ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

75ರ ಸಂಭ್ರಮದಲ್ಲಿ ಮನೆ ಮನೆಗೆ ಭರತನಾಟ್ಯ

ಮೂಡಬಿದಿರೆ: ರಂಗ ಭಾರತಿ ಮಂಗಳೂರು ಪ್ರಸ್ತುತ ಪಡಿಸುವ "ಮನೆ ಮನೆಗೆ ಭರತನಾಟ್ಯ " ಕಾರ್ಯಕ್ರಮ ಸರಣಿಗೆ ಇದೀಗ 75ರ ಸಂಭ್ರಮ. ಮನೆ - ಮನಗಳಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಸಾಹಿತ್ಯದ ಉತ್ಸಾಹವನ್ನು ತುಂಬುವ ಮೂಲಕ ಮನೆಮಾತಾಗಿರುವ ಮೂಡಬಿದಿರೆಯ ಕೂಸು, ಬಾಲ ಕಲಾವಿದೆ ಕು.ಅಯನಾ ವಿ ರಮಣ್ ಅವರ "ನೃತ್ಯ ಪ್ರತಿಭಾಮೃತ" ಹಾಗೂ ಹಿರಿಯ ನೃತ್ಯಗುರು ವಿದುಷಿ ಶ್ರೀಮತಿ ಗೀತಾ ಸರಳಾಯ ಅವರಿಗೆ "ಗುರುನಮನ" ಕಾರ್ಯಕ್ರಮ ಜುಲೈ 24ರಂದು ಸಂಜೆ 6ರಿಂದ ಐತಿಹಾಸಿಕ ಪ್ರಸಿದ್ಧಿಯ ಸಾವಿರ ಕಂಬದ ಬಸದಿಯ "ಭೈರಾದೇವಿ " ಮಂಟಪದಲ್ಲಿ ನಡೆಯಲಿದೆ ಎಂದು ಈ ಕನಸು.ಕಾಂ ಸಂಪಾದಕ ಹರೀಶ್ ಕೆ.ಆದೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಮೂಡಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದೂರು ಅವರು , ಮಂಗಳೂರಿನ ಮೊತ್ತ ಮೊದಲ ಕನ್ನಡ ಅಂತರ್ಜಾಲ ತಾಣ ಈ ಕನಸು.ಕಾಂ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು, ಧವಳತ್ರಯ ಟ್ರಸ್ಟ್ (ರಿ.) ಜೈನಮಠ, ಮೂಡಬಿದಿರೆ ಇದರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.ಸಂಪೂರ್ಣ ವಿದ್ಯುತ್ ದೀಪಗಳಿಂದ ಅಲಂಕೃತಗೊಳ್ಳುವ ಸಾವಿರ ಕಂಬದ ಬಸದಿಯಲ್ಲಿ ಮತ್ತೊಮ್ಮೆ ಇತಿಹಾಸವನ್ನು ಮೆಲುಕುಹಾಕುವ,ಕಲೆ, ತನ್ಮೂಲಕ ಸಾಹಿತ್ಯ, ಸಂಸ್ಕೃತಿಗೆ ಮೇಲ್ಪಂಕ್ತಿಹಾಕುವ ಕಾರ್ಯಕ್ರಮವಾಗಿ "ನೃತ್ಯ ಪ್ರತಿಭಾಮೃತ" ಮೂಡಿಬರಲಿದೆ.
ಮೂಡಬಿದಿರೆ ಜೈನ ಮಠದ ಪರಮಪೂಜ್ಯ ಭಾರತ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಶುಭಾಶೀರ್ವಾದ ಹಾಗೂ ದಿವ್ಯ ಸಾನಿಧ್ಯದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ "ಚಿಗುರು" ಯೋಜನೆಯಡಿ ಈ ಕಾರ್ಯಕ್ರಮ ಮೂಡಿಬರಲಿದೆ.

ಮುಲ್ಕಿ - ಮೂಡಬಿದಿರೆ ಕ್ಷೇತ್ರದ ಶಾಸಕ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿಗಳಾದ ಶ್ರೀಪತಿ ಭಟ್, ಸಮಾಜ ಸೇವಕರಾದ ಕೆ.ಪಿ.ಜಗದೀಶ್ ಅಧಿಕಾರಿ, ರೋಟರಿ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಡಿ'ಕೋಸ್ತ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.

ಎಳೆವಯಸ್ಸಿನಲ್ಲೇ ವಯಸ್ಸಿಗೂ ಮೀರಿದ ಪ್ರತಿಭೆಗಳ ಮೂಲಕ ಸಾಧನೆ ಮೆರೆದ ಕು.ಅಯನಾ ವಿ.ರಮಣ್ ಇದೀಗ ನಿರಂತರ 74ಕಾರ್ಯಕ್ರಮಗಳನ್ನು ಯಾವುದೇ ಅಳುಕಿಲ್ಲದೆ ವಿವಿಧ ಮನೆಗಳಲ್ಲಿ ಪ್ರಸ್ತುತಪಡಿಸಿ ಅಪಾರ ಜನಮನ್ನಣೆಗೆ ಪಾತ್ರವಾಗಿದ್ದಾಳೆ. ಇದೀಗ ಐತಿಹಾಸಿಕ ಪ್ರಸಿದ್ಧಿಯ ಮೂಡಬಿದಿರೆಯಲ್ಲಿಯೇ ತನ್ನ 75ನೇ ಪ್ರದರ್ಶನವನ್ನು ನೃತ್ಯಗುರು ವಿದುಷಿ ಗೀತಾ ಸರಳಾಯ ಅವರ ಉಪಸ್ಥಿತಿಯಲ್ಲಿ ಪ್ರಸ್ತುತ ಪಡಿಸುತ್ತಿರುವುದು ಮತ್ತೊಂದು ವಿಶೇಷ. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭಗೊಂಡು ನಿಗಧಿತ ಅವಧಿಯಲ್ಲಿ ಕಾರ್ಯಕ್ರಮ ಮುಗಿಯಲಿದೆ. ಕಲಾಸಕ್ತರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.


ಬಾಲಚದುರೆಗೆ ಸನ್ಮಾನ: ಮೂಡಬಿದಿರೆ ಜೈನ ಮಠದ ವತಿಯಿಂದ ಬಾಲ ಕಲಾವಿದೆ ಅಯನಾ ವಿ ರಮಣ್ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುತ್ತದೆ.ಕಾರ್ಯಕ್ರಮವನ್ನು ಜೈನಮಠದ ಶ್ರೀ ಭಟ್ಟಾರಕ ಸ್ವಾಮೀಜಿ ನಡೆಸಿಕೊಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಂಗ ಭಾರತಿ ನಿರ್ದೇಶಕ ಕೆ.ವಿ.ರಮಣ್ ಉಪಸ್ಥಿತರಿದ್ದರು.

0 comments:

Post a Comment