಮಾರಿಗೆ ಯಡಿಯೂರಿನಿಂದ ಮುಂದೆ ನೆಲ್ಲಿಗೆರೆಗೆ ತಿರುಗುವ ದಾರಿಯಲ್ಲಿ ಚೆನ್ನಿಗಸ್ವಾಮಿಯ ಬೆಂಬಲಿಗರ ಆಟಾಟೋಪ ಮೇರೆ ಮೀರಿತ್ತು. ಅಕಾರಣವಾಗಿ ಹೆದ್ದಾರಿಗೆ ತಡೆಯೊಡ್ಡಿ ನಿಂತು ಸಂಚಾರ ಅಸ್ತವ್ಯಸ್ತಗೊಳಿಸಿದ್ದು ನೋಡಿ ಕೋಪ ಬರುತ್ತಿತ್ತು, ಆದರೇನು ಬಡವನ ಕೋಪ ದವಡೆಗೆ ಮೂಲ ಅಂತಿದೆಯಲ್ಲ ಗಾದೆ. ಛೇ ಅದೇನೂಂತ ಇವ್ರೆಲ್ಲ ಜನಪ್ರತಿನಿಧಿಗಳೋ ಆ ಮಂಜುನಾಥನನ್ನು ಕಾಪಾಡುವವರ್ಯಾರು?

Anonymous said...

ಶಿಸ್ತು - ಅಶಿಸ್ತಿನ ಪರಮಾವಧಿ...!!! ಓದುವಾಗ ಕಳೆದ ವರ್ಷ 22 ಮೇ 2010 ರ ಮಂಗಳೂರಿನ ವಿಮಾನ ದುರ್ಘಟನೆಯ ನಿಮ್ಮ Live Coverage ನೆನಪಿಗೆ ಬಂತು.

-ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್.

Post a Comment