ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಮತ್ತೆ ಹಳೆತನಕ್ಕೆ ಶಿಫ್ಟ್...ಹೌದು...ಇಂದಿನ ಮಹಿಳೆಯರ, ಟೀನೇಜ್ ಯುವತಿಯರ ಹೊಸ ಸ್ಟೈಲ್ ಎಂಬ ಶಿರೋನಾಮೆಯೊಂದಿಗೆ ಬರುವ ಡ್ರೈಸ್ ಇರಬಹುದು...ಜ್ಯೂಯೆಲ್ಸ್ ಇರಬಹುದು...ಫ್ಯಾಶನ್ಸ್ ಇರಬಹುದು...ಅದೆಲ್ಲವೂ ಹಳೆತನದ ಹೊಸ ರೂಪ...ಹೊಸ ಬಾಟಲಿಯಲ್ಲಿ ಹಳೆ ಮದ್ಯ ಎಂಬಂತೆ... ಹಿಂದಿನ ಕಾಲದ ಕಿವಿಯೋಲೆಗಳು ಮತ್ತೆ ಒಂದಷ್ಟು ಹೊಸತನದ ಗೆಟಪ್ ನೊಂದಿಗೆ ಮಹಿಳೆಯರ, ಟೀನೇಜ್ ಯುವತಿಯರ ಕಿವಿಯನ್ನಲಂಕರಿಸತೊಡಗಿದೆ. ಕತ್ತಿನ ಸರವೂ ಮತ್ತೆ ಹಳೆತನಕ್ಕೆ ಶಿಫ್ಟ್ ಪಡಕೊಂಡಿದೆ.
ದೊಡ್ಡ ದೊಡ್ಡ ಇಯರ್ ರಿಂಗ್ಸ್ ಮತ್ತೆ ಬರತೊಡಗಿದೆ...ಹಳೆಯ ಕಸೂತಿಗಳನ್ನೊಳಗೊಂಡ ಆಂಟಿಕ್ ಮೋಡೆಲ್ಸ್ ಮತ್ತೆ ಹೊಸವಿನ್ಯಾಸದ ಸಣ್ಣ ಟಚಪ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ...ಇಂದಿನ ಟೀನೇಜ್ ಯುವತಿಯರಿಗೆ...ಏಜ್ ಆಗಿದ್ರೂ ಇನ್ನೂ ನಾವು ಟಿನೇಜ್ ದಾಟಿಲ್ಲ ಎನಿಸುವಂತೆ ಡ್ರೆಸ್ ಮಾಡಿಕೊಂಡು ಫೋಸ್ ನೀಡೋ ಇಂದಿನ ಮಾಡರ್ನ್ ಮಹಿಳೆಯರಿಗೆ ಇವುಗಳು ಆಪ್ತವಾಗತೊಡಗಿದೆ. ಈಗ ಏನ್ ಹಾಕಿದ್ರೂ, ಏನ್ ತೊಟ್ಟರೂ ಅದೆಲ್ಲಾ ಫ್ಯಾಶನ್ ಅಲ್ಲವೇ...!!!0 comments:

Post a Comment