ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:14 PM

ನಿಮಗೆ ಗುಡ್ ಲಕ್

Posted by ekanasu

ಈ ಕನಸು ಅವಾರ್ಡ್ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮದ ಒಬ್ಬ ಹುಡುಗನ ಕಥೆಯಿದು. ಒಂದರಿಂದ ನಾಲ್ಕನೆ ತರಗತಿಯವರೆಗೆ ಉತ್ತಮ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿ ಓದಿನಲ್ಲಿ ತುಂಬಾ ಮುಂದೆ. ನಾಲ್ಕನೇ ತರಗತಿಯನ್ನು ಮುಗಿಸಿದ ನಂತರ ತಂದೆ ಹೇಳುತ್ತಾರೆ. 'ಮಗನೇ ನಿನಗೆ ಓದಿಸುವ ಸಾಮರ್ಥ್ಯ ನನ್ನಲಿಲ್ಲ. ಆದ್ದರಿಂದ ಓದನ್ನು ನಿಲ್ಲಿಸಿ ಹೊಲದ ಕೆಲಸಕ್ಕೆ ಬಾ' ಎಂದು.

ಆದರೆ ಓದಿನಲ್ಲಿ ಅತಿಹೆಚ್ಚಿನ ಶ್ರದ್ಧೆಯನ್ನು ಹೊಂದಿರುವ ಬಾಲಕ ತಂದೆಗೆ ಹೇಳುತ್ತಾನೆ. ಇಲ್ಲ ನಾನು ಓದಲೇ ಬೇಕೆಂದು. ಆಗ ತಂದೆ ಮಗನಿಗೆ ಹೇಳುತ್ತಾನೆ. ಈ ಬಾರಿ ಹತ್ತಿಯನ್ನು ಮಾರಾಟ ಮಾಡಲು ಟ್ರ್ಯಾಕ್ಟರ್ ರಾಯಚೂರಿಗೆ ಹೋಗುತ್ತಿದೆ. ಅಲ್ಲಿಯವರೆಗೆ ಮಾತ್ರ ನಾನು ಬಿಡುತ್ತೇನೆ, ಅದರ ಮುಂದೆ ಕೆಲಸ ನಿನ್ನದು ಏನಾದರು ಮಾಡು.

ಆ ಬಾಲಕ ರಾಯಚೂರಿನ ಗಂಜ್ ವೃತ್ತದಲ್ಲಿ ಇಳಿದು ಹಮ್ದರ್ದ್ ಶಾಲೆಯವರೆಗೆ ನಡೆದು ಬಂದು ತನ್ನ ವಿದ್ಯಾ ದಾಹದ ಬಗ್ಗೆ ಶಾಲೆಯ ಮುಖ್ಯಸ್ಥರ ಮುಂದಿಟ್ಟ. ಆತನಿಗೆ ಶಿಕ್ಷಣ ಕೊಡಿಸಲಾಯಿತು. ಆ ಬಾಲಕ ನಿರಂತರವಾಗಿ ಉತ್ತಮ ಶಿಕ್ಷಣ ಪಡೆದು ಪ್ರಾಥಮಿಕ, ಪ್ರೌಢ, ಕಾಲೇಜು ಮುಗಿಸಿ ಉಪನ್ಯಾಸಕ, ಪ್ರಾಚಾರ್ಯ, ವಕೀಲನಾಗಿ, ಹೈ ಕೋರ್ಟ್ ನ್ಯಾಯಾಧೀಶರಾಗಿ ಮುಂದೆ ಸರ್ವೋ ಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಮೆರೆಯುತ್ತಾರೆ.

ಈ ವ್ಯಕ್ತಿ ಬೇರೆ ಯಾರೂ ಅಲ್ಲ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಹೀಗೆ ನೀವು ಜೀವನದಲ್ಲಿ ಒಮ್ಮೆ ದೃಢ ನಿರ್ಧಾರ ತೆಗೆದುಕೊಂಡು ಮುಂದೆಜ್ಜೆ ಹಾಕಿದರೆ ಜಯ ಸಿಗಲಿದೆ. ಹೆಜ್ಜೆ ಇಡುವುದಕ್ಕಿಂತ ಮುಂಚೆ ಯೋಚಿಸಿ ಎಂದು ಹೇಳಿದ ಅಧ್ಯಾಪಕ ಅಯ್ಯಪ್ಪ ತುಕ್ಕಾಯಿ ಅವರ ರೋಮಾಂಚನಕಾರಿ ಪಾಠದಲ್ಲಿ ಕಲ್ಪನೆಗೆ ಬಂದ ಹೀರೋ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕು ದೇವದುರ್ಗದ ಬಡ ರೈತನ ಮಗ ನ್ಯಾ.ಶಿವರಾಜ್ ಪಾಟೀಲ್.

ನಂತರದ ದಿನದಲ್ಲಿ ಅವರನ್ನು ಮುಖಾಮುಖಿಯಾಗಿ ಭೇಟಿಯಾಗುವ ಸನ್ನಿವೇಶ. ಅದು ಅತಿಥಿ ಉಪನ್ಯಾಸಕರಾಗಿ ಅಗಮಿಸಿದ ಉದ್ದ ಮೂಗಿನ, ಕೆಂಪು ಮೈ ಬಣ್ಣದ, ಉದ್ದನೇಯ ದೇಹದ ವ್ಯಕ್ತಿ. ಕಲ್ಪನೆಗೂ ಮೀರಿ ನಿಂತ ವ್ಯಕ್ತಿತ್ವ. ಸ್ಪುಟವಾಗಿ, ನಿರರ್ಗಳವಾಗಿ ಪತ್ರಿಕೋದ್ಯಮದ ನೀತಿ ಸಂಹಿತೆಯ ಬಗ್ಗೆ ಮಾಡಿದ ಪಾಠ ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ. ನಂತರ ಕೇಳಿದ ಪ್ರಶ್ನೆ 'ರಾಜಕೀಯ ವ್ಯಕ್ತಿಗಳ ವೈಯಕ್ತಿಕ ವಿಷಯಗಳನ್ನು ಕೇಳಬಾರದೋ? ಅಥವಾ ಕೇಳಲೇಬಾರದೋ...? ಅದಕ್ಕೆ ಸ್ಪಷ್ಟವಾಗಿ ಉತ್ತರಿಸಿದ ಅವರು ಕೇಳಬೇಕು. ರಾಜಕೀಯ ವ್ಯಕ್ತಿಗಳ ಬಗ್ಗೆ ತಿಳಿಯಬೇಕೆಂಬ ಕುತೂಹಲ ಜನರಿಗೆ ಇರುತ್ತದೆ. ಆ ಕುತೂಹಲವನ್ನು ತಣಿಸುವ ಕಾರ್ಯವನ್ನು ನೀವು(ಪತ್ರಕರ್ತರು) ಮಾಡಬೇಕು . ಆದರೆ ಅವರ ಅತೀ ವೈಯಕ್ತಿಕ ವಿಚಾರಕ್ಕೆ ಕೈ ಹಾಕಬಾರದೆಂದು ನಿರ್ದೇಶನ ಕೊಟ್ಟರು.


ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ನ್ಯಾ.ಶಿವರಾಜ್ ಪಾಟೀಲ್ ಲೋಕಾಯುಕ್ತರಾಗಿ ಆಯ್ಕೆಯಾಗಿರುವುದು ವ್ಯಕ್ತಪಡಿಸಲಾರದಷ್ಟು ಸಂತೋಷದ ಸಂಗತಿ ಇವರು ಮುಂದಿನ ದಿನಗಳಲ್ಲಿ ಮೂಕ ಜನರ ಧ್ವನಿಯಾಗಿ, ಕಿವುಡು ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿ ಕೆಲಸ ಮಾಡಲಿ ಎಂಬುದು ಹಾರೈಕೆ.

ಹೈಮದ್ ಹುಸೇನ್ ದಂಡ್

1 comments:

sameer ahmed said...

good haimed thumba channagide

Post a Comment