ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಮಳೆಗಾಲ ಪ್ರಾರಂಭಗೊಂಡಿದೆ. ತುಂತುರು ಮಳೆಯೊಂದಿಗೆ ಇದೀಗ ಚಾರಣ, ಪ್ರವಾಸದ ಮೋಜು ಬೇರೆಯೇ. ಜೂನ್ ಆರರಂದು ಜಿಟಿ ಜಿಟಿ ಮಳೆಯ ನಡುವೆ ಮುಳ್ಳಯ್ಯನ ಗಿರಿ ಚಾರಣ ನಡೆಸಿದ್ದು ರೋಚಕ ಅನುಭವ.ಕರ್ನಾಟಕದ ಅತಿ ಎತ್ತರದ ಗಿರಿಶಿಖರ ಎಂದು ಖ್ಯಾತಿ ಪಡೆದಿರುವ ಮುಳ್ಳಯ್ಯನಗಿರಿಯು 6,330 ಆಡಿ ಎತ್ತರವಿದ್ದು ಪಶ್ಚಿಮ ಘಟ್ಟದ ಬಾಬಾ ಬುಡನ್ ಗಿರಿ ಶಿಕರಗಳ ಸಾಲಿಗೆ ಸೇರುತ್ತದೆ. ಬೆಟ್ಟದ ತುದಿಯಲ್ಲಿ ಮುಳ್ಳಯ್ಯನ ದೇವಸ್ಥಾನ ಹಾಗೂ ಮಠವಿದೆ. ಚಾರಣಿಗರಿಗೆ ಮುಳ್ಳಯ್ಯನಗಿರಿ ಪ್ರಶಸ್ತವಾದ ಸ್ಥಳ.

ಚಿಕ್ಕಮಗಳೂರಿನಿಂದ ಬೆಟ್ಟದ ಬುಡಕ್ಕೆ ಬಸ್ ಸೌಕರ್ಯ ಇದ್ದು, ತದನಂತರ "ಸರ್ಪನ ದಾರಿ" ಎಂದು ಕರೆಯಲಾಗುವ ಕಡಿದಾದ ಕಾಲುಹಾದಿಯಲ್ಲಿ ನಡೆದು ಬೆಟ್ಟದ ತುದಿ ತಲುಪಬೇಕು. ಮುಳ್ಳಯ್ಯನ ಗಿರಿಯ ಮೇಲಿನಿಂದ ಸಿಗುವ ವಿಹಂಗಮ ನೋಟ ಅತ್ಯಂತ ಆಹ್ಲಾದಕರ.

ಮಳೆಗಾಲದಲ್ಲಿ ಮೋಡದೊಂದಿಗೆ ಆಡುತ್ತಾ ಕುಳಿರ್ಗಾಳಿಯ ಸವಿ ಸವಿಯುತ್ತಾ ಬೆಟ್ಟವೇರುವುದೆಂದರೆ ಅದರ ಮಜಾ ಬೇರೇನೇ...ಕ್ಷಣ ಕ್ಷಣಕ್ಕೆ ನೋಡ ನೋಡುತ್ತಿದ್ದಂತೆಯೇ ಎದುರಿಗಿರುವ ಬೆಟ್ಟ ಮೋಡದೊಳಗೆ ಮಾಯವಾಗುವ ಪರಿ ವರ್ಣಿಸಲದಳ.ತಡಯಾಕೇ ...ನೀವೂ ಏರಿ ಬನ್ನಿ ಮುಳ್ಳಯ್ಯನ ಗಿರಿಯನ್ನೊಮ್ಮೆ...

- ಟೀಂ ಈ ಕನಸು.

0 comments:

Post a Comment