ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಬುದ್ಧಿಯ ಹೂವು ಅರಳಿತು
ವಿಚಾರ

ಲಿಂಗವ್ವಾ ಕಣಿ ಹೇಳಲು ಪ್ರತಿದಿನ ಬನಶಂಕರಿಗೆ ಬರುತ್ತಾಳೆ. ಬನಶಂಕರಿಯಮ್ಮನ ಗುಡಿಯ ಹತ್ತಿರವಿರುವ ದೊಡ್ಡ ಅರಳಿ ಮರದ ಕಟ್ಟಯೇ ಅವಳು ಖಾಯಂ ಕುಳಿತುಕೊಳ್ಳುವ ಸ್ಥಾನ. ಸುಳ್ಳುಪಳ್ಳು ಕಣಿ ಹೇಳಿ ಹೇಗೋ ಹಣ ಸಂಪಾದನೆ ಮಾಡಿ ಜೀವನ ಸಾಗಿಸುತ್ತಿದ್ದಳು. ಗುಡಿಯ ಮುಂಭಾಗದಲ್ಲಿ ಒಬ್ಬ ಭಿಕ್ಷುಕ ಕುಳಿತುಕೊಳ್ಳುತ್ತಿದ್ದ. ಆತ ಸದಾ ಲಿಂಗವ್ವಳಿಗೆ ನನ್ನ ಭವಿಷ್ಯ ಹೇಳು ಎಂದು ಪೀಡಿಸುತ್ತಿದ್ದ. ಆದರೆ ಆಕೆ 175 ರೂ. ಗಳನ್ನು ತಂದರೆ ಮಾತ್ರ ನಿನ್ನ ಭವಿಷ್ಯ ಹೇಳುವೆ ಎಂದು ಹೇಳಿ ಆತನಿಗೆ ಕಳುಹಿಸಿ ಬಿಡುತ್ತಿದ್ದಳು. ಒಮ್ಮೆ ಆತ 29 ರೂ. ಗಳನ್ನು ತೆಗೆದುಕೊಂಡು ಬಂದು, ಈಗಲಾದರೂ ನನ್ನ ಭವಿಷ್ಯ ಹೇಳು, ಉಳಿದ ಹಣವನ್ನು ಕಂತುಗಳಲ್ಲಿ ತೀರಿಸಿಬಿಡುತ್ತೇನೆ ಎಂದ. ಆದರೂ ಲಿಂಗವ್ವಳ ಮನಸ್ಸು ಕರಗಲೇ ಇಲ್ಲ. ಪೂರ್ತಿ ಹಣ ತಂದರೆ ಮಾತ್ರ ಭವಿಷ್ಯ ಹೇಳುವೆ ಎಂದು ಗದರಿಸಿ ಕಳುಹಿಸಿಬಿಟ್ಟಳು.

ಪಾಪ ಹೋದವನು ಎರಡು ದಿನ ಕಾಣಲೇ ಇಲ್ಲ. ಮಂಗಳವಾರ ಬಂದು ತೆಗೆದುಕೋ 175 ರೂಗಳನ್ನು, ಈಗ ನನ್ನ ಭವಿಷ್ಯ ಹೇಳು ಎಂದ. ಲಿಂಗವ್ವಾ - "ಎಲ್ಲಿಂದ ಕದ್ದು ತಂದೆ ಈ ದುಡ್ಡನ್ನು?" ಭಿಕ್ಷುಕ - "ನಾನೇನು ಕಳ್ಳತನ ಮಾಡಲಿಲ್ಲಿ. ಬೆವರು ಸುರಿಸಿ ಕಷ್ಷಪಟ್ಟು ಕೂಲಿ ಮಾಡಿ ಸಂಪಾದಿಸಿದ ಹಣವಿದು" ಎಂದ. ಲಿಂಗವ್ವ ಭವಿಷ್ಯ ಹೇಳಿದಳು - "ದಿನವೂ ಹೀಗೆಯೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರೆ ನಿನ್ನ ಭವಿಷ್ಯ ಚೆನ್ನಾಗಿ ಆಗುತ್ತದೆ". ಈ ಹಣ ಸಹ ತೆಗೆದುಕೊಂಡು ಹೋಗು. ಇನ್ನು ಯಾವತ್ತು ಇಲ್ಲಿ ಬರಬೇಡ". ಆತನ ದುಡಿಮೆ ನೋಡಿ ಲಿಂಗವ್ವಳ ಮನಸ್ಸನಲ್ಲಿಯೂ ಬುದ್ಧಿಯ ಹೂವು ಅರಳಿತು. ಆಕೆಯೂ ಸಹ ಭವಿಷ್ಯ ಹೇಳುವುದನ್ನು ಬಿಟ್ಟು ಹೂವು ಮಾರುವ ಅಂಗಡಿಯನ್ನು ಪ್ರಾರಂಭಿಸಿದಳು.

- ಜಬೀವುಲ್ಲಾ ಖಾನ್

0 comments:

Post a Comment