ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಜಲಲ ಜಲಧಾರೆಗಳ ದರುಶನ...ಅದೊಂದು ಹರಸಾಹಸ ಕ್ರಿಯೆ...ಅಷ್ಟೊಂದು ಸುಲಭದ ಹಾದಿಯಲ್ಲ...ಕಾಡು ಮೇಡು ಸುತ್ತಿ , ಏರು ತಗ್ಗು ಹಾದಿಯಲ್ಲಿ ಸಾಗಿದಾಗ ಸುಸ್ತಾದ ದೇಹಕ್ಕೆ ನೀರ ಧಾರೆಯ ಹನಿಗಳ ಸಿಂಚನ...ಅದಾಗ ಸೃಷ್ಟಿ ಸೌಂದರ್ಯದ ಪ್ರತೀಕವಾದ ಪ್ರಕೃತಿಯ ಅನಾವರಣ. ತುಂತುರು ಹನಿಗಳ ಸಿಂಚನ... ಮೈ ಮನ ಪುಳಕ. ಜಲರಾಶಿಯ ಸೌಂದರ್ಯ ಎಂತಹವರನ್ನೂ ಮೋಡಿ ಮಾಡದಿರದು.ಮಳೆಗಾಳ ಬಂತೆಂದರೆ ಜಲಧಾರೆಗೆ ಯೌವನದ ಸ್ಪೂರ್ತಿ...! ಬಚ್ಚಿಟ್ಟುಕೊಂಡಿದ್ದ ಜಲಧಾರೆಗೆ ಯೌವನದ ಸೊಕ್ಕು...!ಜುಳು ಜುಳು ಸದ್ದು ಅಟ್ಟಹಾಸದ ಭೋರ್ಗರೆತ...! ಇದಕ್ಕೆ ಹಕ್ಕಿಗಳ ಇಂಚರ ನಾದಗಳ ಸಾಥ್.. ಹೀಗೆ ಜಲಪಾತದ ನೈಜ ಸೌಂದರ್ಯ ಎಂತಹವರ ಮನವನ್ನೂ ಮೋಡಿಮಾಡದಿರದು...

ಅತ್ಯಲ್ಪ ಆಯಸ್ಸು ಹೊಂದಿರುವ ಮಿನಿ ಜಲಧಾರೆಗಳು...ಪ್ರಕೃತಿ ಇದೇ ಒಂದು ಸೃಷ್ಟಿ ಕ್ರಿಯೆಯ ಅದ್ಭುತ. ಇದರೊಳಗೆ ಇನ್ನೇನೇನೂ ವಿಶೇಷಗಳು!... ಜುಳು ಜುಳು ಸದ್ದುಮಾಡುತ್ತಾ ಸಾಗುವ ಜಲಪಾತಗಳು, ತೊರೆಗಳು, ನದಿಗಳು ಹೀಗೆ ಇನ್ನನೇಕ.
ಇವು ಮಿನಿ ಜಲಪಾತಗಳು. ಇವುಗಳ ಆಯಸ್ಸು ಬಹಳ ಕಡಿಮೆ. ಮಿನಿ ಜಲಪಾತಗಳ ಆಯಸ್ಸು ಅತ್ಯಲ್ಪ. ಮಳೆಗಾಲ ಬಂತೆಂದರೆ ಈ ಜಲಪಾತಗಳು ಹುಟ್ಟುತ್ತವೆ. ತಮ್ಮ ವೈಭವವನ್ನು ಸೃಷ್ಟಿಸುತ್ತವೆ. ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಈ ಜಲಪಾತ ಒಂದು ಸಂತಸವನ್ನು ಮೂಡಿಸುತ್ತವೆ. ಮನಕ್ಕೆ ಉಲ್ಲಾಸ ನೀಡುತ್ತವೆ. ನಮ್ಮ ನಿಮ್ಮೆಲ್ಲರ ಮನೆಗಳ ಹಿಂದೆಯಿರುವ ಗುಡ್ಡದಿಂದ ಬೀಳುವ ಜಲಧಾರೆಗಳೋ... ಅಥವಾ ರಸ್ತೆ ಬದಿಗಳಲ್ಲಿರುವ ಗುಡ್ಡಗಳಿಂದ ಹರಿಯವ ನೀರ ಧಾರೆಯೋ ಇವೆಲ್ಲವೂ ಮಳೆಗಾಲದಲ್ಲಷ್ಟೇ ನಮಗೆ ಗೋಚರಿಸಲು ಸಾಧ್ಯ. ಅಂತೂ ಇವೂ ಒಂದು ಸುಂದರ ಭಾವನೆಗಳ ಸೃಷ್ಟಿಗೆ ಕಾರಣವಾಗುತ್ತವೆ.

0 comments:

Post a Comment