ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:48 PM

ಹಲೋ ಡಾಕ್ಟರ್...

Posted by ekanasu

ವೈವಿಧ್ಯ

ಈ ಕನಸು ಹಲೋ ಡಾಕ್ಟರ್ ಒಂದು ವಿನೂತನ ಪ್ರಯತ್ನ...ನಿಮ್ಮ ಬೆಂಬಲ ನಮಗಿರಲಿ...


ಹೋಮಿಯೋಪಥಿ ಒಂದು ವೈದ್ಯ ಪದ್ಧತಿ. ಇದನ್ನು ಸ್ಯಾಮ್ಯುಯೆಲ್ ಹಾನಿಮನ್ ೧೮೦೦ ರ ಸುಮಾರಿಗೆ ಸೃಷ್ಟಿಸಿ, ಬಳಕೆಗೆ ತಂದರು. ಇದು ನೈಸರ್ಗಿಕ ಕ್ಷಮತೆಯನ್ನು ಚೇತರಿಸಿ, ರೊಗಿಯನ್ನು ಗುಣಪಡಿಸುವ ಸಿದ್ಧಾಂತವನ್ನು ಹೊಂದಿದೆ. ಆರೋಗ್ಯವಂತರಿಗೆ ನೀಡಿ, ಅದರ ಪರಿಣಾಮವನ್ನು ವೀಕ್ಷಿಸಿ, ರೋಗಿಗಳಿಗೆ, ಹೋಮಿಯೋಪಥಿ ವೈದ್ಯರು, ಹೋಮಿಯೋಪಥಿ ಔಷಧವನ್ನು, ಅದೇ ರೋಗಲಕ್ಷಣಗಳು ಕಂಡುಬಂದಾಗ ನೀಡಿ, ರೋಗಿಯನ್ನು ಗುಣಪಡಿಸುತ್ತಾರೆ. ಉದಾಹರಣೆಗೆ, ಈರುಳ್ಳಿ ಕಣ್ಣಿನಿಂದ ಹಾಗೂ ಮೂಗಿನಿಂದ, ನೀರನ್ನು ಸುರಿಸುವ ಗುಣ ಹೊಂದಿದೆ, ಹಾಗಾಗಿ, ಈರುಳ್ಳಿಯಿಂದ ತಯಾರಿಸಿದ ಹೋಮಿಯೋಪಥಿ ಔಷಧವನ್ನು, ಕೆಲವು ತರಹದ ಶೀತವನ್ನು ಗುಣಪಡಿಸಲು ನೀಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಕುರ್ಲೊಟ್ಟು ಸಮೀಪದ ಡಾ.ರಾಮಕೃಷ್ಣ ಭಟ್ ಹೋಮಿಯೋಪಥಿ ವೈದ್ಯರು. ಕಳೆದ ಹಲವು ವರುಷಗಳಿಂದ ಇವರು ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾರೆ. ತಮ್ಮದೇ ಆದಂತಹ ವಿಶೇಷ ಸಂಯೋಜನೆಯೊಂದಿಗೆ ನೀಡುವ ಔಷಧಿಗಳು ಹಲವಾರು ಖಾಯಿಲೆಗಳಿಗೆ ರಾಮಬಾಣ. ಪರಿಣತ ವೈದ್ಯರಿಂದಲೂ ತಿರಸ್ಕರಿಸಲ್ಪಟ್ಟ ಅನೇಕಾನೇಕ ರೋಗಗಳು ಇವರ ಕೈಗುಣದಿಂದ ನಿವಾರಣೆಯಾಗಿದೆ. "ಹಣ ಮಾಡುವ ಉದ್ದೇಶದಿಂದ ನಾನು ಈ ಕಾರ್ಯ ಮಾಡುವುದಿಲ್ಲ ; ಮನಸ್ಸಿನ ತೃಪ್ತಿಗೋಸ್ಕರ , ಅಶಕ್ತರಿಗೆ ನೆರವಾಗುವ ಮನೋಭಾವನೆಯೊಂದಿಗೆ ಸೇವೆ ಎಂಬಂತೆ ಈ ಕಾರ್ಯವನ್ನು ಮಾಡುತ್ತಿದ್ದೇನೆ" ಎನ್ನುವ ಡಾ.ರಾಮಕೃಷ್ಣ ಭಟ್ಟರು ತಮ್ಮ ವೃತ್ತಿಜೀವನದುದ್ದಕ್ಕೂ ಸೇವೆ ಮಾಡುತ್ತಾ ಬಂದವರು. ಇದೀಗ ಈ ಕನಸಿನ ಮೂಲಕ ಈ ವಾರದಿಂದ ಹೋಮಿಯೋಪಥೀ ಚಿಕಿತ್ಸಾ ವಿಧಾನಗಳನ್ನು ಜನತೆಯೆದುರು ತೆರೆದುಕೊಳ್ಳಲಿದ್ದಾರೆ.ತಮ್ಮ ಸಂದೇಹ, ಔಷಧಿಯ ಮಾಹಿತಿಗಳು ಬೇಕಾದಲ್ಲಿ editor@ekanasu.com ಗೆ ಈ ಮೇಲ್ ಮೂಲಕ ಮಾಹಿತಿ ಕೇಳಬಹುದು. ಸೂಕ್ತ ಉತ್ತರವನ್ನು ವೈದ್ಯರು ನೀಡುವರು.


ಹಿಮೋಫೀಲಿಯಾಕ್ಕೆ ಹೋಮಿಯೋ ಚಿಕಿತ್ಸೆ...
1.ಲಕೇಸಿಸ್ 200 - ವಾರಕ್ಕೆ ಒಂದು ಸಲ ಒಂದು ಡೋಸ್ (ರವಿವಾರ)
2.ಕ್ರಿಯೋಸೋಟಂ 200 - ವಾರಕ್ಕೆ ಒಂದು ಸಲ (ಗುರುವಾರ) ಬೆಳಗ್ಗೆ ಮಾತ್ರ.2 ತಿಂಗಳು ಮುಂದುವರಿಸಿ. ಆ ಮೇಲೆ ಬೇಕಿದ್ದರೆ ಮುಂದುವರಿಸಬಹುದು.


ಜ್ವರ...ದ ಕುರಿತು ನಿಮ್ಮ ಪ್ರಶ್ನೆಗಳಿದ್ದಲ್ಲಿ...ನಮಗೆ ಮೇಲ್ ಮಾಡಿ...ಮುಂದಿನ ವಾರ ಜ್ವರಕ್ಕೆ ಸಿಂಪಲ್ ಔಷಧಿ...


2 comments:

sangamesh said...

vitilogo

sangamesh said...

homeopathic vitiligo treatment medicine

Post a Comment