ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:38 PM

ಚಿಗುರು - ಬೇರು

Posted by ekanasu

ಸಾಹಿತ್ಯ

ಬೆನ್ನು ಬಾಗಿದ ಅಜ್ಜಿ ಮಡಿಲಲಿ
ನಗುತಲಿರುವುದು ಈ ಮಗುವು
ಏನೋ ನೋಡುತಿದೆ ನಗೆಯ ಚೆಲ್ಲುತಿದೆ
ತುಂಟ ಕಣ್ಣುಗಳ ತೆರೆದು


ಸುತ್ತಲಿನ ವನಸಿರಿಯ ತಂಪಲಿ
ಮೆತ್ತಗೆ ಮೊಮ್ಮಗಳನ್ನಪ್ಪಿ ಕುಳಿತ
ಅಜ್ಜಿಯ ಮೊಗದ ಮೃದುಮಧುರ ಮಂದಹಾಸ
ಬಾಳ ಸಂಜೆಯಲಿ ಇಣುಕಿ ಬಂತೊಂದು
ಅರುಣೋದಯದ ರವಿಕಿರಣ
ಎಳೆಯ ಚಿಗುರಿಗೆ ಬದುಕ ಕಲಿಸಲು
ಅನುಭವದ ತಾಯಿಬೇರು...
ಅನುಭವದ ತಾಯಿಬೇರು...

- ಸುಮತಿ ಕೆ.ಸಿ.ಭಟ್ ಆದೂರು.

0 comments:

Post a Comment