ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಪುರಾತನ ಸಂಪ್ರದಾಯದಂತೆ ಯಾಮಪೂಜೆಯನ್ನು ದಿನಾಂಕ ಜು.28 ನೇ ಗುರುವಾರದಂದು ನಡೆಸಲಾಗುವುದು. ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಳದ ನೇತೃತ್ವದಲ್ಲಿ ಈ ಕಾರ್ಯಕ್ರಮವು ಲೋಕಕಲ್ಯಾಣಾರ್ಥವಾಗಿ ಜರುಗಲಿದೆ.


ಸಮಸ್ತರಿಗೂ ಜಗದೀಶ್ವರನ ಶ್ರೀರಕ್ಷೆ ದೊರೆಯಲೆಂದು ಸಂಕಲ್ಪ ಹಾಗೂ ಪ್ರಾರ್ಥನೆಯೊಂದಿಗೆ ಎಂಟೂ ಯಾಮಗಳ ಕಾಲದಲ್ಲಿ ಶ್ರೀಆತ್ಮಲಿಂಗಕ್ಕೆ ಅಭಿಷೇಕ ಮತ್ತು ಪ್ರತಿ ಯಾಮದ ಅಂತ್ಯಕ್ಕೊಂದು ಪೂಜಾ ವಿಧಾನಗಳೊಂದಿಗೆ ಜರುಗಲಿರುವ ಈ ಕಾರ್ಯಕ್ರಮದ ಅಂತ್ಯಕ್ಕೆ ಅಂದರೆ ಜುಲೈ29ರ ಶುಕ್ರವಾರ ಮಹಾರುದ್ರ ಹವನವನ್ನು ನಡೆಸಲಾಗುವುದು ಹಾಗೂ ಹೂವಿನಪೂಜೆ, ಮಹಾಮಂಗಳಾರತಿ ಇರುತ್ತದೆ.ಈ ಕಾರ್ಯಕ್ರಮಕ್ಕೆ ಭಗವದ್ಭಕ್ತರೆಲ್ಲರೂ ಆಗಮಿಸಿ ಪ್ರಸಾದ ಸ್ವೀಕರಿಸಬೇಕಾಗಿ ಭಕ್ತಜನತೆಯಲ್ಲಿ ಕೋರಲಾಗಿದೆ.

0 comments:

Post a Comment