ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಎಸ್.ಎಂ.ಎಸ್ ಮಹಿಮೆ

ಮೊಬೈಲ್ ನಲ್ಲಿ ಅಂತರ್ಜಾಲದ ಸೌಲಭ್ಯವಿದ್ದರೆ ಸಾಕು, ಪುಟ್ಟ ಗಣಕಯಂತ್ರವೇ ಜೊತೆಯಲ್ಲಿದ್ದಂತೆ! ಕುಂತಲ್ಲೇ ನಿಂತಲ್ಲೇ ಬೆರಳಂಚಲ್ಲಿ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಮೊಬೈಲ್ ಬ್ಯಾಂಕಿಂಗ್,ಟಿಕೆಟ್ ಬುಕ್ಕಿಂಗ್ ಸೆಕೆಂಡಗಳಲ್ಲಿ ಆಗಬಲ್ಲದು. ಯಾವ ಬಿಲ್ಲು ಬೇಕಾದರೂ ಕಟ್ಟಬಹುದು. ಬೇಕಾದ ಹಾಡು ಕೇಳಬಹುದು,ಬೇಕಾದ ಸಿನಿಮಾ ನೋಡಬಹುದು. ಯಾವ ವಾರ್ತೆ ಬೇಕು ನಿಮಗೆ...? ಏನು ಬೇಕಾದರೂ ಬ್ರೌಜ್ ಮಾಡಬಹುದು. ಎಸ್.ಎಂ.ಎಸ್ ಗಳ ಭರಾಟೆಯಂತೂ ಕೇಳಲೇ ಬೇಡಿ... !"ಗುರು ಒಂದು ಎಸ್.ಎಂ.ಎಸ್ ಕಳುಹಿಸು ಸಾಕು... ಅವನ ಕೆಲಸ ಸರಿಯಾದ ಸಮಯಕ್ಕೆ ಮುಗಿಸಿ ಬಿಡುತ್ತೇನೆ"... ಅಂದರೆ ಎಸ್.ಎಂ.ಎಸ್ ಅಷ್ಟೊಂದು ಪ್ರಭಾವಶಾಲಿ ಎಂದಾಯಿತು. ಒಂದೇ ಒಂದು ಎಸ್.ಎಂ.ಎಸ್ ಪ್ರಾಣ ತೆಗೆಯುತ್ತೆ ಅಥವಾ ಉಳಿಸುತ್ತೆ. ಇದು ರೌಡಿಗಳ ಕತೆಯಾಯಿತು.ಮನೆಯಲ್ಲಿ ಎಲ್ಲರು ಗಾಢ ನಿದ್ದೆಯಲ್ಲಿದ್ದರೆ ಹುಡುಗ ಹುಡುಗಿಯರಂತೂ ಕಂಬಳಿ ಹೊದ್ದುಕೊಂಡು ಎಸ್.ಎಂ.ಎಸ್ ಗಳನ್ನು ಮಾಡುತ್ತಿರುತ್ತಾರೆ. ಅವರ ಒಂದೊಂದು ಎಸ್.ಎಂ.ಎಸ್ ಗೂ ಬೆಲೆಯೇ ಕಟ್ಟಲಾಗುವುದಿಲ್ಲವಂತೆ...! ಅಷ್ಟೊಂದು ಅಮೂಲ್ಯ...!!!

ಕೆಲವರ ಹತ್ತಿರ ಮೊಬೈಲ್ ಇರುತ್ತದೆ, ಆದರೆ ಎಸ್.ಎಂ.ಎಸ್ ಓದಕ್ಕೂ ಬರಲ್ಲ, ನೋಡಕ್ಕೂ ಬರಲ್ಲ....ಪಾಪ....!

ಕೆಲವರು ಮೊಬೈಲನ್ನು ನೋಡಿ ನಗುತ್ತಿರುವುದನ್ನು ನೀವು ಗಮನಿಸಿರಬಹುದು. ಅಂದರೆ ಅವರಿಗೆ ಯಾರೋ ಜೋಕ್ಸ್ ಕಳುಹಿಸಿ ನಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ. ಅಳುತ್ತಿದ್ದರೆ ಏನೋ ಬ್ಯಾಡ್ ನ್ಯೂಸ್...ಗ್ರಾಚಾರ.

ಅದೇನೇ ಇರಲಿ ಒಂದೇ ಒಂದು ಎಸ್.ಎಂ.ಎಸ್ ನಿಂದ ಸಂಬಂಧಗಳು ಗಟ್ಟಿಯಾಗಬಹುದು ಅಥವಾ ಒಂದೇ ಒಂದು ಎಸ್.ಎಂ.ಎಸ್ ವಿಚ್ಛೇದನೆಗೆ ಕಾರಣವಾಗಬುದು. ಕೋಪದಲ್ಲಿದ್ದಾಗ ಎಸ್.ಎಂ.ಎಸ್ ಕಳುಹಿಸುವುದು ಉತ್ತಮವಲ್ಲ. ಅದರಿಂದ ದೊಡ್ಡ ಅನಾಹುತವೇ ಸಂಭವಿಸಬಹುದು.

ಇನ್ನೂ ಕೆಲವರಂತೂ ತನ್ನ ಮೊಬೈಲನ್ನೇ ಸುಳ್ಳಿನ ಕಾರ್ಖಾನೆಯನ್ನಾಗಿ ಮಾಡಿಕೊಂಡಿರುತ್ತಾರೆ. ಮನೆಯಲ್ಲೇ ಇದ್ದು ಟಿ.ವಿ. ನೋಡುತ್ತಾ ನಾನು ಊರಲ್ಲಿಲ್ಲ ಅಂತಾರೆ. ಸಂತೆಯಲ್ಲಿ ನಿಂತುಕೊಂಡು ದೇವಸ್ಥಾನದಲ್ಲಿದ್ದೇನೆ ಅಂತಾರೆ.

ಮೊಬೈಲನ್ನು ಏನೆಂದುಕೊಂಡಿದ್ದೀರಾ....? ಮೊಬೈಲೇ ಕೋರ್ಟಿನಲ್ಲಿ ದೊಡ್ಡ ಸಾಕ್ಷಿ ಆಧಾರವಾಗುವ ಕಾಲ ಸಹ ಬಂದು ಬಿಟ್ಟಿದೆ. ಒಟ್ಟಾರೆ ಎಸ್.ಎಂ.ಎಸ್ ಗಳು ಬಹಳ ಬಲಶಾಲಿಯಾಗಿ ಹೊರಹೊಮ್ಮುತ್ತಿವೆ.

ಕೆಲವೊಮ್ಮೆ ನಮಗೆ ಎಸ್.ಎಂ.ಎಸ್ ಗಳಲ್ಲಿ ಒಳ್ಳೆಯ ನೀತಿ ಪಾಠ, ಅನುಭವಸ್ಥರ ಸತ್ಯವಾದ ಮಾತುಗಳು ಓದಲು ಸಿಗುತ್ತವೆ. ಅದನ್ನು ಒಮ್ಮೆ ಓದಿ ಅಳಿಸಿ ಬಿಡುತ್ತೇವೆ. ಅಂತಹ ಎಸ್.ಎಂ.ಎಸ್ ಗಳನ್ನು ಓದಿ ಅದರ ಬಗ್ಗೆ ಒಂದೆರಡು ನಿಮಿಷ ಯೋಚಿಸಿದರೆ ಆ ಮಾತುಗಳ ಆಳ ನಮ್ಮ ಮನಸ್ಸಿಗೆ ಇಳಿಸಿಕೊಳ್ಳಬಹುದು. ಮನಸ್ಸನ್ನು ಸಕಾರಾತ್ಮಕವಾಗಿ ಪರಿವರ್ತನೆ ಮಾಡಿಕೊಳ್ಳಬಹುದು.

ಉದಾಹರಣೆಗೆ ಒಬ್ಬ ಹುಡುಗ ಜೀವನದಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದ. ಅಂತಹ ಸಮಯದಲ್ಲಿ ಆತನಿಗೆ ಒಂದು ಎಸ್.ಎಂ.ಎಸ್ ಬಂತು. - "ಸಂಪತ್ತು,ಅಧಿಕಾರ ಮತ್ತು ಕಷ್ಟದಲ್ಲಿ ಮನುಷ್ಯನ ಬುದ್ಧಿಯ ಪರೀಕ್ಷೆಯಾಗುತ್ತದೆ, ಮನುಷ್ಯ ಸಹನೆಯಿಂದ ಇರುತ್ತಾನೆಯೇ ಅಥವಾ ಕೆಟ್ಟ ಹೆಜ್ಜೆ ಇಡುತ್ತಾನೆಯೇ" - ಕಲೀಫ ಹಜ್ರತ್ ಅಲಿ

ತಕ್ಷಣ ಅವನ ಮನಸ್ಸು ಪರಿವರ್ತನೆಗೊಂಡು ಬೇರೆ ಕೆಲಸ ಹುಡುಕಲು ಹೊರಡುತ್ತಾನೆ.

- ಜಬೀವುಲ್ಲಾ ಖಾನ್

0 comments:

Post a Comment