ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:20 PM

ಕಣ್ಣೀರ ಕನಸು

Posted by ekanasu

ಈ ಕನಸು ಅವಾರ್ಡ್

ಮನದ ನೆಲವೊಣಗಿ
ಮಳೆಹನಿಗಾಗಿ ಹಪಹಪಿಸಿ
ಕೊನೆಗೂ ಕಣ್ಣ ಬಾಂಧಳದಿಂದ
ಸೋನೆ ಸುರಿದೇ ಬಿಟ್ಟಿತು
ಅದೇ ಕಣೋ..."ಕಣ್ಣೀರು"


ಕಣ್ಣ ಬಟ್ಟಲಲಿ
ಬಣ್ಣ-ಬಣ್ಣಗಳು ಕಲೆತು
ಕಣ್ಣಂಚ ಕುಂಚದಲಿ
ನವಿರಾದ ಎಳೆ ಹೊರಳಿ
ಬಣ್ಣ-ಬಣ್ಣದ ಕಲೆಗೂ
ರಂಗೇರುತಿತ್ತು ಗೆಳೆಯಾ,
ಕೊನೆಗೂ ಚಿತ್ರವರಳಿದ್ದು
ಮಾತ್ರ ನೀರಿನಲ್ಲಿ!

- ವಿಸ್ಮಿತ ಎಡಮಮಗಲ

0 comments:

Post a Comment