ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪಟಾಕಿ ಸಿಡಿಯಿತು

ಸರಿಯಾಗಿ 6 ಗಂಟೆಗೆ ಅಲಾರಂ ಬಾರಿಸಿತು. ಅಮರ್ ನಾಥ್ ಎಚ್ಚರಗೊಂಡ. ಕಣ್ಣಲ್ಲಿ ಇನ್ನೂ ನಿದ್ದೆ ಇದ್ದರೂ ಕೆಸಲಕ್ಕೆ ಬೇಗ ಹೋಗಲು ತಯಾರಾಗಲೇಬೇಕಿತ್ತು. ಹಾಸಿಗೆಯಿಂದ ಎದ್ದು, ಸ್ನಾನ ಮುಗಿಸಿ, ಬಟ್ಟೆಗಳನ್ನು ಧರಿಸಿಕೊಂಡು, ಘಮಘಮಿಸುವ ಸುಗಂಧ ಹಚ್ಚಿಕೊಂಡು, ಬ್ರೆಡ್ ತಿಂದು ಒಂದು ಲೋಟ ಬಿಸಿ ಹಾಲನ್ನು ಕುಡಿದು, ಸರಸರನೆ ಮೆಟ್ಟಲಿಳಿದು ತನ್ನ ಸವಾರಿಯಲ್ಲಿ ಆಫೀಸಿಗೆ ಹೊರಟ. ಆಫೀಸು ಬಂದಿತು. ಆದರೆ ಸೆಕ್ಯುರಿಟಿ ಅಮರನಿಗೆ ಆಫೀಸಿನ ಒಳಗೆ ಹೋಗಲು ಬಿಡುತ್ತಿಲ್ಲ. ನಿಮ್ಮನ್ನು ಟರ್ಮಿನೇಟ್ ಮಾಡಲಾಗಿದೆ ಎಂದು ಕೈಗೆ ಲೆಟರನ್ನು ಕೊಟ್ಟ. ಆ ಲೆಟರ್ ಓದಿದಾಕ್ಷಣ ಅಮರನ ಕಾಲ ಕೆಳಗಿಂದ ಭೂಮಿಯೇ ಸರಿದಂತಾಯಿತು. ಬುದ್ಧಿ ಮಂಕಾಗಿ ಹೋಯಿತು. ಏನು ಮಾಡಬೇಕೆಂದು ತೋಚಲೇ ಇಲ್ಲ. ಫ್ಲಾಟ್ ಖರೀದಿಸಿರುವ ಸಾಲ ತೀರಿಸಬೇಕಿತ್ತು. ಹೊಸ ಬೈಕ್ ತೆಗೆದುಕೊಂಡಿರುವ ಸಾಲದ ಭಾರವೂ ಸಹ ತಲೆ ಮೇಲಿತ್ತ್ತು. ಬ್ಯಾಂಕ್ ಖಾತೆಯಲ್ಲಿ ಐದು ಪೈಸೆಯೂ ಇರಲಿಲ್ಲ. ಜೇಬಿನ ಖರ್ಚಿಗೂ ದುಡ್ಡಿರಲಿಲ್ಲ. ಕೆಲಸ ಹೋಯಿತಲ್ಲ ಎಂಬ ನೋವು. ಕಣ್ಣಲ್ಲಿ ನೀರು ಬರತೊಡಗಿತು. ಒತ್ತಡ ಹೆಚ್ಚಾಗಿ ಮಾನಸಿಕ ಖಿನ್ನತೆ ಆವರಿಸತೊಡಗಿತು. ಮನಸ್ಸು ಚಿಂತೆಯಲ್ಲಿ ಮುಳುಗಿತು. ಅಮರ್ ಪರಿಸ್ಥಿತಿ ಮೀನನ್ನು ನೀರಿನಿಂದ ಆಚೆ ಬಿಸಾಕಿದ ಹಾಗಿತ್ತು.


ಇಂತಹ ಘಟನೆ ಅಮರನೊಂದಿಗೆ ನಡೆಯಿತು. ನಾಳೆ ನಿಮ್ಮ ಜೊತೆಯೂ ನಡೆಯಬಹುದು. ಆಗ ಏನು ಮಾಡುವಿರಿ...? ಇದರ ಬಗ್ಗೆ ಎಂದಾದರು ಯೋಚಿಸಿದ್ದೀರಾ...? ಕೆಲವು ಅನಾಹುತಗಳು ಪ್ರಾಕೃತಿಕವಾಗಿರುತ್ತವೆ. ಅದರ ಮೇಲೆ ನಮ್ಮ ಹತೋಟಿ ಇರುವುದಿಲ್ಲ. ಆದರೆ ಕೆಲವು ಕೆಟ್ಟ ಘಟನೆಗಳನ್ನು, ಸನ್ನಿವೇಶಗಳನ್ನು ನಮ್ಮ ಮುಂದಾಲೋಚನೆಯಿಂದ ನಾವು ತಪ್ಪಿಸಬಹುದು ಅಥವಾ ಅದರ ದುಷ್ಪರಿಣಾಮಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಮತ್ತು ಧೈರ್ಯವನ್ನು ಬೆಳಿಸಿಕೊಳ್ಳಬಹುದು. ಮಾನಸಿಕ ಒತ್ತಡದಿಂದ ಪಾರಾಗಬಹುದು.

ಉದಾಹರಣೆಗೆ - ಯಾರೋ ದಾರಿಯಲ್ಲಿ ಪಟಾಕಿ ಹತ್ತಿಸಿರುತ್ತಾರೆ. ನಿಮ್ಮಷ್ಟಕ್ಕೆ ನೀವು ಆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತೀರಿ ಎಂದುಕೊಳ್ಳೋಣ. ಪಟಾಕಿ ಸಿಡಿದಾಕ್ಷಣ ಏನಾಗುತ್ತದೆ? ನೀವು ಬೆಚ್ಚಿಬೀಳುತ್ತೀರಿ. ಇನ್ನೊಂದು ಸನ್ನಿವೇಶದಲ್ಲಿ...ನಿಮ್ಮ ಮುಂದೆ ಪಟಾಕಿ ಸಿಡಿಸಲಾಗುತ್ತಿದೆ. ನೀವು ಅದನ್ನು ನೋಡುತ್ತಿದ್ದೀರಿ. ಆಗ ನೀವು ಹೇಗೆ ವರ್ತಿಸುತ್ತೀರಿ..? ನೀವು ಬೆಚ್ಚಿ ಬೀಳುವುದಿಲ್ಲ. ಏಕೆ? ಪಟಾಕಿ ಶಬ್ದ ಕೇಳಲು ಮನಸ್ಸು ಸಿದ್ಧವಾಗಿತ್ತು.

ಜೀವನದಲ್ಲಿ ಯಾವ ಘಟನೆಯಿಂದ ನಿಮ್ಮ ಜೀವನ ಅಲ್ಲೋಲ ಕಲ್ಲೋಲವಾಗಬಲ್ಲದು ಎಂದು ಯೋಚಿಸಿ. ಅಕಸ್ಮಾತ್ ಹಾಗಾದರೆ ನೀವು ಏನು ಮಾಡಬಲ್ಲಿರಿ ಎಂದು ಯೋಚಿಸಿ. ಉತ್ತರ ಸಿದ್ಧವಾದಾಕ್ಷಣ ನಿಮ್ಮ ಮನಸ್ಸಿಗೆ ತಿಳಿಸಿ. ಆಗ ಮನಸ್ಸು ಸಮಸ್ಯೆಯನ್ನು ಧೈರ್ಯದಿಂದ ಎದುರಿಸಲು ಸಿದ್ಧವಾಗುತ್ತದೆ. ನೀವು ಒತ್ತಡದಿಂದ ಪರಾಗಬಹುದು.

- ಜಬೀವುಲ್ಲಾ ಖಾನ್

1 comments:

BIDIRE said...

ಉತ್ತಮ ಸಲಹೆ

Post a Comment