ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಬಿಸಿ ಬಿಸಿ ಕಾಫಿಯ ಮೋಜಿನೊಂದಿಗೆ ಕೊಡಗಿನಲ್ಲೊಂದು ರೌಂಡ್ ಹಾಕೋದು ಅಂದ್ರೆ ಏನ್ ಮಜಾ ಗೊತ್ತಾ... ಕೊಡಗು ಇದೊಂದು ದಕ್ಷಿಣದ ಕಾಶ್ಮೀರ. ಇಲ್ಲಿ ಕಾಫಿ, ಕಿತ್ತಳೆಗಳಿಗೆ ಪ್ರಸಿದ್ಧಿ. ಇಲ್ಲಿನ ಹವಾಮಾನ ಅತ್ಯಂತ ವೈಶಿಷ್ಟ್ಯಪೂರ್ಣ. ಕೊಡಗಿನಲ್ಲಿ ಸಾಕಷ್ಟು ಸಂಖ್ಯೆಯ ಜಲಪಾತಗಳಿವೆ. ಅಬ್ಬಿ, ಲಕ್ಷ್ಮಣ ತೀರ್ಥ, ತೋಮಾರ, ಮಲ್ಲಳ್ಳಿ ಹೀಗೆ ಹತ್ತು ಹಲವು ಜಲಪಾತಗಳು ಈ ಕೊಡಗಿನಲ್ಲಿವೆ. ಇದು ಕೊಡಗಿಗೆ ಸೇರಿದ ಪುಷ್ಪಗಿರಿ ಬೆಟ್ಟದ ತಳಭಾಗದಲ್ಲಿದೆ.200 ಅಡಿ ಎತ್ತರದಿಂದ ಧುಮುಕುತ್ತದೆ. ಮಲ್ಲಳ್ಳಿ ಜಲಪಾತ ಬೆಳ್ನೊರೆಗಳ ಸೂಸುತ್ತಾ ಸುಂದರ ಸೊಬಗಿನಿಂದ ಕಂಗೊಳಿಸುತ್ತದೆ. ಹಸಿರ ಹಾದಿಯಲ್ಲಿ ಕ್ಷೀರಧಾರೆಯಂತೆ ಇದು ಭಾಸವಾಗುತ್ತದೆ. ಅಂತೂ ಈ ಜಲಪಾತ ಒಂದು ಸುಂದರವಾದ ಅನುಭವ ನೀಡುತ್ತದೆ. ಸೋಮವಾರ ಪೇಟೆ ಶಾಂತಳ್ಳಿ ಹಾದಿಯಲ್ಲಿ ಸಾಗುವಾಗ ಕುಂದಳ್ಳಿಗೆ ತಲುಪಬೇಕಾದರೆ ದೂರದಿಂದಲೇ ಮಲ್ಲಳ್ಳಿ ಕೈ ಬೀಸಿ ಕರೆಯುತ್ತದೆ. ಕುಂದಳ್ಳಿಯಿಂದ ಮೂರು ಕಿ.ಮೀ ದೂರದ ಕುಮಾರಹಳ್ಳಿಗೆ ಹೋಗಿ ಅಲ್ಲಿಂದ ಜಲಪಾತದೆಡೆಗೆ ನಡೆದು ಹೋಗಲು ಸಾಧ್ಯ. ಕುಮಾರ ಹಳ್ಳಿಯಿಂದ ಎರಡೂವರೆ ಕಿ.ಮೀ ಸಾಗಿದಾಗ ಇದರ ದರ್ಶನ ಭಾಗ್ಯ ದೊರಕುತ್ತದೆ.

0 comments:

Post a Comment