ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ದಕ್ಷಿಣಕನ್ನಡ ಪೂರ್ವದ ಕಾಲದಲ್ಲಿ 'ನಾಗಲೋಕ' ಎಂದೇ ಪ್ರಸಿದ್ಧಿಯನ್ನು ಪಡೆದಿತ್ತು. ಈಗ ಇಲ್ಲಿನ ಜನರೆಲ್ಲ
ನಾಗಾರಧನೆಯನ್ನು ಮಾಡುತ್ತಾ ಹಾಗೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ದಕ್ಷಿಣಕನ್ನಡದ ಜನರ ಆಡು ಭಾಷೆ ತುಳುವಾಗಿರುವುದರಿಂದ 'ತುಳುನಾಡು' ಎಂದೇ ಪ್ರಖ್ಯಾತ ಹೊಂದಿದೆ. ಭೌಗೋಳಿಕವಾಗಿ ಒಂದು ಬಗೆಯಲ್ಲಿ ಪ್ರತ್ಯೇಕತೆಯನ್ನು ಉಳಿಸಿಕೊಂಡು ವಿವಿಧ ಜನವರ್ಗದ ನೆಲೆವೀಡಾಗಿ. ವೈವಿಧ್ಯ ಪೂರ್ಣವಾದ ಜನಪದ ಸಾಹಿತ್ಯದ ಗಣಿಯನ್ನೇ ಹೊಂದಿ ಆದಿಯಿಂದಲೇ ದೇಶ ವಿದೇಶಗಳಿಗೆ ಕುತೂಹಲ ಅರಳಿಸಿದ ನಾಡು ಈ 'ತುಳುನಾಡು'.


ತುಳುನಾಡಿನ ಜನರು ಹಿಂದೆ ದಿನ ಬಳಕೆಯ ವಸ್ತುಗಳನ್ನಾಗಿ ಯಾವುದನ್ನೆಲ್ಲ ಬಳಸುತ್ತಿದ್ದರು? ಹಾಗೂ ಇದನ್ನು ಯಾವುದರಿಂದ ಮಾಡುತ್ತಿದ್ದರು ಅಂದರೆ ನೂರಕ್ಕೆ ನೂರು ಮಣ್ಣಿನಿಂದ ಮತ್ತು ಮರದಿಂದ ದಿನವಸ್ತುಗಳ ಪರಿಕರಗಳನ್ನು ತಯಾರಿಸುತ್ತಿದ್ದರು. 'ಮಣ್ಣಿನಿಂದಲೇ ಹೊನ್ನು' ಎನ್ನುವ ಹಾಗೆ ಮಣ್ಣನ್ನೇ ದೇವರು ಎಂದು ಪೂಜಿಸಿ, ಆರಾಧಿಸಿದ ನಾಡು ನಮ್ಮದು.

ಈ ದಿನ ಬಳಕೆಯ ವಸ್ತುಗಳತ್ತ ಒಂದು ನೋಟ

ಹೂಜಿ: ಇದನ್ನು ಮಣ್ಣಿನಿಂದ ತಯಾರಿಸುತ್ತಾರೆ. ಇದನ್ನು ನೋಡಲು 'ಊಜಿ' ಗಿಡವನ್ನು ಹೋಲುವುದರಿಂದ ಊಜೆ ಅಥವಾ ಹೂಜಿ ಎಂದು ಹೆಸರು ಬಂದಿರಬಹುದು. ವ್ಯವಸಾಯದ ಅಥವಾ ಬೇಸಿಗೆಕಾಲದ ಸಂದರ್ಭದಲ್ಲಿ ಇದರಲ್ಲಿ ನೀರನ್ನು ಶೇಖರಿಸಿಡುತ್ತಿದ್ದರು. ಯಾಕಂದರೆ ಸುಸ್ತಾದಾಗ ಇದರಲ್ಲಿದ್ದ ನೀರನ್ನು ಕುಡಿದರೆ ತಂಪಾಗಿರುತ್ತೆ, ಹಾಗೂ ಬಹಳ ರುಚಿಯಾಗಿರುತ್ತೆ. ಹಾಗೂ ವಾಹ ಇಂಗಿ ಹೋಗುತ್ತದೆ. ಒಂದಂತೂ ನಿಜಿ ಇಂದೊಂದು ಆಗಿನ ಕಾಲದ 'ಚಿಕ್ಕ ಪ್ರಿಜ್ಡ್'

ನೀರಾಡ್ಯರ: ಇದನ್ನು ಮಣ್ಣಿನಿಂದಲೇ ಮಾಡುತ್ತಾರೆ. ಹಾಗೂ ಇದರ ಹೆಸರನ್ನು ಕೇಳಿದಾಕ್ಷಣ ನೆನಪಾಗುವುದು 'ಮಾವಿನ ಮಿಡಿ' ಈ ನೀರಾಡ್ಯರ ಏನೆಂದರೆ ಹೆಸರೇ ಸೂಚಿಸಿರುವಂತೆ ನೀರನ್ನು ತುಂಬಿಸಿರುವ ಪಾತ್ರೆ. ಆದರೆ ಸ್ವಲ್ಪ ವಿಶೇಷತೆ ಇದೆ, ಅದೇನೆಂದರೆ ಜನರು ಬೇಸಿಗೆ ಕಾಲದ ಸಂದರ್ಭದಲ್ಲಿ ಆಗುವ ಮಾವು, ಹಲಸಿನ ಕಾಯಿ, ಪೆಜಕಾಯಿ, ಚಲ್ಲಂಗಾಯಿ ಈಗೆ ಅನೇಕ ತರದ ಕಾಯಿ/ ಹಣ್ಣು ಈ ನೀರಾಡ್ಯರದಲ್ಲಿ ಉಪ್ಪು ನೀರಿನೊಂದಿಗೆ ಈ ಬಗೆಯ ಕಾಯಿ/ ಮಿಡಿಯನ್ನು ಹಾಕಿ ಇದರ ಉಪಯೋಗವನ್ನು ಮಳೆಗಾಲದ ಸಂದರ್ಭದಲ್ಲಿ ಪಡೆಯುತ್ತಿದ್ದರು. ಹಾಗೂ ಇದರಲ್ಲಿ ಹಾಕಿದ ವಸ್ತುಗಳು ಬೇಗನೇ ಹಾಳಾಗುವುದಿಲ್ಲ. ಇದು ಸುಮಾರು ಎರಡು ವಸ್ತ್ರುಗಳವರೆಗೆ ಇರುತ್ತದೆ.

ಮರಾಯಿ: ಹೆಸರೇ ಸೂಚಿಸಿರುವಂತೆ ಮರದಿಂದ ಮಾಡಿದ ಪಾತ್ರೆಯೇ ಮರಾಯಿ ನೋಡಲು ಬಹಳ ಸೊಗಸಾಗಿತುತ್ತೆ ಹಾಗೂ ಪೊಣ್ಣೆ ಮರದಿಂದ ಮಾಡಿರುವುದರಿಂದ ಬಹಳ ಗಟ್ಟಯಾಗಿಯೇ ಇರುತ್ತದೆ. ಇದರ ಉಪಯೋಗ ಎಂದರೆ ಅನ್ನದ ನೀರನ್ನು ಹಾಕಲು ಹಿಂದೆ ಇದನ್ನು ಬಳಸುತ್ತಿದ್ದರು. ಈಗ ಈ ಒಂದು ಉಪಕರಣವನ್ನು ನೋಡವುದೇ ಬಹಳ ಅಪರೂಪ.

ಕುಟ್ಪು ಮತ್ತು ಕೈಸಡಿ: 'ಕುಟ್ಪು' ಇದನ್ನು 'ಇಲ್ಬೂರ್' ಎನ್ನುವ ಹಗ್ಗದಿಂದ ಮಾಡುತ್ತಾರೆ. 'ಕೈಸಡಿ'ಯನ್ನು ಮಾವಿನಮರ ಅಥವಾ ಹಲಸಿನ ಮರದಿಂದ ಮಾಡುತ್ತಿದ್ದರು. ಇದರ ಉಪಯೋಗ ಏನಂದರೆ ಅನ್ನವ ಪಾತ್ರೆಯನ್ನು ಬಸಿಯುವಾಗ ಅನ್ನು ಮರಾಯಿಗೆ ಚೆಲ್ಲದಂತೆ ಅನ್ನದ ಬಾಯಿಗೆ ಈ ಎರಡು ಪರಿಕರಗಳನ್ನು ಬಳಸಿ ಅನ್ನು ಮತ್ತು ಅನ್ನದ ನೀರನ್ನು ಬೇರ್ಪಡಿಸುತ್ತಿದ್ದರು.

ಶಾವಿಗೆ ಮತ್ತು ಇಡ್ಲಿ ಮಾಡುವ ಸಾಧನ: ಶಾವಿಗೆ ಮಾಡುವ ಸಾಧನವನ್ನು ಮರದಿಂದ ಮಾಡುತ್ತಿದ್ದರು ಹಾಗೂ ಇಡ್ಲಿ ಮಾಡುವ ಸಾಧನವನ್ನು ಮಣ್ಣಿನಿಂದ ತಯಾರಿಸುತ್ತಿದ್ದರು. ಇಡ್ಲಿಗೆ ಒಂದು ದೊಡ್ಡ ಕರ (ಪಾತ್ರೆ) ಹಾಗೂ ಕಿನ್ನಿಗದ್ದವು' ಇದರಲ್ಲಿ ಇಡ್ಲಿಯನ್ನು ಹಾಕಿ ಬೇಯಿಸಲು ಇಡುತ್ತಿದ್ದರು.

ಗಳಿಗೆ ಬಟ್ಟಲು: ಗಳಿಗೆ ಬಟ್ಟಲು ಅಂದರೆ ಗಂಟೆಯನ್ನು ನೋಡುವ ಹಾಗೂ ತಿಳಿಯುವ ಸಾಧನ. ಹಿಂದೆ ಜನರು ಇದನ್ನು ಹೇಗೆ ಉಪಯೋಗಿಸುತ್ತಿದ್ದರೆಂದರೆ ಒಂದು ಅಗಲವಾದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಅದಕ್ಕೆ ಚಿಕ್ಕಾದಾದ ಪಿಗಾಣಿಯನ್ನು ತೇಲಿಸಿ ಬಿಡುತ್ತಿದ್ದರು. ನಮ್ಮ ಗಡಿಯಾರದ ಮುಳ್ಳ್ಳು ಹೇಗೆ ತಿರುಗುತ್ತದೆಯೋ ಆ ರೀತಿ ಈ ಚಿಕ್ಕ ಪಿಂಗಾಣಿ ತಿರುಗುತ್ತದೆ. ಆ ಮೂಲಕ ಜನರು ಗಳಿಗೆಯನ್ನು ನೋಡುತ್ತಿದ್ದರು.

ಜಾಣ್ಮಿ ಪರೀಕ್ಷೆ ಮಾಡುವ ಸಾಧನ: ಜಾಣ್ಮಿ ಪರೀಕ್ಷೆ ಮಾಡುವ ಸಾಧನವನ್ನು ಮರದಿಂದ ತಯಾರಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಒಬ್ಬನಿಗೆ ಪ್ರಶ್ನೆಯನ್ನು ಕೇಳಿದರೆ ಅವನು ಉತ್ತರವನ್ನು ನೀಡುಲು ಸಮರ್ಥನೂ, ಅಲ್ಲವೋ ಎಂದು ತಿಳಿಯಲು ಉಪಯೋಗಿಸುತ್ತಿದ್ದರು. ಇದನ್ನು ಹೇಗೆ ಮಾಡುತ್ತಿದ್ದರು ಎಂದರೆ ಎರಡು ಮರದ ಉದ್ದದ ತುಂಡುಗಳು ಹಾಗೂ ಇದರ ನಡುವೇ ನಾಲ್ಕೆದು ಚಿಕ್ಕ ಚಿಕ್ಕ ತುಂಡುಗಳು, ಇದರ ಮಧ್ಯೆದ ಒಳಗೆ ಹಗ್ಗ ಹಾಕಿರುತ್ತಾರೆ. ಹಗ್ಗವನ್ನು ತೆಗೆದರೆ ಅವನು ಉತ್ತರ ಹೇಳಲು ಸಾಮರ್ಥ್ಯವುಳ್ಳವನು ಎಂದು ತಿಳಿದು ಕೊಳ್ಳುತ್ತಿದ್ದರು.

ತೊಟ್ಟಿಲ್: ತೊಟ್ಟಿಲ್ ಅಂದರೆ ತೊಟ್ಟಿಲು ಇದರಲ್ಲೇನಿದೆ ವಿಶೇಷ ಅಂತ ಅನ್ಕೊಳ್ಳಬಹುದು ಆದರೆ ಹಿಂದೆ ತಯಾರಿಸುತ್ತಿದ್ದ ತೊಟ್ಟಿಲು ಬಹಳ ಸಂಪ್ರದಾಯಿಕವಾದದ್ದು ಹಾಗೂ ಅರ್ಥಪೂರ್ಣವಾದದ್ದು. ಅದೇನಂದರೆ ಹಣವನ್ನು ಸುಡುವ ಮೊದಲು ಒಂದು ಮಾವಿನ ಮರದ ಹಲಗೆಯನ್ನು ತುಂಡರಿಸಿ ಹೆಣವನ್ನು ಸುಡುತ್ತಾರೆ. ಹಾಗೆಯೇ ಅದರಲ್ಲಿ ಉಳಿದ ಮರದ ತುಂಡನ್ನು ಮಗು ಮಲಗುವ ಜಾಗಕ್ಕೆ ಹಾಕುತ್ತಾರೆ. ಇದರ ಅರ್ಥ ಒಂದು ಬಿದ್ದು ಹೋಗುವ ಜೀವ ಅದು ಇನ್ನೊಂದಕ್ಕೆ ಮಾರ್ಗದರ್ಶನವಾಗಿರಲಿ ಹಾಗೂ ಒಂದು ಜೀವ ಸಾಯುವಂತಹದ್ದು. ಬೂದಿಯಾಗುವಂತಹದ್ದು, ಆದರೆ ಇನ್ನು ಮಲಗುವ ಜೀವ ಬಾಳಿ ಬದುಕಬೇಕಾದದ್ದು ಎಂದರ್ಥ ಈ ತೊಟ್ಟಿಲನ್ನು 5 ಜಾತಿಯ ಮರಗಳನ್ನು ಉಪಯೋಗಿಸಿ ತಯಾರಿಸುತ್ತಾರೆ ಅವುಗಳೆಂದರೆ ಮಾವಿನಮರ, ಹಲಸಿನಮರ, ಗೊಂದೆ ಜಾತಿಯ ಮರ, ಕಾಸರಕಮರ ಹಾಗೂ ಹಾಳೆಮರ ಇದನ್ನು ಉಪಯೊಗಿಸಿ ಸುಂದರವಾದ ತೊಟ್ಟಿಲನ್ನು ಮಾಡುತ್ತಿದ್ದರು.

ಬಲ್ಲ: ಬಲ್ಲ ಅಂದರೆ ಇದನ್ನು ಹಗ್ಗದಿಂದ ತಯಾರಿಸುತ್ತಾರೆ. ಇದರ ಉಪಯೋಗವೆಂದರೆ ಮೊಸರು, ಹಾಲು, ಮಜ್ಜಿಗೆಯನ್ನು ಯಾರೂ ಮುಟ್ಟದಂತೆ ಅದಕ್ಕೆ ಏನು ತೊಂದರೆಯಾಗಬಾರದೆಂಬ ದೃಷ್ಠಿಯಿಂದ ಮನೆಯ ಪಕ್ಕಾಸಿಗೆ ಈ ಹಗ್ಗವನ್ನು ಕಟ್ಟಿ ಇದರ ಮಧ್ಯಕ್ಕೆ ಮೊಸರನ್ನು ಇಡುತ್ತಿದ್ದರು.

ಪಡ್ಯ (ಪಿಕದಾನಿ): ಪಡ್ಯವನ್ನು ಕಂಚಿನಿಂದ ಮಾಡುತ್ತಿದ್ದರು ಇದರಿಂದ ಉಪಯೋಗವೇನೆಂದರೆ 'ವೀಳ್ಯದೆಲೆಯನ್ನು ತಿಂದು' ಅದರ ರಸವನ್ನು ಇದರೊಳಗೆ ಉಗುಳುತ್ತಿದ್ದರು ಯಾತಂದ್ರೆ ಮನೆಯ ಹೊರಗಡೆ ಉಗಿದರೆ ಯಾರುದರು ಅದನ್ನು ತುಳಿದುಕೊಂಡು ಹೋಗುತ್ತಾರೋ ಎನ್ನುವ ದೃಷ್ಠಿಯಿಂದ.

ಚಾ ಕುಡಿಯುವ ಲೋಟ: ಈ ಲೋಟ ಈಗಿನ ಗಾಜಿನ ಲೋಟದಂತೆ ಇತ್ತು ಇದು ಮಾತ್ರ ಮಣ್ಣಿನಿಂದ ತಯಾರಿಸಿದ್ದು ಇವನ್ನು ನೋಡಲು ಬಹಳ ಸುಂದರವಾಗಿರುತ್ತದೆ ಹಾಗೂ ಇದರಲ್ಲಿ ಹೆಚ್ಚಾಗಿ ಚಹವನ್ನು ಕುಡಿಯುತ್ತಿದ್ದರು.

ಕುಜಿಲ್: ಈ ಕುಜಿಲ್ ಎಂದರೆ 'ಕುಂಭ' ಇದನ್ನು ಮಣ್ಣಿನಿಂದ ಮಾಡುತ್ತಿದ್ದರು. ಇದರಲ್ಲಿ ಹಿಂದೆ ಮಜ್ಜಿಗೆ, ಬೆಣ್ಣಿಯನ್ನು ಹಾಕಿಡುತ್ತಿದ್ದರು. ಹಾಗೂ ತೆಂಗಿನಮರದಿಂದ ತೆಗೆದ ಕಳ್ಳುವನ್ನು ಇದರಲ್ಲಿ ಶೇಖರಿಸಿಡುತ್ತಾರೆ ಇದು ಬಹಳ ತಂಪಿನ ಅನುಭವವನ್ನು ಕೊಡುತ್ತದೆ.

ಕಡ್ಯ: ಕಡ್ಯ ಅಂದರೆ ಕೊಡಪಾನ ಇದನ್ನು ಮಣ್ಣಿನಿಂದಲೇ ಮಾಡುತ್ತಿದ್ದರು. ಕಡ್ಯದಲ್ಲಿ ಜನರು ನೀರನ್ನು ತರಲು ಹಾಗೂ ಇದರಲ್ಲಿ ನೀರನ್ನು ತುಂಬಿಸಿಡಲು ಉಪಯೋಗಿಸುತ್ತಿದ್ದರು.


ಸರಿತಾ.ಎಸ್

0 comments:

Post a Comment