ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಬಾಳೆಬರೆ ಘಾಟಿ. ಇದು ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಂಪರ್ಕ ಕಲ್ಪಿಸುವ ಒಂದು ಘಾಟಿ. ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಎಂಬ ಗ್ರಾಮದಿಂದ ಮೂರು ಕಿಲೋಮೀಟರ್ ಕ್ರಮಿಸಿದಾಗ ಹುಲಿಕಲ್ ಸಿಗುತ್ತದೆ. ಇದು ಘಾಟಿಯ ಆರಂಭದ ಹಾದಿ. ಈ ಕಾರಣಕ್ಕೆ ಹುಲಿಕಲ್ ಘಾಟಿ ಎಂದು ಪ್ರಸಿದ್ಧಿ ಪಡೆದಿದೆ.ಅನಘ್ರ್ಯ ವನ್ಯ ಸಂಪತ್ತು, ಪ್ರಾಣಿ ಪ್ರಬೇಧಗಳು ಇಲ್ಲಿವೆ. ಘಾಟಿಯ ಆರಂಭದಲ್ಲೇ ಸುಮಾರು ಮೂರು ಕಿಲೋಮೀಟರ್ ಕ್ರಮಿಸಿದಾಗ ರಸ್ತೆಯ ಪಕ್ಕದಲ್ಲೇ ಪುಟ್ಟ ಜಲಪಾತವೊಂದು ಸಿಗುತ್ತದೆ. 200 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತ ಮುಂದೆ ದಟ್ಟ ಅರಣ್ಯಗಳೊಳು ಸಾಗಿ ಸಾಗರ ಸೇರುತ್ತಾಳೆ. ಈ ಮಧ್ಯೆ ಅನೇಕ ದೃಶ್ಯ ಕಾವ್ಯಗಳ ಸೃಷ್ಠಿಗೆ ಕಾರಣಳಾಗುತ್ತಾಳೆ. ಇದೊಂದು ಸೌಂದರ್ಯಪೂರ್ಣ ಜಲಪಾತ. ಮಳೆಗಾಲದಲ್ಲಿ ಅಬ್ಬರದಿಂದ ಧಾರೆ ಧುಮುಕಿ ನೋಡುಗರನ್ನು ಮೋಡಿಮಾಡುತ್ತದೆ.

0 comments:

Post a Comment