ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:06 PM

ಅರ್ಧ ಚಂದ್ರಾಸನ

Posted by ekanasu

ವೈವಿಧ್ಯ
ಈ ಆಸನವು ಅರ್ಧ ಚಂದ್ರನ ಆಕಾರವನ್ನು ಹೋಲುವುದರಿಂದ ಈ ಹೆಸರನ್ನು ಇಡಲಾಗಿದೆ.
ಅಭ್ಯಾಸ ಕ್ರಮ :ಜಮಖಾನದ ಮೇಲೆ ತಾಡಾಸನಕ್ಕೆ ಬಂದು ತ್ರಿಕೋಣಾಸನದ ಸ್ಥಿತಿಗೆ ಬರಬೇಕು. ಆಮೇಲೆ ಬಲಪಾದದ ಮುಂದೆ ಒಂದು ಅಡಿ ದೂರದಲ್ಲಿ ಬಲ ಹಸ್ತವನ್ನು ಉಸಿರು ಬಿಡುತ್ತಾ ಊರಬೇಕು. ಆಮೇಲೆ ಎಡಕಾಲನ್ನು ಚಿತ್ರದಲ್ಲಿ ತೋರಿಸಿರುವಂತೆ ಮೇಲೆತ್ತಿ ತೊಡೆಯ ಮೇಲೆ ಎಡಕೈಯನ್ನು ಇರಿಸಿ, ಸಮತೋಲನ ಸ್ಥಿತಿಯಲ್ಲಿ ಸಮ ಉಸಿರಾಟದಲ್ಲಿ ಸ್ವಲ್ಪ ಹೊತ್ತು ಇದ್ದು ವಿರಮಿಸಬೇಕು. ಹಾಗೆ ಇನ್ನೊಂದು ಬದಿಯಿಂದ ಅಭ್ಯಾಸ ಮಾಡಬೇಕು.


ಉಪಯೋಗಗಳು :ಕಾಲಿನ ನರಗಳ ಸಮಸ್ಯೆ ಪರಿಹಾರಗೊಂಡು, ಬೆನ್ನಿನ ಜಾಗಕ್ಕೆ ಚೆನ್ನಾಗಿ ರಕ್ತಪರಿಚಲನೆ ಜರುಗಿ, ಬೆನ್ನು ನೋವು, ಸೊಂಟ ನೋವು ಪರಿಹಾರಗೊಳ್ಳುತ್ತದೆ. ದೇಹದ ಸಮತೋಲನ ಸ್ಥಿತಿಯನ್ನು ಕಾಪಾಡಲು ಬಹಳ ಸಹಕಾರಿ.

'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ

ಅಂತರರಾಷ್ಟ್ರೀಯ ಯೋಗ ತೀರ್ಪುಗಾರರು

0 comments:

Post a Comment