ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಸ್ಪೆಷಲ್
ಇತ್ತೀಚೆಗೆ ಒಂದು ಹೊಸ ಟ್ರೆಂಡ್ ಶುರುವಾಗಿದೆ. ಟಿವಿಯಲ್ಲಿ ಮನೆ ಹುಡುಗನೋ ಹುಡುಗಿಯೋ ಹಾಡಿದನೆಂದರೋ , ಒಂದು ಸಲ ಅವನ ಪಿಕ್ಚರ್ ಟಿವಿಲಿ ಬಂದಿತೆಂದರೆ ಸರಿ. ಆತನಲ್ಲಿ ನಿಜಕ್ಕೂ ಪ್ರತಿಭೆ ಇದೆ ಅನ್ನೋ ಒಂದು ಭ್ರಮೆ ಹೆಚ್ಚಾಗುತ್ತಿದೆ.ಈ ಒಂದು ಅವಕಾಶಕ್ಕಾಗಿ ನಡೆಯುವ ಲಾಬಿ ಅದಂತೂ ಇನ್ನೂ ಯೋಚಿಸಬೇಕಾದ ಸಂಗತಿಯೇ ಆಗಿದೆ.ಒಂದು ಘಟನೆ ಹೀಗಿದೆ , ಆ ಹುಡುಗ ಸಾಮಾನ್ಯ ಹಾಡುಗಾರ. ಟಿವಿಯಲ್ಲಿ ಅದ್ಯಾವುದೋ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಆತ ಆಯ್ಕೆಯಾಗಿದ್ದಾನೆ ಎಂದು ಟಿವಿಯವರು ದೂರವಾಣಿ ಮೂಲಕ ಹೇಳುತ್ತಾರೆ.

ಆದರೆ ಆ ನಂತರದ ಬೆಳವಣಿಗೆಯಲ್ಲಿ ಈ ಹುಡುಗನಿಗೆ ಅವಕಾಶ ಸಿಗುವುದಿಲ್ಲ.ಕಾರಣ ಗೊತ್ತಿಲ್ಲ. ಇಲ್ಲಿ ಹುಡುಗನ ಮನೆಯವರು ಊರಲ್ಲೆಲ್ಲಾ ಪ್ರಚಾರ ಮಾಡಿದ್ದಾರೆ , ಸ್ಥಳೀಯ ಪತ್ರಕೆಯಲ್ಲೂ ಫೋಟೋ ಸಹಿತ ಹುಡುಗನ ವರದಿಯೂ ಬಂದಿದೆ. ಅತ್ಯಂತ ಪ್ರತಿಭಾವಂತ ಎಂದು ಬಿಂಬಿಸುವ ಪ್ರಯತ್ನ ಮನೆಯವರಿಂದ ನಡೆಯಿತು. ಹೀಗಿರುವಾಗ ಹುಡುಗನಿಗೆ ಟಿವಿಯಲ್ಲಿ ಹಾಡುವ ಅವಕಾಶ ಸಿಗುವುದಿಲ್ಲ ಎಂಬ ಪರಿಸ್ಥಿತಿ ಬಂದಾಗ ಮನೆಯವರಿಗೆ ಸಿಟೋ ಸಿಟ್ಟು.


ಚಾನೆಲ್ನವರಿಗೆ ಫೋನು ಮಾಡಿ ಗದರಿಸುವುದು ಏನು , ಸ್ಥಳೀಯ ವರದಿಗಾರರಲ್ಲಿ ಹೇಳುವುದು ಏನು ? ಬೇರೆ ಚಾನೆಲ್ನವರಿಗೆ ಹೇಳಿ ಅವಕಾಶ ಸಿಕ್ಕಿಲ್ಲ , ವಂಚನೆ ಆಗಿದೆ ಎಂದೆಲ್ಲಾ ಹೆಳಿ ಅಂತೂ ಕೊನೆಗೂ ಅವಕಾಶ ಪಡೆದುಕೊಂಡು ಫೋಸು ಕೊಟ್ಟದ್ದು ಇನ್ನೂ ಹಸಿಹಸಿಯಾಗೇ ಇದೆ.
ಇದರ ಅರ್ಥ ಏನು ಎಂದು ಈಗ ವಿವರಿಸಬೇಕಾದ್ದಿಲ್ಲ. ಇಂದಿನ ವಾತಾವರಣವೇ ಹಾಗೆ. ಅದೊಂದು ಅವಕಾಶ ಸಿಕ್ಕರೆ ಏನೋ ಒಂದು ಜೀವನದಲ್ಲಿ ಸಾಧಿಸಿದಂತೆ ಅನ್ನೋ ಭ್ರಮೆ ಹೆಚ್ಚಾಗುತ್ತಾ ಇದೆ. ಹೀಗಾಗಿ ಟಿವಿಗಳಲ್ಲಿ ರಿಯಾಲಿಟಿ ಶೋಗಳು ಹೆಚ್ಚುತ್ತಲೇ ಇದೆ.ಇತ್ತೀಚೆಗಂತೂ ಇದೊಂದು ದಂಧೆ ಅನ್ನೋ ರೀತಿಯಲ್ಲಿ ಕಾಣಿಸುತ್ತಿದೆ. ಯಾಕೆಂದರೆ ಆ ಶೋಗಳಲ್ಲಿ ನಡೆಯುತ್ತಿರುವುದು ರಿಯಲ್ ಪ್ರದರ್ಶನವೋ ಅಥವಾ ರೀಲ್ ಪ್ರದರ್ಶನವೂ ಎಂದು ಅನಿಸುವಷ್ಟು. ಅಗತ್ಯವಿಲ್ಲದ ಸನ್ನಿವೇಶಗಳೂ ಅಲ್ಲಿ ಕಾಣಿಸುತ್ತದೆ. ಪ್ರತಿಭೆಯ ಅನ್ವೇಷಣೆಗೆ ಅಂತಹ ದಾರಿಗಳೂ ಬೇಕೇ ಎಂದು ಅನಿಸುತ್ತದೆ. ಹೀಗಾಗಿ ಇದೆಲ್ಲಾ ಪ್ರತಿಭೆಗಳ ಅನ್ವೇಷಣೆ ಅಲ್ಲ , ರಿಯಾಲಿಟಿಯ ಪ್ರದರ್ಶನವಂತೂ ಅಲ್ಲ. ಈ ಎಲ್ಲಾ ಕಾರಣಗಳಿಗೆ ಇಂದು ಇಂತಹ ಶೋಗಳು ಅರ್ಥ ಕಳೆದುಕೊಳ್ಳುತ್ತಿವೆ.

- ಮಹೇಶ್ ಪುಚ್ಚಪ್ಪಾಡಿ

0 comments:

Post a Comment