ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಸಾಗರ: ವ್ಯಕ್ತಿ ತನ್ನ ಜೀವನದುದ್ದಕ್ಕು ಯಾವರೀತಿ ಬದುಕಿರುತ್ತಾನೆಂಬುದು ಆತನ ಜೀವಿತಾವಧಿಯ ಕೊನೆಯಕ್ಷಣದಲ್ಲೂ ವ್ಯಕ್ತವಾಗುತ್ತದೆ. ಹೇಗೆ ಜೀವಿಸಿದ್ದಾನೋ ಅದೇ ರೀತಿಯ ಮನೋಭಾವಗಳು, ಚಿಂತನೆಗಳು ತನ್ನ ಜೀವನದ ಕಟ್ಟಕಟೆಯ ಉಸಿರಿನಲ್ಲೂ ವ್ಯಕ್ತವಾಗಿಗುತ್ತವೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.ಜೀವಿತಾವಧಿಯನ್ನು ಸತ್ ಚಿಂತನೆ, ಸತ್ ಧರ್ಮಾನುಷ್ಠಾನಗಳ ಮೂಲಕ ಕಳೆದದ್ದೇ ಆದಲ್ಲಿ ಸದ್ಗತಿ ಪ್ರಾಪ್ತಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.


ಸಾಗರದ ಕಲಸಿ ಶ್ರೀ ದಿ.ವೆಂಕಪ್ಪಭಟ್ಟ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಶ್ರೀಗುರುಪಾದಪೂಜಾ,ಶ್ರೀ ರಾಮ ಪಟ್ಟಾಭಿಷೇಕ ಹಾಗೂ ತುಲಾಭಾರ ಸೇವೆಗಳ ನಂತರ ಶ್ರೀಗಳು ಆಶೀರ್ವಚನ ನೀಡಿದರು.ಇದೇ ಸಂದರ್ಭದಲ್ಲಿ ಹವ್ಯಕ ಸಮುದಾಯದ ಸಾಧಕರನ್ನು ಗೌರವಿಸುವ ಕಾರ್ಯಕ್ರಮವೂ ನಡೆಯಿತು.
0 comments:

Post a Comment