ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಸ್ಪೆಷಲ್
ಮಣ್ಣಿನಲ್ಲಿ ಚಿಕ್ಕ ಚಡ್ಡಿ ತೊಟ್ಟು ಗುದ್ದಾಡಿ! ತುಂಬಾ ಕಸವನ್ನು ಯಾವುದಾದರೂ ಸೈಕಲ್ ನಂತಹದ್ದಕ್ಕೆ ಹಾಕಿ ಎಳೆದುಕೊಂಡು ಹೋಗಿ... ಆಗಲೂ ಚಡ್ಡಿಯನ್ನೇ ಧರಿಸಿ! ಎಂದು ಹುಡುಗೀರ್ಗೆ ಹೇಳೋದು ಯಾವ ರೀತಿಯ ಪ್ರತಿಭಾ ಪ್ರದರ್ಶನ ಮಾರಾಯ್ರೆ? ಇಂತಹ ಕೊಳಕು ಚಟುವಟಿಕೆಗಳಿಂದ ಏನಾದರೂ ಪ್ರಯೋಜನ ಉಂಟಾ ? ಇದೆಲ್ಲಾ ಇಂದಾಗುತ್ತಿರುವುದು ಯಾವುದೋ ಆಂಗ್ಲ ಚಾನೆಲ್ ನಲ್ಲಲ್ಲ. ಬದಲಾಗಿ ನಮ್ಮ ಕನ್ನಡ ಚಾನೆಲ್ ಗಳಲ್ಲಿ ಎಂದರೆ ಎಂತಹ ನೋವು ಉಂಟಾಗುತ್ತದಲ್ಲವೇ?ಹಿಂದೀ ಚಾನೆಲ್ ಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿಬಿಟ್ಟಿವೆ!


ಹುಡುಗ ಹುಡುಗಿಯರನ್ನು ಡೇಟ್ ಮಾಡಿಸುತ್ತವೆ .ಪುಣ್ಯಕ್ಕೆ ಸೆಕ್ಸ್ ಒಂದನ್ನು ಮಾಡಿಸುವುದಿಲ್ಲ!.
ಚಾನೆಲ್ ವಿ, ಎಂ ಮೊದಲಾದವುಗಳು ರಿಯಾಲಿಟಿ ಶೋ ಹೆಸರಿನಲ್ಲಿ ಮುಕ್ತ ಲೈಂಗಿಕತೆಯನ್ನು ಪ್ರಚೋದಿಸುತ್ತವೆ. ಸುಮಾರು 20 - 25 ಯುವಕ ಯುವತಿಯರು ಒಂದಾಗಿ ಕುಳಿತು ಒಬ್ಬೊಬ್ಬರಾಗಿ ತಮ್ಮತಮ್ಮ ಉಡುಗೆಗಳನ್ನು ಕಳಚಿ ದೇಹ ಪ್ರದರ್ಶಿಸುವ ಪರಿ ಅಸಹ್ಯ ಮೂಡಿಸುತ್ತವೆ. ಪರಿವರ್ತನೆ ಜಗದ ನಿಯಮ. ಆದರೆ ಇದು ಪರಿವರ್ತನೆ ಅಲ್ಲ. ಕಾಲದ ಪ್ರಭಾವವೂ ಅಲ್ಲ. ವಿಕೃತ ಮನಸ್ಥಿತಿಯ ಮಂದಿ ಹಣಕ್ಕಾಗಿ ಸೃಷ್ಠಿಮಾಡಿರುವ ಕೊಳಕು. ಉಡುಗೆ ತೊಡುಗೆಗಳಲ್ಲಿ ಬದಲಾವಣೆಯಾದರೆ ವೈಚಾರಿಕತೆಯಲ್ಲಿ ಪರಿವರ್ತನೆಯಾದರೆ ಅದು ಪರಿವರ್ತನೆ. ಆದರೆ ಈ ರಿಯಾಲಿಟಿ ಶೋಗಳು ಅದ್ಯಾವವೂ ಅಲ್ಲ. ಪ್ರೇಕ್ಷಕನ ಮನವೆಂಬ ಮರ್ಕಟವನ್ನು ಸೆಳೆಯುವ ಹುನ್ನಾರ ಮಾಡಿವೆ. ಸಂಗೀತದ ಉತ್ತಮ ರಿಯಾಲಿಟಿ ಶೋಗಳೂ ಇವೆ. ಆದರೆ ಅದು ಬಹಳ ವಿರಳ.

-ಆದಿತ್ಯ ಭಟ್.

0 comments:

Post a Comment