ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಜುಲೈ 15ರಿಂದ ಚಾತುರ್ಮಾಸ್ಯ
ಜಗದ್ಗುರು ಶಂಕರಾಚಾರ್ಯಮಹಾಸಂಸ್ಥಾನಮ್, ಶ್ರೀ ಸಂಸ್ಥಾನ ಗೋಕರ್ಣ - ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಚಾತುರ್ಮಾಸ್ಯ ಕಾರ್ಯಕ್ರಮವು ಶ್ರೀ ಕ್ಷೇತ್ರ ಗೋಕರ್ಣ ಅಶೋಕಾ ವನದಲ್ಲಿ ಜುಲೈ 15ರಿಂದ ಅ.12ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದು ಶ್ರೀಗಳ ಹದಿನೆಂಟನೆಯ ಚಾತುಮ್ಯಾಸ್ಯ.


ಜಗದ್ಗುರು ಶ್ರೀಮದಾಚಾರ್ಯ ಶಂಕರಭಗವತ್ಪಾದರಿಂದ ಸಂಸ್ಥಾಪಿತವಾಗಿ ಶ್ರೀ ಶ್ರೀ ವಿದ್ಯಾನಂದಾಚಾರ್ಯರಿಂದ ಪ್ರವರ್ತಿತವಾದ ಶ್ರೀ ಮಠದ ಮೂಲಸ್ಥಾನವಾದ ಅಶೋಕೆಯಲ್ಲಿ ಶ್ರೀಮದಾಚಾರ್ಯ ಶಂಕರದಿಂದ ಅರ್ಚಿಸಲ್ಪಟ್ಟ ಮಲ್ಲಿಕಾರ್ಜುನನ ದಿವ್ಯಸನ್ನಿಧಿಯಲ್ಲಿ 60ದಿನಗಳ ಕಾಲ ನಡೆಯುವ ಈ ಚಾತುರ್ಮಾಸ್ಯದಲ್ಲಿ ಬಗೆ ಬಗೆಯ ಲೋಕ ಹಿತಂಕರವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಸಮಸ್ತ ಶಿಷ್ಯಭಕ್ತರೂ ಈಚಾತುರ್ಮಾಸ್ಯ ಸಂದರ್ಭದಲ್ಲಿ ಅಶೋಕೆಗೆ ಆಗಮಿಸಿ ತೀರ್ಥ ಪ್ರಸಾದ ಆಶೀಮಂತ್ರಾಕ್ಷತೆಯನ್ನು ಸ್ವೀಕರಿಸಬೇಕು.

ಜುಲೈ 14 ಗರುವಾರ ಸಂಜೆ 4ಕ್ಕೆ ಪರಮಪೂಜ್ಯ ಶ್ರೀಗಳ ಆಗಮನ, ರಥಬೀದಿಯಲ್ಲಿ ಮೆರವಣಿಗೆ. ಶಿಷ್ಯಭಕ್ತರಿಂದ ಚಾತುರ್ಮಾಸ್ಯಕ್ಕಾಗಿ ಸುವಸ್ತು ಸಮರ್ಪಣೆ. ಜುಲೈ 15ರ ಶುಕ್ರವಾರ ಪರಮಪೂಜ್ಯ ಶ್ರೀಗಳವರಿಂದ ಶ್ರೀಕೃಷ್ಣ , ವ್ಯಾಸ ಶ್ರೀಮದಾಚಾರ್ಯಾದಿ ದೇವರ್ಷಿ , ಗುರುಪೂಜೆ, ಚಾತುರ್ಮಾಸ್ಯ ವ್ರತಸಂಕಲ್ಪ ಸ್ವೀಕಾರ, ಶಿಷ್ಯಜನತೆಗೆ ವ್ಯಾಸಮಂತ್ರಾಕ್ಷತೆ, ಚಾತುಮ್ಯಾಸ್ಯ ಸಂದೇಶದ ಅನುಗ್ರಹ.
ಸೆ.12ರ ಸೋಮವಾರ ಚಾತುರ್ಮಾಸ್ಯಪ್ರಶಸ್ತಿ ಪ್ರದಾನ, ಸೀಮೋಲ್ಲಂಘನ.ಅನಿತರಸಾಧಾರಣವಾದ ಸಮಾಜೋನ್ಮುಖಿಯಾದ ವಿಶಿಷ್ಟ ಸೇವಾಕಾರ್ಯಗಳ ಮೂಲಕ ಸಮಾಜಸೇವೆಯಲ್ಲಿ ನಿರತರಾದ ಗಣ್ಯರಿಗೆ ಪರಮಪೂಜ್ಯ ಶ್ರೀ ಶ್ರೀಗಳವರು ಶ್ರೀಗುರು ಅನುಗ್ರಹರೂಪವಾದ ಚಾತುರ್ಮಾಸ್ಯಪ್ರಶಸ್ತಿಯನ್ನು ನೀಡಿ ಅನುಗ್ರಹಿಸಿ ಸನ್ಮಾನಿಸಲಿದ್ದಾರೆ.

0 comments:

Post a Comment