ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಪ್ರವರ್ತಿತ ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಕಾರದೊಂದಿಗೆ, "ವರ್ಷ" ಕ್ರಿಯೇಷನ್ಸ್ ಪ್ರಸ್ತುತಿಯ "ದೂರ ತೀರ ಯಾನ" ಕನ್ನಡ ಹಾಡುಗಳ ವಿಡಿಯೋ ಆಲ್ಬಂ ಜುಲೈ 23ರಂದು ಬೆಳಗ್ಗೆ 9ಗಂಟೆಗೆ ವಿದ್ಯಾಗಿರಿಯಲ್ಲಿರುವಪತ್ರಿಕೋದ್ಯಮ ಸೆಮಿನಾರ್ ಹಾಲ್ ನಲ್ಲಿ ಬಿಡುಗಡೆಗೊಳ್ಳಲಿದೆ.ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ "ಗುಬ್ಬಚ್ಚಿಗಳು" ನಿರ್ದೇಶಕ ಅಭಯ ಸಿಂಹ ಈ ಹಾಡುಗಳ ವಿಡಿಯೋ ಆಲ್ಬಂ ಬಿಡುಗಡೆಗೊಳಿಸಲಿದ್ದಾರೆ. ಅಧ್ಯಕ್ಷತೆಯನ್ನು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸುವರು. ಸಂಸ್ಥೆಯ ಆಡಳಿತಾಧಿಕಾರಿ ಸ್ಮಿತಾ ಪಿ.ಐತಾಳ್ ಹಾಗೂ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಉಪಸ್ಥಿತರಿರುವರು.ದೂರ ತೀರ ಯಾನ ಬಿಡುಗಡೆಗೊಳಿಸಲಿರುವ ಖ್ಯಾತ ನಿರ್ದೇಶಕ ಅಭಯ ಸಿಂಹ.

ರಾಜ್ಯದಲ್ಲೇ ಮೊದಲು

ಆರು ಕನ್ನಡ ಹಾಡುಗಳ ವಿಡಿಯೋ ಆಲ್ಬಂ ರಾಜ್ಯದಲ್ಲೇ ಇದೇ ಮೊತ್ತ ಮೊದಲ ಬಾರಿಗೆ ನಿರ್ಮಾಣಗೊಂಡಿದೆ.ಸಂಸ್ಥೆಯ ಉಪನ್ಯಾಸಕರುಗಳಾದ ಸೌಮ್ಯ ಸಾಗರ, ಮೌಲ್ಯ ಬಾಲಾಡಿ, ಹರೀಶ್ ಆದೂರು, ವಿದ್ಯಾರ್ಥಿಗಳಾದ ಜಯಲಕ್ಷ್ಮೀ ಜೆ.ಆಳ್ವ, ಪೂಜಾ ಉಡುಪ, ಹಾಡುಗಳನ್ನು ರಚಿಸಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿನಿ ಪೂಜಾ ಉಡುಪ ಈ ಹಾಡುಗಳಿಗೆ ರಾಗಸಂಯೋಜಿಸಿ ಹಾಡಿದ್ದಾರೆ. ಪೂರಕ ಮ್ಯೂಸಿಕ್ ವಿದ್ಯಾರ್ಥಿಗಳದ್ದೇ. ಹಾಡಿಗೊಪ್ಪುವಂತಹ ನಟನೆಯನ್ನೂ ವಿದ್ಯಾರ್ಥಿಗಳು ಮಾಡಿದ್ದು ಚಿತ್ರೀಕರಣವನ್ನು ಯಾಣ,ಮರವಂತೆ,ಮಲ್ಪೆ, ಚಿಕ್ಕಮಗಳೂರು, ಶಿವಮೊಗ್ಗ, ಸಾಗರ, ಮೂಡಬಿದಿರೆ ಹಾಗೂ ಇತರೆಡೆಗಲಲ್ಲಿ ನಡೆಸಲಾಗಿದೆ.ರಂಜಿತ್ ಪಿ.ಎನ್. - ಕೊಳಲು, ಮೇಘ ಸಮೀರ - ತಬ್ಲಾ, ಶುಭಕರ ಬಿ. - ರಿದಂ ಪ್ಯಾಡ್, ಪುರುಷೋತ್ತಮ ಬಿ. ಕೀ ಬೋರ್ಡ್ , ಸಹಗಾಯನದಲ್ಲಿ ವರ್ಷ ಎಂ.ಎಸ್,ಹೆಲನ್ ಬಿ.,ರೋಶನಿ ಆಚಾರ್ಯ ಸಹಕರಿಸಿದ್ದಾರೆ.
ಸಾಹಿತ್ಯ ದಲ್ಲಿ ಮುಂಜಾನೆ ಸೂರ್ಯ... ಸೌಮ್ಯ ಸಾಗರ, ಮುಂಜಾವ ಬೆಳಗು ಮತ್ತು ಅಮ್ಮ ನಿನ್ನ ಮಡಿಲಲ್ಲಿ ... ಶ್ರೀಮತಿ ಮೌಲ್ಯ ಬಾಲಾಡಿ., ದೂರ ಸರಿದರು ಇಲ್ಲವಾದರು... ಪೂಜಾ ಉಡುಪ, ನನ್ನ ಕನಸಿನ ಹಾಡು... ಜಯಲಕ್ಷ್ಮೀ ಜೆ. ಆಳ್ವ ಮತ್ತು ನೆನಪುಗಳ ಮೆರವಣಿಗೆ... ಹರೀಶ್ ಕೆ.ಆದೂರು ಅವರದ್ದು.
ನಿರ್ದೇಶಕ ಹರೀಶ್ ಕೆ.ಆದೂರು

ಒಟ್ಟು ಆರು ಹಾಡುಗಳಿದ್ದು ಈ ಪೈಕಿ ಒಂದು ಹಾಡನ್ನು ವಿಭಿನ್ನವಾಗಿ ಚಿತ್ರೀಕರಿಸಿ,ಆಲ್ಬಂನಲ್ಲಿ ನೀಡಲಾಗಿದೆ. ಇದೊಂದು ಹೊಸ ಪ್ರಯತ್ನ.ಒಟ್ಟಾರೆಯಾಗಿ ಹೊಸತನದೊಂದಿಗೆ ಜನತೆಯ ಮುಂದೆ ಈ ಆಲ್ಬಂ ನೀಡಬೇಕೆಂಬುದು ನಮ್ಮ ಹೆಬ್ಬಯಕೆ ಎನ್ನುತ್ತಾರೆ ಚಿತ್ರೀಕರಣ ನಡೆಸಿ ನಿರ್ದೇಶಿಸಿದ ಹರೀಶ್ ಕೆ.ಆದೂರು.
ಸನತ್ ಕುಮಾರ್ ಪರಿಕಲ್ಪನೆಯಲ್ಲಿ ಈ ಆಲ್ಬಂ ನಿರ್ಮಾಣಗೊಂಡಿದೆ. ಸಂಕಲನ ಹಾಗೂ ಗ್ರಾಫಿಕ್ಸ್ ರವಿ ಮೂಡುಕೊಣಾಜೆ ಅವರದ್ದು.

0 comments:

Post a Comment