ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಚಾತುರ್ಮಾಸ್ಯದಲ್ಲಿ ವಿಶೇಷ ಕಾರ್ಯಕ್ರಮ

ಅಮೃತಾಹಾರ: ಜೀವನ ಆಧಾರ ಆಹಾರ , ಪ್ರಾಣಾಧಾರಣೆಗೆ ಮೂಲ. ಅದು ಮೊದಲು ಭಗವದರ್ಪಿತವಾಗಬೇಕು . ನಿಷಿದ್ಧ ಕರ್ಮಗಳಿಂದ ಸಂಪಾದಿಸಿದ ವಸ್ತು ಪರಮಾತ್ಮ ಸೇವೆಗೆ ಸಲ್ಲ. ಬದುಕಿನ ಉದ್ದೇಶ ದುಃಖ ವಿದೂರವಾದ ಭಗವತ್ಸಾನಿಧ್ಯ. ಆಹಾರ ಸುದ್ಧಿಯಿಂದ ಶರೀರ ಮನಃಶುದ್ಧಿ. ಇದಕ್ಕೆ ಮೂಲಸಾಧನ ದೇಹಧಾರಣೆಗೆ ಅಗತ್ಯವಾದ ಹಿತವೂ ಪ್ರಿಯವೂ ಆದ ಆಹಾರ. ಆಹಾರವು ಸತ್ವರೂಪದಲ್ಲಿದ್ದರೆ ನಮ್ಮ ಜೀವನವೂ ಅಮೃತಮಯ. ಈ ಚಾತುರ್ಮಾಸ್ಯಕಾಲದಲ್ಲಿ ಸ್ವಸ್ಥಜೀನಕ್ಕೆ ಅಗತ್ಯವಾದ ಹಾಗೂ ರಾಸಾಯನಿಕ ಮುಕ್ತವಾದ ಸಾವಯವ ಪದ್ಧತಿಯಿಂದ ಬೆಳೆದ ಧಾನ್ಯ, ತರಕಾರಿಗಳನ್ನು ಬಳಸಲು ನಿಶ್ಚಯಿಸಿರುವುದು ವಿಶೇಷ.ಜನ್ಮಾಂತರಗಳ ದೋಷಗಳಿಂದ ಪ್ರಾಪ್ತವಾದ ಲೌಕಿಕವಾದ ಕಷ್ಟ, ಅನಿಷ್ಟಗಳನ್ನು ದೂರಮಾಡಿ ಬದುಕಿನಲ್ಲಿ ಸುಖ , ನೆಮ್ಮದಿಗಳನ್ನು ನೀಡುವ , ಅತಿಶೀಘ್ರವಾಗಿ ಫಲಗಳನ್ನು ಕೊಡುವ ವಿವಿಧ ಯಾಗಗಳನ್ನು ಚಾತುರ್ಮಾಸ್ಯದ ಸಂದರ್ಭದಲ್ಲಿ ಆಯೋಜಿಸಲಾಗಿದೆ. ನಾಡಿನ ಪ್ರಸಿದ್ಧ ಜ್ಯೋತಿಷಿಗಳು ಈಚಾತುರ್ಮಾಸ್ಯದ ಎಲ್ಲ ದಿನಗಳಲ್ಲಿಯೂ ಉಪಸ್ಥಿತರಿದ್ದು ಜಾತಕಪರಿಶೀಲನೆ ಹಾಗೂ ಪ್ರಶ್ನಚಿಂತನಗಳನ್ನು ನಡೆಸಿಕೊಡಲಿದ್ದಾರೆ.

0 comments:

Post a Comment