ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಎನ್.ಸಿ.ಸಿ.ವಾರ್ಷಿಕ ಶಿಬಿರದಲ್ಲಿ ವನಮಹೋತ್ಸವ
ಮೂಡಬಿದಿರೆ: 18ನೆಯ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಮಂಗಳೂರು ಇದರ ಸಂಯುಕ್ತ ವಾರ್ಷಿಕ ವಿಶೇಷ ಶಿಬಿರ ಮೂಡಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ ನಲ್ಲಿ ಪ್ರಾರಂಭಗೊಂಡಿದ್ದು ವಿದ್ಯಾರ್ಥಿಗಳು ಗಾಂಧೀನಗರದ ಸರಕಾರಿ ಶಾಲಾ ವಠಾರದಲ್ಲಿ ಸಾಲುಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ನಡೆಸಿದರು. ಕ್ಯಾಂಪ್ ಕಮಾಂಡಂಟ್ ಲೆಫ್ಟಿನೆಂಟ್ ಕರ್ನಲ್ ಅಲೋಕ್ ಪರಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಮಹಾವೀರ ಕಾಲೇಜಿನ ಕ್ಯಾ.ರಾಧಾಕೃಷ್ಣ ಶೆಟ್ಟಿ ,ಅತಿಥೇಯ ಆಳ್ವಾಸ್ ಕಾಲೇಜಿನ ಲೆ.ಡಾ.ರಾಜೇಶ್ ಬಿ, ಎಸ್.ವಿ.ಎಸ್ ಬಂಟ್ವಾಳದ ಲೆ.ಸುಂದರ್, ತುಂಬೆ ಪದವಿಪೂರ್ವ ಕಾಲೇಜಿನ ಫಸ್ಟ್ ಆಫೀಸರ್ ಅಬ್ದುಲ್ ಕಬೀರ್ , ಪಾದುವ ಪ್ರೌಢಶಾಲೆಯ ಫಸ್ಟ್ ಆಫೀಸರ್ ಸ್ಟ್ಯಾನಿ ತಾವ್ರೋ, ಮೂಡಬಿದಿರೆ ಜೈನ್ ಪದವಿಪೂರ್ವ ಕಾಲೇಜಿನ ಫಸ್ಟ್ ಆಫೀಸರ್ ಸುಧಾ ಮತ್ತು ಮೂಡಬಿದಿರೆ ರೋಟರಿ ಹೈಸ್ಕೂಲಿನ ಸೆಕೆಂಡ್ ಆಫೀಸರ್ ಗಜಾನನ ಮರಾಠೆ ಉಪಸ್ಥಿತರಿದ್ದರು.0 comments:

Post a Comment