ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಪ್ರಜಾಪ್ರಭುತ್ವದ ಬುಡ ಅಲುಗಾಡಿದಾಗ ....

ನಮ್ಮ ದೇಶದಲ್ಲಿ ಯಾವುದೇ ರಾಜಕಾರಣಿ ಬಗ್ಗೆ ಅವ್ಯವಹಾರದ ಆರೋಪ ಕೇಳಿಬಂದರೂ ಆತ ಪತ್ರಿಕಾಗೋಷ್ಠಿ ಕರೆದು ಇದರಲ್ಲಿ ತನ್ನದೇನು ತಪ್ಪಿಲ್ಲ ಎನ್ನುತ್ತಾನೆ. ಅಥವಾ ಬಹಿರಂಗ ವೇದಿಕೆಯಲ್ಲಾದರೂ ತನ್ನದೇನು ತಪ್ಪಿಲ್ಲ ಎನ್ನುತ್ತಾನೆ. ಕಾರಣ ತಾನು ಕಳ್ಳನೆಂದು ಮತದಾರರಿಗೆ ಗೊತ್ತಾದರೆ ಮುಂದಿನ ಚುನಾವಣೆ ಗೆಲ್ಲುವುದು ಕಷ್ಟ ಎಂದು ರಾಜಕಾರಣಿಗಳಿಗೆ ತಿಳಿದಿದೆ. ಇರಾಕ್ನಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಸದ್ದಾಂ ಹುಸೈನ್ ನಾಲ್ಕು ಜನರನ್ನು ವಿನಾಕಾರಣ ಬಹಿರಂಗವಾಗಿ ಗುಂಡಿಕ್ಕಿ ಕೊಂದ. ಹತ್ಯೆಯ ಉದ್ದೇಶವನ್ನು ಜನರಿಗೆ ತಿಳಿಸಲಿಲ್ಲ. ಕಾರಣ ಅವನಿಗೆ ಜನರ ಹಂಗು ಇರಲಿಲ್ಲ. ಭಾರತದ ರಾಜಕಾರಣಿಗಳಂತೆ ಜನರ ಎದುರು ತಾನು ತಪ್ಪು ಮಾಡಲಿಲ್ಲ ಎಂದು ಸಾಬೀತುಪಡಿಸುವ ಅನಿವಾರ್ಯತೆ ಇರಲಿಲ್ಲ. ಮುಂದಿನ ಚುನಾವಣೆ ಎಂದು ಯೋಚಿಸಲು ಅಲ್ಲಿ ಚುನಾವಣೆಯೇ ಇರಲಿಲ್ಲ. ಜೋಸೆಫ್ ಸ್ಟಾಲಿನ್ನ ಕಾಲದಲ್ಲಿ ಯು.ಎಸ್.ಎಸ್.ಆರ್.ನಲ್ಲಿ ದಿನವೂ ಒಬ್ಬ ಪ್ರಜೆಯನ್ನು ಬಹಿರಂಗವಾಗಿ ಆತ ಕೊಲ್ಲುತ್ತಿದ್ದ.


ಆತನೂ ಜನರಿಗೆ ಹತ್ಯೆಯ ಉದ್ದೇಶ ಹೇಳುತ್ತಿರಲಿಲ್ಲ. ಕಾರಣ ಆತನಿಗೂ ಜನರ ಹಂಗು ಇರಲಿಲ್ಲ. ಪ್ರಜೆಗಳಲ್ಲಿ ಭಯ ಹುಟ್ಟಿಸಿ ತಮ್ಮೆದುರು ಯಾರೂ ಬಂಡಾಯ ಏಳದಂತೆ ಮಾಡುವುದೇ ಸದ್ದಾಂ, ಸ್ಟಾಲಿನ್ರ ಗುರಿಯಾಗಿತ್ತು. ಪಾಕಿಸ್ತಾನದಲ್ಲೂ ಆಪಾದನೆಗಳು ಕೇಳಿ ಬಂದೊಡನೆ ರಾಜಕಾರಣಿ ಪತ್ರಿಕಾಗೋಷ್ಠಿ ಕರೆಯಲು ಒದ್ದಾಡುವುದಿಲ್ಲ. ಅಲ್ಲಿಯೂ ರಾಜಕಾರಣಿಗಳಿಗೆ ಜನರ ಹಂಗು ಇಲ್ಲ.

ಎಲ್ಲಿ ರಾಜಕಾರಣಿಗಳಿಗೆ ಜನರೆದುರು ತನ್ನದೇನು ತಪ್ಪಿಲ್ಲ ಎಂದು ಸಾಬೀತುಪಡಿಸುವ ಅನಿವಾರ್ಯತೆ ಇರುತ್ತದೆಯೋ ಅಲ್ಲಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿಲ್ಲ ಎಂದರ್ಥ. ವ್ಯವಸ್ಥೆ ಸಂಪೂರ್ಣ ಹದಗೆಟ್ಟಲ್ಲಿ ರಾಜಕಾರಣಿಗೆ ಜನರೆದುರು ತಾನು ಮುಗ್ಧ ಎಂದು ಸಾಬೀತುಪಡಿಸುವ ಅನಿವಾರ್ಯತೆ ಇರುವುದಿಲ್ಲ. ಜನರಿಗೆ ತಾನು ಕಳ್ಳನೆಂದು ಗೊತ್ತಾಗಲಿ ಬಿಡಿ ಎಂದು ಸುಮ್ಮನಿರುತ್ತಾನೆ. ಕಮ್ಯುನಿಸ್ಟ್ ಯು.ಎಸ್.ಎಸ್.ಆರ್. ಸರ್ವಾಧಿಕಾರಿ ಆಡಳಿತವಿದ್ದ ಇರಾಕ್ ಮತ್ತು ಪ್ರಜಾಪ್ರಭುತ್ವ ಭಾರತವನ್ನು ಒಂದೇ ಸಾಲಿನಲ್ಲಿಟ್ಟು ಅಳತೆ ಮಾಡಲು ಸಾಧ್ಯವಿಲ್ಲ ಎನ್ನುವುದು ಸತ್ಯ. ಆದರೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಲ್ಲಿ ಎಲ್ಲಾ ರಾಜಕಾರಣಿಗಳು ಒಂದೇ ರೀತಿ ವರ್ತಿಸುತ್ತಾರೆ ಎನ್ನುವುದೂ ಸತ್ಯ.

ಭಾರತದಲ್ಲಿ ವ್ಯವಸ್ಥೆ ಸಂಪೂರ್ಣ ಹದಗೆಡುವ ದಿಕ್ಕಿನಲ್ಲಿ ಸಾಗಿದೆ.ಕರ್ನಾಟಕದ ಮಣ್ಣನ್ನು ನಮ್ಮೆದುರಿನಲ್ಲಿ ರಾಜಕಾರಣಿಗಳು ವಿದೇಶಕ್ಕೆ ಮಾರಿದರು. ಮಾರಿಯೂ ಚುನಾಯಿತರಾದರು. ನೆಲವನ್ನು ಮಕ್ಕಳಿಗೆ ಸಂಬಂಧಿಕರಿಗೆ ಕೊಟ್ಟರು. ಆದರೂ ಚುನಾಯಿತರಾದರು. ಹಿಂದಿನವರೂ ಈ ತಪ್ಪನ್ನೇ ಮಾಡಿದ್ದರು ಎಂದು ರಾಜಕಾರಣಿಗಳು ಹೇಳಿದರು. ಭಯ ಹುಟ್ಟಿಸುವುದು ಇಂತಹ ಬೆಳವಣಿಗೆಗಳು. ಜನರೆದುರು ಮುಗ್ಧೆ ಎಂದು ಸಾಬೀತುಪಡಿಸುವ ಅಗತ್ಯವೂ ಇಲ್ಲ ಎಂದು ರಾಜಕಾರಣಿಗಳಿಗೆ ಅನ್ನಿಸುತ್ತದೆ ಎಂದಾದರೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಂತೆ.

Ofcourse ಅವರೆಲ್ಲ ಆಗೊಮ್ಮೆ ಈಗೊಮ್ಮೆ ತಾನು ಮುಗ್ಧ ಎಂದು ವಾದ ಮಾಡಿರಬಹುದು. ಎಲ್ಲಾ ಹಗರಣಗಳ ನಂತರವೂ ಯು.ಪಿ.ಎ. ಪುನಃ ಅಧಿಕಾರಕ್ಕೆ ಬಂತು. ಹಗರಣಗಳ ಬಗ್ಗೆ ಪ್ರಶ್ನಿಸಿದಾಗ ಪ್ರಧಾನಿ ಜನ ಪುನಃ ಚುನಾಯಿಸಿದ್ದಾರಲ್ಲ ಇನ್ನೇನು ಎಂಬ ಉಡಾಫೆಯ ಉತ್ತರ ನೀಡಿದರು! ನೇರವಾಗಿ ಅಲ್ಲದಿದ್ದರೂ ಅವರು ಹಗರಣಗಳನ್ನು ಒಪ್ಪಿಕೊಂಡಂತೆಯೇ. ಪ್ರಧಾನಿಯೇ ತಮ್ಮ ಸರಕಾರದ ಹಗರಣಗಳನ್ನು ಒಪ್ಪಿಕೊಂಡು ಜನರಿಗೆ ಬೇಸರವಿಲ್ಲ ಎಂದುindirect ಆಗಿ ಹೇಳುತ್ತಾರೆಂದರೆ ವ್ಯವಸ್ಥೆಯ ಬುಡ ಅಲುಗಾಡಿದಂತೆ.

ಭಯ ಹುಟ್ಟಿಸುವುದು ಇಂತಹ ಬೆಳವಣಿಗೆಗಳು. 2ಜಿ ಹಗರಣಕ್ಕಾಗಿ ಕರುಣಾನಿಧಿ ಸರಕಾರ, 'ಆದರ್ಶ'ಕ್ಕಾಗಿ ಚೌಹಾಣ್ Common wealth ಗಾಗಿ ಕಲ್ಮಾಡಿ ಬೆಲೆ ತೆತ್ತದ್ದು ಪ್ರಜಾಪ್ರಭುತ್ವ ಜೀವಂತಿಕೆಗೆ ಸಾಕ್ಷಿಯೇ. ಆದರೂ ಅವೆಲ್ಲದರ ನಡುವೆ ಜನಾಭಿಪ್ರಾಯದ ಹಂಗು ತೊರೆಯುತ್ತಿರುವವರು ವ್ಯವಸ್ಥೆಯ ಬುಡ ಅಲುಗಾಡಿಸುತ್ತಾರೆ. ಅಪಾರ ಜನಬೆಂಬಲ ಇರುವುದನ್ನು ತಿಳಿದೂ ಅಣ್ಣಾ ಹಜಾರೆ ಬಗ್ಗೆ ಸುಳ್ಳು ಆರೋಪ ಹೊರಿಸುತ್ತಾರೆ. ಮಧ್ಯರಾತ್ರಿ ರಾಮ್ ದೇವರನ್ನು ಬಂಧಿಸುತ್ತಾರೆ.

ಇಂತಹ ಸಂದರ್ಭದಲ್ಲಿ ಬಾಬಾ ಎತ್ತಿರುವ ಪ್ರಶ್ನೆಗಳು ಮುಖ್ಯ. ಅವರ ಡಿಮಾಂಡ್ಗಳನ್ನು ಸರಕಾರ ಪೂರೈಸಿದರೆ ಅದರ ಪರಿಣಾಮ ಏನಾಗುತ್ತದೆ ಎಂದು ನಾವು ವಿಶ್ಲೇಷಿಸಬೇಕು. ಅದರಿಂದ ವ್ಯವಸ್ಥೆ ಸ್ವಲ್ಪವಾದರೂ ಸ್ಪಷ್ಟವಾಗುತ್ತದೆಯೇ ಎಂದು ವಿಚಾರ ಮಾಡಬೇಕು ವಿನಹ ಸನ್ಯಾಸಿಯಾದ ಬಾಬಾರಿಗೆ ಕೋಪ ಬರುತ್ತದೆ ಎಂದು ಬಾಬಾರ Character ವಿಶ್ಲೇಷಣೆ ಮಾಡುವುದಲ್ಲ! ಸನ್ಯಾಸವೂ ಸೇರಿದಂತೆ ಇವತ್ತು ಯಾವ ಕ್ಷೇತ್ರವೂ perfect ಆಗಿ ಉಳಿದಿಲ್ಲ. ಹೀಗಿರುವಾಗ ಸನ್ಯಾಸಿಯೊಬ್ಬ ಸಂಪೂರ್ಣ ಹದಗೆಟ್ಟುತ್ತಿರುವ ವ್ಯವಸ್ಥೆಗೆ ತಡೆಯೊಡ್ಡುತ್ತೇನೆ ಎಂದರೆ ಅದನ್ನು ಬೆಂಬಿಲಿಸಬೇಕು ವಿನಹ ಮೂರು ತಿಂಗಳ ಹಿಂದೆ ರಾಜಕೀಯ ಪಕ್ಷ ಕಟ್ಟುತ್ತೇನೆ ಎಂದಿದ್ದರು ಎಂಬ ಕಾರಣಕ್ಕಾಗಿ ಅವರನ್ನೇ ತಳ್ಳಿ ಹಾಕುವುದಲ್ಲ.

ಅಷ್ಟಕ್ಕೂ ಇಲ್ಲಿ ಭ್ರಷ್ಟಾಚಾರದ ಪ್ರಶ್ನೆ ಇದೆಯೇ ಹೊರತು ಬಾಬಾರ character ವಿಶ್ಲೇಷಣೆಯಲ್ಲ. ಪ್ರತಿಪಕ್ಷಕ್ಕೆ, ಮಾಧ್ಯಮಕ್ಕೆ watchdog ಎನ್ನುತ್ತಾರೆ. ಅವು ಸರಕಾರದ ತಪ್ಪುಗಳನ್ನು ಜನರೆದುರು ತರಬೇಕು.. ಅದರರ್ಥ ಪ್ರತಿಪಕ್ಷ, ಮಾಧ್ಯಮ perfect ಎಂದಲ್ಲ. ಅವುಗಳು watchdogಗಳಾದರೆ ಸರಕಾರ ಸರಿಯಾಗಿ ಕೆಲಸ ಮಾಡುವ ಸಾಧ್ಯತೆಗಳು ಹೆಚ್ಚು ಎಂದರ್ಥ ಅಷ್ಟೆ. ರಾಜಕಾರಣಿಗಳು ಜನರ ಹಂಗು ತೊರೆಯುತ್ತಿರುವ ಈ ಸಂದರ್ಭದಲ್ಲಿ ಬಾಬಾರ ಡಿಮಾಂಡ್ಗಳು ಈಡೇರಿದರೆ ಖಂಡಿತ ವ್ಯವಸ್ಥೆ ಸ್ವಲ್ಪವಾದರೂ ಸ್ವಚ್ಛವಾಗುತ್ತದೆ. ಆದರೆ ಮಾಧ್ಯಮಗಳು ರಾಜಕಾರಣಿಗಳು ಬಾಬಾರ ಡಿಮಾಂಡ್ ಬಿಟ್ಟು ಅವರ character ವಿಶ್ಲೇಷಣೆಯಲ್ಲಿ ತೊಡಗಿವೆ. ಚುರುಕು ಮುಟ್ಟಿಸುವ ಜನರು ಇಲ್ಲದಿದ್ದರೆ ಕಳ್ಳನ ಕೈಗೆ ಬೀಗ ಕೊಟ್ಟಂತೆ.

- ಆದಿತ್ಯ ಭಟ್

0 comments:

Post a Comment