ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:59 PM

ಒಂದು ಸ್ವಗತ...

Posted by ekanasu

ಯುವಾ...

ಹಾಯ್ ಅಪರಿಚಿತೆ...
ಇನ್ನೇನೆಂದು ಕರೆಯಲಿ ನಿನ್ನ... ನಿನ್ನ ಹೆಸರನ್ನಿಡಿದು ಕೂಗುವ ಆಸೆ ನನ್ನದು...


ಅದನ್ನರಿಯದ ನಾ ಹೀಗೆ ಕರೆದನೆಂದು ಬೆಸರಿಸದಿರು. ನಿನ್ನ ನಾ ಯಾವಾಗ ನೋಡಿದೆನೋ ಸರಿಯಾಗಿ ನನಗೆ ನೆನಪಿಲ್ಲ. ಆ ದಿನದಿಂದಲೆ ನಾನು ಬದಲಾಗಿದ್ದೇನೆ ಎಂದೆನಿಸಿದೆ. ಏನು ನಿನ್ನ ಮಾಯೆ? ತುಸು ಲೇಟಾಗಿಯೆ ಎದ್ದು ಅಪರೂಪಕ್ಕೆ ಕಾಲೆಜ್ ಕಡೆ ಹೆಜ್ಜೆ ಹಾಕೊ ನನಗೆ ನಿನ್ನ ದರ್ಶನ ಭಾಗ್ಯವಾದದ್ದು ಯಾವ ಜನ್ಮದ ಪುಣ್ಯವೊ ತಿಳಿದಿಲ್ಲ. ಆ ದಿನದಿಂದ ನಿನ್ನ ನೆನಪಲ್ಲೆ ಕಳೆದ ರಾತ್ರಿಗಳೆಷ್ಟೋ ಅದು ಲೆಕ್ಕವಿಲ್ಲ. ನೀ ಸ್ವಲ್ಪ ತಪ್ಪಿಸಿಕೊಂಡರು ನನ್ನ ಕಣ್ಣುಗಳು ಸಹ ನಿನ್ನನ್ನೆ ಹುಡುಕುತ್ತವೆ. ಮನಸ್ಸು ನಿನ್ನ ಸ್ನೇಹವನ್ನು ಬಯಸುತ್ತಲಿದೆ. ನೀ ಮುಡಿದ ಮಲ್ಲಿಗೆ ಹೂವಿನ ಸುವಾಸನೆಗಾಗಿ ನನ್ನ ಮೂಗು ಹಪಹಪಿಸುತ್ತಿದೆ. ನಿನ್ನಲಿರುವ ಆ ಮುಗ್ದತೆಗೆ ನಾ ಮಾರುಹೋಗಿದ್ದೇನೆ ಗೆಳತಿ. ನೀ ಯಾರೆಂದು ನಾ ಅರಿಯೆ ಆದರೂ ನಿನ್ನ ಕಣ್ಣಿಂದಲೇ ನಿನ್ನ ಸ್ವಭಾವವನ್ನು ಬಲ್ಲೆ. ನಿನ್ನನ್ನು ನೋಡುತ್ತಲಿದ್ದರೆ ಸೂರ್ಯ ನಿದ್ರೆಗೆ ಜಾರಿದ್ದು ನನಗರಿಯದು. ಹುಣ್ಣಿಮೆ ಚಂದಿರನಂತ ದುಂಡು ಮುಖದಲ್ಲಿ ಕೆಂಪು ಕುಂಕುಮವನ್ನಿಟ್ಟು, ನೀ ನನ್ನ ನೋಡುತ್ತಲಿದ್ದರೆ ನನಗದೋ ಕವಿವಿಸ್ಮಯ.

ನಿನ್ನ ಕೈಯಲ್ಲಿ ಕಚಗುಳಿಯಿಡುತ್ತ ಕುಣಿಯುತ್ತಿರುವ ಆ ಬಳೆಗಳು ಎಷ್ಟು ಪುಣ್ಯ ಮಾಡಿದ್ದವೋ? ಆ ಬಳೆಗಳ ಶಬ್ಥ ಇನ್ನು ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ. ಪದೆ ಪದೇ ನಿನ್ನ ಮುಖವನ್ನು ಮುಚ್ಚುವ ಆ ನಿನ್ನ ಉದ್ದನೆಯ ಕೂದಲಂತೂ ಎಷ್ಟು ಸೊಗಸು. ನೋಡಲು ಎರಡು ಕಣ್ಣು ಸಾಲದು. ಅಂದ ಮಾತ್ರಕ್ಕೆ ನಿನ್ನ ನೋಡಲು ಬೇರೆ ಕಣ್ಣಿಗೆ ಅವಕಾಶ ನೀಡದಿರು ಮನದರಸಿ. ನೀನಿಲ್ಲದ ಜೀವನ ಉಹಿಸಲು ಅಸಾಧ್ಯ. ನನ್ನ ಹೃದಯವನ್ನು ನಿನ್ನ ಕೈಗಿಟ್ಟು ದೇಹವನ್ನು ಹಗುರ ಮಾಡಿಕೋಳ್ಳುವ ಆಸೆ ನನ್ನದು. ಒಂದೇ ನೋಟದಲ್ಲಿ ನನ್ನ ಮನಸ್ಸನ್ನು ಕದ್ದ ಚೆಲುವೆ ನೀ. ನನ್ನ ಉಸಿರಿನಲ್ಲೆ ಬೆರತು ಹೋಗಿರುವ ಅನುಭವ. ನಿನ್ನನ್ನು ಕಂಡಾಗ ನನಗೆ ತೀಳಿಯದಂತೆ ನಾನು ಮನಸಿನಲ್ಲೆ ಕುಣಿಯ ತೊಡಗುವೆ. ನಾ ದೇವರಿಗಿಂತ ಅಧಿಕ ಬಾರಿ ನಿನ್ನನ್ನು "ಪೂಜಿಸಿರುವೆ. ನಿನ್ನ ಕಳ್ಳ ನೋಟವೊ ನನ್ನ ಎದೆಯಲ್ಲಿ ಅವಿತು ಹೋಗಿದೆ. ಮನಸ್ಸು ನಿನ್ನ ಸನಿಹವನ್ನು ಬಯಸುತ್ತಲೇ ಇದೆ. ಬರವಣಿಗೆಯಲ್ಲಿಯೇ ನಿನ್ನೊಂದಿಗೆ ಮಾತನಾಡುವ ತವಕ ದಿನೇ ದಿನೇ ಹೆಚ್ಚಾಗುತ್ತಲಿದೆ. ಬಾ ಕೇಳು ಗೆಳತಿ.....

ಆ ನಿನ್ನ ಕಣ್ಣಲ್ಲಿ ಅದೇನು ಅಂತಾ ಸೆಳೆತವೋ.. ಗೊತ್ತಿಲ್ಲ. ಆದ್ರೆ ನಾ ಮಾತ್ರ ನಿನ್ನ ಮೋಹದ ಆ ಕಣ್ಗಳಿಗೆ ಬಹು ಬೇಗ ಮನಸೋತು ಬಲಿಬೀಳುವ ಕುರಿಯಾಗಿಬಿಟ್ಟೆ"ನಲ್ಲೆ" ಕಣ್ಣಿಂದ ಶುರುವಾದ ಪ್ರೀತಿ, ಕಣ್ಣೊಳಗೆ ಕುಳಿತು ಕದ್ದು ನೋಡುತ್ತಿದೆ. ಮನಸ್ಸು ಕೂಡಾ ನಿನ್ನ ಈ ಪ್ರೀತಿಗೆ ಒಪ್ಪಿಗೆ ನೀಡಿದ್ದರಿಂದ ಯಾಕೋ ಹಾಗೆ ನೋಡ್ತಾ ಇದಿಯಾ ಅಂಥಾ ಕೇಳೊ ಹಕ್ಕು ನನಗಿಲ್ಲ. ನಿಂಜೊತೆ ಎಷ್ಟು ಹೊತ್ತು ಮನಸಿನಲ್ಲೆ ಮಾತಾಡಿದ್ರು ಮನದ ಮಾತು ಭರಿಸದು. ಅದಕ್ಕೆ ಮಾತಿಗಿಂತ ಈ ಪತ್ರವೇ ಮನಸಿಗೆ ಹೆಚ್ಚು ಪರಿಣಾಮ ಬೀರಬಹುದೆಂಬ ಕಲ್ಪನೆಯಿಂದ ಇಷ್ಟೆಲ್ಲ ಬರಿಯಬೇಕಾಗಿಬಂತು.

ಪ್ರೀತಿಯಿಂದ,

ಅಚ್ಯುತಕುಮಾರ

4 comments:

Anonymous said...

Nimma writing nodi kanditha "Aparichite" Parichite agtle anta anistade

manju said...

Nice

ಮೌನರಾಗ... said...

love at first sight?

Unknown said...

hi broter
totendra s makal
ma journalisam student
9886456417

Post a Comment