ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಸುರತ್ಕಲ್ : ಎಂ.ಆರ್.ಪಿ.ಎಲ್ ನ ವಿಸ್ತರಣಾ ಘಟಕ ಪೆರ್ಮುದೆಯಿಂದ ಅತ್ರುಕೋಡಿ - ಕಾಟಿಪಳ್ಳ ರಸ್ತೆಯನ್ನು ಅಗೆದು ಅದರ ಮಧ್ಯಭಾಗದಲ್ಲಿ ಪೈಪ್ ಲೈನ್ ಅಳವಡಿಸುವ ಕಾರ್ಯಕ್ಕೆ ಸಾರ್ವಜನಿಕರ ಪ್ರತಿಭಟನೆ ಇದ್ದರೂ ಮತ್ತೆ ಕಾಮಗಾರಿಯನ್ನು ಆರಂಭಿಸಿದ ಬಗ್ಗೆ ಆಕ್ರೋಶಗೊಂಡ ಕುತ್ತೆತ್ತೂರು ಗ್ರಾಮಸ್ಥರು ಗ್ರಾಮಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಈ ಹಿಂದೆಯೂ ಇಂತಹಾ ಪ್ರಯತ್ನಕ್ಕೆ ತಡೆ ಉಂಟುಮಾಡಲಾಗಿತ್ತು.


ಜಿಂದಾಲ್ ಸಂಸ್ಥೆಯು ಈ ಪೈಪ್ ಲೈನ್ ಅಳವಡಿಕೆಯ ಕಾಮಗಾರಿಯ ಗುತ್ತಿಗೆಯನ್ನು ಪಡೆದಿದ್ದು, ಕಾಮಗಾರಿ ಆರಂಭಿಸಲು ಪಡೆದ ಅನುಮತಿಯ ಬಗ್ಗೆ ಸ್ಥಳೀಯರು ಪ್ರಶ್ನಿಸಿದರು. ಜಿಲ್ಲಾಪಂಚಾಯತ್ ಅನುಮತಿ ನೀಡಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ಹೇಳಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯತನ್ನು ಸಂಪರ್ಕಿಸಿದಾಗ ಸ್ಥಳೀಯ ಗ್ರಾಮ ಪಂಚಾಯತ್ ಅನುಮತಿಯನ್ನು ಪಡೆದ ನಂತರ ಕಾಮಗಾರಿ ಆರಂಭಿಸಲು ಜಿಲ್ಲಾ ಪಂಚಾಯತ್ ಸೂಚಿಸಿದೆ ಎಂದು ತಿಳಿದು ಬಂದಿತ್ತು.

ಸ್ಥಳೀಯ ಪೆರ್ಮುದೆ ಪಂಚಾಯತ್ ಈ ಕಾಮಗಾರಿಗೆ ಅನುಮತಿ ನೀಡದಿದ್ದ ಕಾರಣ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯರು ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಪಟ್ಟು ಹಿಡಿದದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಸ್ಥಳೀಯ ಪಂಚಾಯತ್ಗೆ, ರಸ್ತೆಯನ್ನು ಉಪಯೋಗಿಸುವ ಸಾರ್ವಜನಿಕರಿಗೆ ಮತ್ತು ಇಲ್ಲಿನ ಕೃಷಿಕರಿಗೆ ಪೈಪ್ ಲೈನ್ ಯಾವುದಕ್ಕಾಗಿ ಅಳವಡಿಸಲಾಗುತ್ತಿದೆ ಎಂಬ ಮಾಹಿತಿಯನ್ನೇ ನೀಡದೆ ಕಾಮಗಾರಿ ಆರಂಭಿಸಿದ್ದು ಸ್ಥಳೀಯರನ್ನು ರೊಚ್ಚಿಗೆಬ್ಬಿಸಿದೆ. ಪ್ರತಿಭಟನೆಯ ನೇತೃತ್ವವನ್ನು ಪಂಚಾಯತ್ ಸದಸ್ಯ ಶ್ರೀಧರ ಶೆಟ್ಟಿ, ಮಾಜಿ ಸದಸ್ಯ ಥೋಮಸ್ ಮುಂತಾದವರು ವಹಿಸಿದ್ದರು.

-ರವೀಂದ್ರ ಶೆಟ್ಟಿ ಕುತ್ತೆತ್ತೂರು.

0 comments:

Post a Comment