ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:59 PM

ಭುಜ ಪೀಡಾಸನ

Posted by ekanasu

ವೈವಿಧ್ಯ
ಇಲ್ಲಿ ಭುಜ ಎಂದರೆ ಹೆಗಲು ಯಾ ಕೈ ರಟ್ಟೆ, ಪೀಡಾ ಎಂದರೆ ವೇದನೆ ಹಾಗೂ ಒತ್ತಡ. ಈ ಭಂಗಿಯಲ್ಲಿ ಮೊಣಕಾಲುಗಳ ಹಿಂಭಾಗವನ್ನು ಹೆಗಲಿಗೆ ಇಟ್ಟು, ದೇಹವನ್ನು ಕೈಗಳ ಆಧಾರದಿಂದ ಸಮತೋಲನ ಸ್ಥಿತಿಯಲ್ಲಿ ನಿಲ್ಲಿಸಬೇಕು. ಆಸನಗಳನ್ನು ಗುರುಮುಖೇನನೇ ಕಲಿತು ಅಭ್ಯಾಸ ಮಾಡಬೇಕು. ಇದೊಂದು ಕೈಗಳ ಆಧಾರದಿಂದ ಮಾಡುವಂತಹ ಯೋಗಾಸನವಾಗಿದೆ.ಅಭ್ಯಾಸ ಕ್ರಮ

ಜಮಖಾನದ ಮೇಲೆ ತಾಡಾನಸದಲ್ಲಿ ನಿಂತು ಕಾಲುಗಳ ಅಂತರವನ್ನು 2 ಅಡಿಯಷ್ಟು ಮಾಡಿ ಉಸಿರನ್ನು ಬಿಡುತ್ತಾ ದೇಹವನ್ನು ಮುಂದಕ್ಕೆ ಬಾಗಿಸುವಾಗ ಮೊಣಕಾಲುಗಳನ್ನು ಬಾಗಿಸಿ ಕೈಗಳನ್ನು ನೆಲಕ್ಕೆ ಊರಿ ತೊಡೆಗಳ ಹಿಂಭಾಗವನ್ನು ತೋಳುಗಳಲ್ಲಿ ಇಟ್ಟು ಕೈಗಳ ಆಧಾರದಿಂದ ಸಮತೋಲನ ಸ್ಥಿತಿಯಲ್ಲಿ ಅಭ್ಯಾಸ ಮಾಡುತ್ತಾ ದೇಹವನ್ನು ಎತ್ತಬೇಕು. ಆಮೇಲೆ ಕಾಲುಗಳನ್ನು ಒಂದಕ್ಕೊಂದು ಹೆಣೆಯಬೇಕು( ಚಿತ್ರದಲ್ಲಿ ಇರುವಂತೆ) ಈ ಸ್ಥಿತಿಯಲ್ಲಿ ಕೈಗಳು ನೇರವಾಗಿರಬೇಕು. ಆ ಮೇಲೆ ಸ್ವಲ್ಪಹೊತ್ತು ಸಹಜ ಉಸಿರಾಟ ನಡೆಸುತ್ತಾ ಉಸಿರನ್ನು ಬಿಡುತ್ತಾ ದೇಹವನ್ನು ಕೆಳಗಿಳಿಸಿ ವಿಶ್ರಮಿಸಬೇಕು.

ಪ್ರಯೋಜನಗಳು

ಈ ಆಸನದಿಂದ ತೋಳುಗಳು ಮತ್ತು ಹೆಗಲುಗಳು ಬಲಯುತವಾಗಿ ವೇದನೆಯು ಪರಿಹಾರವಾಗುತ್ತದೆ. ಕಿಬ್ಬೊಟ್ಟೆಯ ಮಾಂಸ ಖಂಡಗಳಿಗೆ ಶಕ್ತಿ ಒದಗಿ ದೇಹದ ಜಡತ್ವ ಹೋಗಿ ಲಘುತ್ವ ಉಂಟಾಗುತ್ತದೆ. ಹಾಗೂ ಲವಲವಿಕೆ ಒದಗಿ ಬರುತ್ತದೆ. ಈ ಆಸನ ಅಭ್ಯಾಸ ಮಾಡುವುದರಿಂದ ದೇಹದ ಸಮತೋಲನ ಸ್ಥಿತಿ ಕಾಪಾಡಲು ಸುಲಭವಾಗುತ್ತದೆ. ಈ ಆಸನ ಅಭ್ಯಾಸಕ್ಕೆ ಮನಸಿನ ದೃಢತೆ ಮುಖ್ಯವಾಗಿದೆ.

-'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರಾಷ್ಟ್ರೀಯ ಯೋಗ ತೀರ್ಪುಗಾರರು,

0 comments:

Post a Comment