ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಧರ್ಮಸ್ಥಳ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನ್ನೊಂದಿಗೆ ಸಂಧಾನಕ್ಕೆ ಅವರ ಜನರೊಬ್ಬನನ್ನು ಕಳುಹಿಸಿದ್ದು, ಹಾಗೂ ಯಾವುದೇ ರೀತಿಯ ಹಗರಣ, ರಾಜ್ಯಾಡಳಿತಕ್ಕೆ ತೊಡಕು ಮಾಡಬಾರದೆಂಬ ಸಂಧಾನ ನಡೆಸಿದ್ದು ಸತ್ಯ ಸತ್ಯ ಸತ್ಯ. ಈ ಬಗ್ಗೆ ಧರ್ಮಸ್ಥಳದ ಮಂಜುನಾಥರನ ಸನ್ನಿಧಿಯಲ್ಲಿ ಭಕ್ತಿಪೂರ್ವಕವಾಗಿ ಮನಸ್ಸಿನಲ್ಲೇ ಪ್ರಮಾಣ ಮಾಡಿದ್ದಾಗಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ತಿಳಿಸಿದ್ದಾರೆ.

ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿದ ಅವರು ಮಂಜುನಾಥನ ದರ್ಶನಪಡೆದು ಮಾಧ್ಯಮದವರೊಂದಿಗೆ ಮಾತನಾಡಿದರು. ಯಡಿಯೂರಪ್ಪ ಮಾತಿಗೆ ತಪ್ಪಿದ್ದಾರೆ. ಅವರ ಸವಾಲಿಗೆ ಸ್ಪಂದಿಸಿ ತಾನು ಈ ಕ್ಷೇತ್ರಕ್ಕಾಗಮಿಸಿದ್ದೇನೆ.ಆದರೆ ಯಡಿಯೂರಪ್ಪ ಅವರು ಪಲಾಯನ ಮಾಡಿದ್ದಾರೆ. ತಮ್ಮ ಮಾತಿಗೆ ತಪ್ಪಿ ನಡೆದಿದ್ದಾರೆ. ವಚನ ಭ್ರಷ್ಟತೆಯನ್ನು ಮೆರೆದಿದ್ದಾರೆ ಎಂದು ಕುಮಾರ ಸ್ವಾಮಿ ಹೇಳಿದರು.


ಯಡಿಯೂರಪ್ಪ ನೇತೃತ್ವದ ಸರಕಾರ ಹಾಗೂ ಅವರ ವಿವಿಧ ಹಗರಣಗಳ ಕುರಿತ ಸವಿವರ ಮಾಹಿತಿಯುಳ್ಳ ಪತ್ರವೊಂದನ್ನು ಸನ್ನಿಧಾನಕ್ಕೆಹಾಗೂ ಪೂಜ್ಯ ಹೆಗ್ಗಡೆಯವರಿಗೆ 19ರಂದು ಕಳುಹಿಸಿರುವುದಾಗಿ ತಿಳಿಸಿದ ಕುಮಾರ ಸ್ವಾಮಿ ಮಾಧ್ಯಮದ ಮುಂದೆ ಪತ್ರ ಬಹಿರಂಗ ಪಡಿಸಿದರು.
ತಮ್ಮ ರಾಜಕೀಯ ದುರುದ್ದೇಶವನ್ನು ಧಾರ್ಮಿಕತೆಯೊಂದಿಗೆ ಯಡಿಯೂರಪ್ಪ ಬೆರೆಸಿದ್ದು ಸರಿಯಲ್ಲ ಎಂದು ಕಮಾರ ಸ್ವಾಮಿ ಹೇಳಿದರು.

0 comments:

Post a Comment