ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
5:14 PM

ಮಕರಾಸನ

Posted by ekanasu

ವೈವಿಧ್ಯ
'ಮಕರ' ಎಂದರೆ ಮೊಸಳೆ. ಮೊಸಳೆ ನೀರಿನಲ್ಲಿ ತೇಲುತ್ತಿರುವ ಭಂಗಿಯ ಹೆಸರನ್ನು ಈ ಆಸನಕ್ಕೆ ಇಡಲಾಗಿದೆ. ಇದೊಂದು ಉತ್ತಮವಾದ ಪೂರ್ತಿ ವಿಶ್ರಾಂತಿದಾಯಕ ಭಂಗಿಯಾಗಿದೆ.ಅಭ್ಯಾಸ ಕ್ರಮ
ಜಮಖಾನೆ ಮೇಲೆ ಕವುಚಿ ಮಲಗಬೇಕು. ಆಮೇಲೆ ಕಾಲುಗಳನ್ನು 2 ಅಡಿಯಷ್ಟು ವಿಸ್ತರಿಸಬೇಕು. ಕಾಲ ಬೆರಳುಗಳು ಹೊರ ಮುಖವಾಗಿಯೂ ಇದ್ದು ನೆಲಕ್ಕೆ (ಜಮಖಾನೆಗೆ) ತಾಗಿರಬೇಕು. ಎರಡು ಕೈಗಳನ್ನು ಕಟ್ಟಿ ಗಲ್ಲವನ್ನು ಕೈಗಳ ಮೇಲಿರಿಸಬೇಕು. ಅಥವಾ ಎಡ ಯಾ ಬಲ ಬದಿಯ ತಲೆ, ಕೆನ್ನೆಯನ್ನು ಕೈಗಳ ಮೇಲಿರಿಸಬಹುದಾಗಿದೆ. ಈ ಸ್ಥಿತಿಯಲ್ಲಿ 3ರಿಂದ 5 ನಿಮಿಷ ಸಮ ಉಸಿರಾಟ ನಡೆಸುತ್ತಿರಬೇಕು. ಹಾಗೂ ಶರೀರವನ್ನು ಪೂರ್ತಿ ಸಡಿಲಗೊಳಿಸಬೇಕು ಹಾಗೂ ಹಗುರ ಮಾಡಬೇಕು. ಈ ಆಸನದಲ್ಲಿ ಪರಿಣತಿ ಹೊಂದಿದ ನಂತರ ಸ್ವಲ್ಪ ಹೊತ್ತು ಮನಸ್ಸಿನಿಂದ ಸಮ ಉಸಿರಾಟವನ್ನೇ ಗಮನಿಸುತ್ತಿರಬೇಕು. ಅನಂತರ ವಿಶ್ರಾಂತಿ.

ಉಪಯೋಗಗಳು
ಈ ಆಸನದಿಂದ ದಣಿದ ದೇಹಕ್ಕೆ ಮತ್ತು ಮನಸ್ಸಿಗೆ ಪೂರ್ತಿ ವಿಶ್ರಾಂತಿ ದೊರಕಿ ನಿದ್ರಾ ಹೀನತೆಯನ್ನು ಹೋಗಲಾಡಿಸುತ್ತದೆ. ಇದೊಂದು ನಿದ್ರ ಮಾಡುವ ಭಂಗಿಯಾಗಿದೆ. ಆದರೆ ಈ ಆಸನದಲ್ಲಿ ನಿದ್ರೆ ಮಾಡದೆ, ಎಚ್ಚರದ ಸ್ಥಿತಿಯಲ್ಲಿರಬೇಕು. ರಕ್ತದೊತ್ತಡ, ಮಧುಮೇಹ, ಮನಸ್ಸಿನ ಒತ್ತಡ ಮತ್ತು ಬೆನ್ನು ನೋವು ಇದ್ದವರು ಈ ಆಸನವನ್ನು ದಿನಕ್ಕೆ 3 ಯಾ 4 ಬಾರಿ ಮಾಡಬೇಕು.

-'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು

1 comments:

mahalingeshwara.d said...

Sir, article is very good and the asana also.. it gives rest to whole body and also for mind.. thank you again for good article..

Post a Comment