ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ನಿಮ್ಮ ಮಗ ಅಥವಾ ಮಗಳು ಒಳ್ಳೆಯ ಪ್ರಜೆ ಆಗಬೇಕೆ?

ಹೌದು. ಆಗಬೇಕು. ಯಾವ ಪೋಷಕರಿಗೆ ತಾನೆ ಇಷ್ಟವಿರಲ್ಲ ಹೇಳಿ...? ಹಾಗಾದರೆ ನಿಮ್ಮ ಆಸೆ ಪೂರ್ತಿಗೊಳ್ಳಲು ನೀವು ಏನು ಮಾಡಿದ್ದೀರಿ...? ನಿಮ್ಮ ಆಸೆ ಕೇವಲ ಕಲ್ಪನೆಯೇ ಅಥವಾ ನಿಜವಾಗಲೂ ಆಸೆಯೇ...? ನಿಮ್ಮ ಆಸೆ ಪೂರ್ಣಗೊಳ್ಳಲು ನೀವು ಏನು ಮಾಡಬೇಕು...? ಯೋಚಿಸಿದ್ದೀರಾ...? ಅದರ ಬಗ್ಗೆ ಪ್ಲಾನ್ ಮಾಡಿದ್ದೀರಾ...? ಇಲ್ಲ. ಹಾಗಾದರೆ ಈಗಲೇ ಪ್ಲಾನ್ ಮಾಡಿ. ಮಕ್ಕಳನ್ನು ಚಿಕ್ಕವಯಸ್ಸಿನಿಂದಲೇ ಶಾಲೆಯ ಜೊತೆಗೆ ಯಾವುದಾದರೊಂದು ಚಟುವಟಿಕೆಯಲ್ಲಿ ಕ್ರಿಯಾಶೀಲರನ್ನಾಗಿರುವಂತೆ ಮಾಡಿ.
ಆ ಕ್ರಿಯಾಶೀಲತೆ ಕ್ರೀಡೆಯಾಗಿರಬಹುದು,ಚಿತ್ರಕಲೆಯಾಗಿರಬಹುದು ಅಥವಾ ಅವರಿಗಿಷ್ಟವಾದ ಇನ್ನಾವುದೋ ಕಲೆ ಇರಬಹುದು.ಮಕ್ಕಳಲ್ಲಿ ಯಾವುದರ ಬಗ್ಗೆ ಹೆಚ್ಚು ಆಸಕ್ತಿ ಇದೆ ಎಂಬುದನ್ನು ತಿಳಿದು, ಅದರಲ್ಲೇ ಅವರು ಎತ್ತರವಾಗಿ ಬೆಳೆಯುವಂತೆ ಸಹಾಯಹಸ್ತ ಚಾಚಿದರೆ ಆ ದಿಕ್ಕಿನಲ್ಲೇ ಅವರ ಭವಿಷ್ಯ ಉಜ್ವಲಗೊಳ್ಳಬಹುದು. ಚಿಕ್ಕವಯಸ್ಸಿನಿಂದಲೇ ಮಕ್ಕಳಿಗೆ ಗುರಿ ಸಿಕ್ಕರೆ ಅವರು ತಮ್ಮ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಬೇಡವಾದ ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಅವಕಾಶಗಳನ್ನು ತಪ್ಪಿಸಬಹುದು. ಖಾಲಿ ಮನಸ್ಸು ದೆವ್ವಗಳ ಕೋಣೆ ಎನ್ನುತ್ತಾರೆ. ಮಕ್ಕಳಿಗೆ ಸಮಯದ ಮಹಿಮೆ ತಿಳಿಸದೆ ಹೋದರೆ, ಬೇರಾವುದೋ ರೀತಿಯಲ್ಲಿ ತಮ್ಮ ಸಮಯವನ್ನು ಕಳೆದು ಬಿಡಬಹುದು. ಯಾವ ಮಗುವೂ ಬಯಸಿ ಪ್ರಪಂಚಕ್ಕೆ ಬರುವುದಿಲ್ಲ. ಅವರನ್ನು ಪ್ರಪಂಚಕ್ಕೆ ತಂದ ಮೇಲೆ ಅವರಿಗೆ ಉತ್ತಮ ಬಾಳು ಕೊಡುವುದು, ಅವರ ಭವಿಷ್ಯ ರೂಪಿಸುವುದು ತಂದೆತಾಯಿಯ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. "ದೇವರಿದ್ದಾನೆ ಹೇಗಾದರೂ ಬೆಳೆಯಲಿ" ಎನ್ನುವುದು ತಪ್ಪು ಕಲ್ಪನೆ. ಯಾವುದು ಸರಿ ಯಾವುದು ತಪ್ಪು ಎಂದು ಅವರಿಗೆ ತೋರಿಸಿಕೊಟ್ಟರೆ ಅವರು ತಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವಲ್ಲಿ ಸುಲಭವಾಗುತ್ತದೆ. "ವ್ಯಕ್ತಿತ್ವ ವಿಕಸನ"ದ ಬಗ್ಗೆ ಹಲವಾರು ಕೋರ್ಸುಗಳಿವೆ. ಮಕ್ಕಳಿಗೆ ಅಂತಹ ತರಬೇತಿಗಳಿಗೆ ಕಳುಹಿಸಿ ಅವರ ವ್ಯಕ್ತಿತ್ವ ವಿಕಸನಗೊಳ್ಳಲು ಸಹಾಯ ಮಾಡಿ.

ಇಷ್ಟೆಲ್ಲಾ ಮಾಡಿದರೆ ಮಾತ್ರ ಮಕ್ಕಳು ಒಳ್ಳೆಯ ಪ್ರಜೆಗಳು ಆಗಿ ಹೋಗುತ್ತಾರೆಯೇ...?
ಒಳ್ಳೆಯ ವಾತಾವರಣದಲ್ಲಿ ಬೆಳೆದಿರುವ ಎಷ್ಟೋ ಮಕ್ಕಳು ಕೆಟ್ಟು ಹೋಗಿರುವುದನ್ನು ನಾವು ನೋಡಿದ್ದೇವೆ...!
ಎಲ್ಲರ ಮಕ್ಕಳು ಬೆಳೆದ ಹಾಗೆಯೇ ನಮ್ಮ ಮಕ್ಕಳು ಬೆಳೆಯುತ್ತಾರೆ ಬಿಡಿ, ಅದರ ಬಗ್ಗೆ ಚಿಂತೆ ಯಾಕೆ...?
ಹೀಗೆ ಅನೇಕ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಏಳುತ್ತಿರಬಹುದು... ಹೌದು ನಿಜ. ಅವರು ಅವರ ಮಕ್ಕಳು. ನೀವು ನಿಮ್ಮ ಮಕ್ಕಳ ಬಗ್ಗೆ ಯೋಚಿಸಿ.
ನಕಾರಾತ್ಮಕ ಟೀಕೆಗಳನ್ನು ಮಾಡಿ, ನಿಮ್ಮ ಜವಾಬ್ದಾರಿಯಿಂದ ನೀವು ಜಾರಿಕೊಳ್ಳಬಹುದು. ಆದರೆ ನಿಮ್ಮಲ್ಲಿ ಒಂದು ವಿನಂತಿ - ನೀವು ಸಕಾರಾತ್ಮಕವಾಗಿ ಯಾಕೆ ಯೋಚಿಸಬಾರದು....?

ಯಾರೋ ವಾಹನ ಅಪಘಾತದಲ್ಲಿ ತೀರಿಹೋದರೆ, ಬೇರೆಯವರು ಹೊಸ ವಾಹನವೇ ಖರೀದಿ ಮಾಡಬಾರದೇ...?

- ಜಬೀವುಲ್ಲಾ ಖಾನ್

0 comments:

Post a Comment