ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:09 PM

ಕಲ್ಯಾಳ ಜಲಪಾತ

Posted by ekanasu

ವಿಶೇಷ ವರದಿ

ಕೊಡಗು ನಿಸರ್ಗ ಕಾವ್ಯಕ್ಕೊಂದು ಹೆಸರು. ಹಿತ ಮಿತವಾದ ವಾತಾವರಣ...ಸೌಂದರ್ಯ ಕೊಡಗಿನಲ್ಲಿದೆ. ಕೊಡಗಿನ ಕಾಫಿ ತೋಟಗಳನ್ನು ನೋಡುವುದೇ ಒಂದು ಅಂದ... ಈ ತೋಟಗಳ ನಡು ನಡುವೆ ರಭಸದಿಂದ ಹಾರಿ ಮೋಹಕ ಸೌಂದರ್ಯ ಸೃಷ್ಟಿಸುವ ಹಲವೊಂದು ಜಲಲ ಜಲಧಾರೆಗಳು ಕಂಡು ಬರುತ್ತಿವೆ. ಮಳೆಗಾಲದಲ್ಲಿ ಈ ಎಲ್ಲಾ ಜಲಪಾತಗಳು ಮೈ ತುಂಬಿ ತಮ್ಮ ಮೋಹಕ ಸೌಂದರ್ಯವನ್ನು ಅನಾವರಣ ಗೊಳಿಸುತ್ತವೆ. ಈ ಮೋಹಕ ಜಲಧಾರೆ ಎಂತಹವರನ್ನೂ ಮೋಡಿ ಮಾಡದಿರದು...ಇಂತಹ ಜಲಧಾರೆಯತ್ತ ಒಂದು ನೋಟ ಇಲ್ಲಿದೆ.ಮಡಿಕೇರಿಯಿಂದ ಮಂಗಳೂರಿಗೆ ಸಾಗುವ ಹೆದ್ದಾರಿಯಲ್ಲಿ ಸಾಗುವುದೇ ಒಂದು ರೋಚಕ ಅನುಭವ. ಸುಮಾರು 23ಕಿ.ಮೀ ಸಾಗುವಷ್ಟರಲ್ಲಿ ದೂರದಲ್ಲಿ ಕಲ್ಯಾಳ ಜಲಪಾತ ಕಾಣಸಿಗುತ್ತದೆ. ಕಲ್ಯಾಳ ಜಲಪಾತಕ್ಕೆ ಸಾಗಲು ಕೊಯನಾಡು ಎಂಬ ಸಣ್ಣ ಹಳ್ಳಿಯಿಂದ ಬೆಟ್ಟದ ಹಾದಿ ಹಿಡಿಯಬೇಕು. ಈ ಹಾದಿಯಲ್ಲಿ ಮೇಲೇರಿ, ಮುಂದೆ ಹೋದಾಗ ಈ ಜಲಪಾತ ಎದುರಾಗುತ್ತದೆ. ಅಷ್ಟೊತ್ತಿಗಾಗಲೇ ನೀವು ಸುಮಾರು 5ಕಿ.ಮೀಟರ್ಗಳಿಗೂ ಅಧಿಕ ದೂರ ಕ್ರಮಿಸಿ ಆಗಿರುತ್ತದೆ. ಸಮರ್ಪಕ ಕಾಲು ಹಾದಿಯೂ ಇಲ್ಲ. ದುರ್ಗಮ ರಸ್ತೆಯಲ್ಲಿ ಸಾಗಬೇಕು. ಕಡಿದಾದ ಹಾದಿಯಲ್ಲಿ ಕೆಳಗಿಳಿಯಬೇಕು. ಒಂದೆಡೆ ಬೆಟ್ಟ ಏರಿದರೆ ಮತ್ತೆ ಕೆಲವೆಡೆಗಳಲ್ಲಿ ದುರ್ಗಮ ಹಾದಿಯಲ್ಲಿ ಕೆಳಗಿಳಿಯಬೇಕು. ಹೀಗೆ ಸಾಗಿದಾಗ ಸುಂದರ ಜಲಪಾತ ನಮ್ಮೆದುರು ತೆರೆದುಕೊಳ್ಳುತ್ತದೆ. 250 ಅಡಿಗಳಷ್ಟು ಮೇಲಿಂದ ಹಂತ ಹಂತವಾಗಿ ಧುಮುಕುವ ಈ ಜಲಧಾರೆ ಒಂದು ಹೊಸ ಅನುಭವ ನೀಡುತ್ತದೆ. ಮಳೆಗಾಲದಲ್ಲಿ ಜಲಪಾತ ವೀಕ್ಷಣೆಗೆ ಕೊಂಚ ಕಷ್ಟ. ಸೆಪ್ಟಂಬರ್ ನಂತರ ಈ ಜಲಪಾತ ವೀಕ್ಷಣೆಗೆ ಹಾದಿ ತುಸು ಸುಗಮವಾಗುತ್ತದೆ. ಅಂತೂ ಒಮ್ಮೆಯಾದರೂ ಈ ಜಲಪಾತ ನೋಡಲೇಬೇಕು.

0 comments:

Post a Comment