ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಗೋಕರ್ಣ : ಸೇವೆ ನಮ್ಮ ಅಹಂಕಾರವನ್ನು ಅಳಿಸಿ ದೋಷಗಳನ್ನು ದೂರಗೊಳಿಸಿ ಪರಮಾತ್ಮನನ್ನು ದೊರಕಿಸುವ ಶ್ರೇಷ್ಠಸಾಧನ.ಸೇವೆ ಸುಲಭಸಾಧ್ಯವಲ್ಲ, ಶ್ರೀಮಠದ ಪರಿವಾರದಸದಸ್ಯರು ಉಳಿದೆಲ್ಲವನ್ನೂ ಮರೆತು ತ್ರಿಕರಣಪೂರ್ವಕವಾಗಿ ಶ್ರೀ ಪೀಠದಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಕಾಲಕ್ಕನುಗುಣವಾಗಿ ವಿಹಿತವಾದ ಸೇವೆಯನ್ನು ಮಾಡುವ ಇವರು ಎಲೆಮರೆಯಕಾಯಿಗಳು.ನಮ್ಮ ಯಶಸ್ಸಿನ ಹಿಂದೆ ಇವರೆಲ್ಲರ ಸಂಘಟಿತ ಪರಿಶ್ರಮವಿದೆ.ಇದನ್ನು ಶಿಷ್ಯಸಮಾಜವು ಗುರುತಿಸಿ ಗೌರವಿಸಬೇಕಾಗಿದೆ ಎಂದು ಶ್ರೀ ಶ್ರಿಮದ್ರಾಘವೇಶ್ವರ ಭಾರತೀ ಶ್ರೀಗಳವರು ಹೇಳಿದ್ದಾರೆ.

ಇಂದು ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿದ್ದ ಶ್ರೀಪರಿವಾರದ ಭಿಕ್ಷಾಕಾರ್ಯಕ್ರಮದ ಅಂಗವಾಗಿ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಪರಿವಾರದ ಸದಸ್ಯರು ಯಾರೂ ನೌಕರರಲ್ಲ,ಅಥವಾ ವೇತನಕ್ಕಾಗಿ ಸೇವೆ ಸಲ್ಲಿಸುವವರೂ ಅಲ್ಲ. ಕೇವಲ ಗುರುಸೇವೆಯ ಧನ್ಯತಾಭಾವವನ್ನು ಹೊಂದಲೆಂದೇ ತಮ್ಮ ಬದುಕನ್ನು ಮುಡುಪಾಗಿಟ್ಟ ಈ ಪರಿವಾರಸದಸ್ಯರ ಸೇವೆಯನ್ನು ಯಾವುದಕ್ಕೂ ಹೋಲಿಸಲಾಗದು. ಇವರೆಲ್ಲರೂ ಶ್ರೀ ಪೀಠಕ್ಕೆ ಮಕ್ಕಳಿದ್ದಂತೆ.ಎಂದೂ ಹೊರೆಯಾಗದ ನಮ್ಮ ಹೊರೆಯನ್ನು ಕಡಿಮೆ ಮಾಡುವ ಇವರು ನಮ್ಮನ್ನು ಸದಾ ಸುತ್ತುವರೆದು ನಮ್ಮ ಬೇಕು ಬೇಡಗಳನ್ನು ಗಮನಿಸುತ್ತಾರೆ. ಸೂರ್ಯನ ಪ್ರಖರಕಿರಣಗಳ ಶಾಖವನ್ನು ತಾನು ಹೀರಿಕೊಂಡು ನಮಗೆ ಬೆಳಕನ್ನು ನೀಡುವ ವಾತಾವರಣದಂತಿರುವ ಇವರ ಸೇವಾಧರ್ಮ ಅತ್ಯಂತ ಮಹತ್ದ್ದು ಎಂದು ಹೇಳಿ ಎಲ್ಲರೂ ಈ ಸೇವಾಭಾವನೆಯ ಮಹತ್ವನ್ನು ಅರಿಯುವಂತಾಗಲಿ ಎಂದು ಆಶಿಸಿದರು.ಇದೇ ಸಂದರ್ಭದಲ್ಲಿ ಮೂವ್ವತ್ತನಾಲ್ಕನೆಯ ಪೀಠಾಧಿಪತಿಗಳ ಕಾಲದಿಂದಲೂ ಶ್ರೀಪೀಠಕ್ಕೆ ಸೇವೆಸಲ್ಲಿಸುತ್ತಿರುವ ಅತ್ಯಂತ ಹಿರಿಯ ಕೆಕ್ಕಾರಿನ ಶ್ರೀ ರಾಯರಮನೆ ಗಣಪತಿ ಭಟ್ಟ ದಂಪತಿಗಳನ್ನು ಶ್ರೀಪರಿವಾರದ ಪರವಾಗಿ ಸಮ್ಮಾನಿಸಿದರು.ಸಮ್ಮಾನಿತರಾದ ಶ್ರಿ ಗಣಪತಿ ಭಟ್ಟರು ಜನ್ಮಾಂತರದ ಪುಣ್ಯದಿಂದ ಮಾತ್ರ ಗುರುಸೇವಾಭಾಗ್ಯ ದೊರಕಲು ಸಾಧ್ಯ..ತ್ರಿಕರಣಪೂರ್ವಕವಾಗಿ ಮಾಡಿದ ಗುರುಸೇವೆ ನಮ್ಮ ಎಲ್ಲ ಅಭ್ಯುದಯಕ್ಕೆ ಕಾರಣವಾಗುತ್ತದೆಂದು ಹೇಳಿದರು.ಶ್ರೀಮಠದ ಮಾಧ್ಯಮ ವಿಭಾಗದ ಮೋಹನ ಭಾಸ್ಕರ ಹೆಗಡೆಯವರಿಂದ ಪ್ರಾಸ್ತಾವಿಕ ನಡೆಯಿತು.ವೇ.ಸುಬ್ರಹ್ಮಣ್ಯ ಶಾಸ್ತ್ರೀ ಉಂಚಗೇರಿ,ವೇ.ಮಂಜುನಾಥ ಭಟ್ಟ,ವಿದ್ವಾನ್ ಜಗದೀಶ ಶರ್ಮಾ ಶ್ರೀಪರಿವಾರದ ಕುರಿತಾಗಿ ತಮ್ಮ ಅನಿಸಿಕೆಯನ್ನು ನಿವೇದಿಸಿದರು. ವಿದ್ವಾನ್ ಬಾಬು ಭಟ್ಟರು ಸಮ್ಮಾನಿತರ ಪರಿಚಯವನ್ನು ಮಾಡಿಕೊಟ್ಟರು.
ಶ್ರೀಸವಾರಿಯ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥರು ಕಾರ್ಯಕ್ರಮವನ್ನು ನಿರ್ವಹಿಸಿದರು.

ವರದಿ: ಸತ್ಯನಾರಾಯಣ ಶರ್ಮ

0 comments:

Post a Comment