ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:54 PM

ನನ್ನ ಪಟ್ಟಣ

Posted by ekanasu

ಸಾಹಿತ್ಯ

ಹಿತ್ತಲಿಲ್ಲದ ಮನೆ
ಮನೆ ಮಧ್ಯೆ ಕಕ್ಕಸು
ನೋಡಿ ನಮ್ಮ ಜೀವನ ಸರ್ಕಸ್ಸು
ಕೆರೆ ಇಲ್ಲ,ಹೊಳೆ ಇಲ್ಲ,ಬಾವಿ ಇಲ್ಲನೀರಿಗಾಗಿ ನಿದ್ದೆ ಹೋಯಿತೆಲ್ಲ
ಧೂಳು, ಹೊಗೆ, ಶಬ್ದಮಾಲಿನ್ಯ
ದಿನೇ ದಿನೇ ಮರಗಳು ಮಾಯವಾಗುತ್ತಿವೆಯಲ್ಲ
ಗುಬ್ಬಚ್ಚಿ ನೋಡಿ ಎಷ್ಟು ವರ್ಷವಾಯಿತೋ
ನಮ್ಮನು ಸಾಯಲು ಬಿಟ್ಟು ಎಲ್ಲೋ ಹೋಗಿವೆಯಲ್ಲ
ಬೆಟ್ಟಗಳನು ನಾಚಿಸುವ ಕಟ್ಟಡಗಳು
ಮೇಲೆ ಬೀಳಲು ಕಾಯುತ್ತಿವೆಯಲ್ಲ
ಪಕ್ಕದ ಮನೆಯಲಿ ಸಾವು
ನನಗೇನು ನನ್ನ ಬಂಧುಗಳಲ್ಲ
ಸ್ಮಶಾನಗಳಲ್ಲೂ ಜಾಗವಿಲ್ಲ
ಪ್ರತಿದಿನ ಸಾವು ಕಾದು ಕುಳಿತಿದೆಯಲ್ಲ

- ಜಬೀವುಲ್ಲಾ ಖಾನ್

0 comments:

Post a Comment