ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಪುತ್ತೂರು: ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಹೀಗೊಂದು ಸಂದೇಶ ಪ್ರತಿ ದಿನ ರವಾನೆಯಾಗುತ್ತಲೇ ಇದೆ. ನಿಮಗೆ ಕರೆ ಮಾಡುವ ಅನಾಮಿಕ ವ್ಯಕ್ತಿಯೊಬ್ಬ #90 ಅಥವಾ #09 ಡಯಲ್ ಮಾಡಲು ಹೇಳಿದಾಗ ನೀವೆಲ್ಲಾದರೂ ಡಯಲ್ ಮಾಡಿದಿರಿ ಎಂದರೆ ನಿಮ್ಮ ಮೊಬೈಲ್ ಸಂಖ್ಯೆಯಿಂದ ಅವರೂ ಮಾತನಾಡಬಹುದು. ಭಯೋತ್ಪಾದಕರು ಈ ತಂತ್ರವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಈ ಮಾಹಿತಿ ಹೇಳುತ್ತದೆ.ಪ್ರತಿದಿನ ಇಂತಹದ್ದೊಂದು ಸುದ್ದಿ ಇಮೈಲ್ನಲ್ಲಿ ರವಾನೆಯಾಗುತ್ತಿದೆ. ಹಾಗೆಂದು ಈ ಮಾಹಿತಿಯನ್ನು ಅಷ್ಟು ಸಲೀಸಾಗಿ ತಳ್ಳಿ ಹಾಕುವಂತೆಯೂ ಇಲ್ಲ. ಇಂದಿನ ಆಧುನಿಕ ಯುಗದ ತಂತ್ರಜ್ಞಾನಗಳಲ್ಲಿ ಯಾವುದನ್ನೂ ಅಲ್ಲಗಳೆಯುವ ಹಾಗಿಲ್ಲ. ಹಾಗೆಂದು ಯಾವುದನ್ನೂ ನಂಬುವಂತೂ ಇಲ್ಲ. ಈಗ ಇಂದಿನ ದಿನ ಭಯೋತ್ಪಾದನೆಯ ಜೊತೆಗೆ ಇದರ ಸಂಪರ್ಕ ಇದೆ ಎಂದು ಮೈಲ್ನಲ್ಲಿ ಬರುವ ಸಂದೇಶ.


ನಿಮಗೆ ಯಾರಾದರೂ ಕರೆ ಮಾಡಿ , ನಾವು ಸರ್ವಿಸ್ ಪ್ರೊವೈಡರ್ನಿಂದ ಕರೆ ಮಾಡುತ್ತಿರೋದು , ನಿಮ್ಮ ಮೊಬೈಲ್ ಹಾಗೂ ಸಂಖ್ಯೆ ಸರಿ ಇದೆಯೇ ಎಂದು ಪರೀಕ್ಷಿಸಲು #90 ಅಥವಾ #09 ಡಯಲ್ ಮಾಡಿ ಎಂದು ಹೇಳಲಾಗುತ್ತದೆ.ಒಂದು ವೇಳೆ ಈ ಸಂಖ್ಯೆಯನ್ನು ಒತ್ತಿದಾಕ್ಷಣ ಈ ಜಾಲದ ತಂಡವು ನಿಮ್ಮ ಸಂಖ್ಯೆಯನ್ನು ಟ್ಯಾಪ್ ಮಾಡುತ್ತದೆ. ಆ ನಂತರ ನಿಮ್ಮ ಸಂಖ್ಯೆಯನ್ನು ಬಳಸಿಕೊಂಡು ಅವರು ಕರೆ ಮಾಡಬಹುದು. ಭಯೋತ್ಪಾದಕರು ಈ ಜಾಲವನ್ನು ಹೆಚ್ಚು ಬಳಸಿಕೊಂಡು ಅಮಾಯಕರನ್ನು ಬಲಿಪಶು ಮಾಡುವ ತಂತ್ರ ಇದಾಗಿದೆ ಎಂದು ಹೇಳುತ್ತದೆ ಈ ಮಾಹಿತಿ. ಇದೊಂದು ದೊಡ್ಡ ಜಾಲವಾಗಿದ್ದು ಈಗಾಗಲೇ 3 ಮಿಲಿಯನ್ ಮೊಬೈಲ್ಗಳಿಗೆ ತೊಂದರೆಯಾಗಿದೆ ಎಂದು ಹೇಳುತ್ತವೆ ಕೆಲ ಕಂಪನಿಗಳು.
ಒಟ್ಟಿನಲ್ಲಿ ಇದೊಂದು ವ್ಯವಸ್ಥಿತ ಜಾಲವೋ ಅಥವಾ ಜನರನ್ನು ತಪ್ಪು ದಾರಿಗೆಳೆವ ಪ್ರಯತ್ನವೋ ಗೊತ್ತಿಲ್ಲ. ಒಂದು ವೇಳೆ #09 ಮತ್ತು #90 ಮೂಲಕ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಳ್ಳಲು ಸಾಧ್ಯವೇ ? ಸಾಧ್ಯವಾದರೆ ಹೇಗೆ ಎಂದೆಲ್ಲಾ ವಿಶ್ಲೇಷಣೆ ಇನ್ನು ನಡೆಯಬೇಕಿದೆ. ಏನಿದ್ದರೂ ಇಂದು ಅತ್ಯಂತ ಎಚ್ಚರಿಕೆ ವಹಿಸಬೇಕಾದ ಕಾಲವಿದು.- ಮಹೇಶ್ ಪುಚ್ಚಪ್ಪಾಡಿ

0 comments:

Post a Comment