ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಡುಬಿದಿರೆ: ಬರವಣಿಗೆಗೆ ಸಮಾಜದ ಮೇಲೆ ಗಾಢ ಪ್ರಭಾವ ಬೀರುವ ಶಕ್ತಿಯಿದ್ದು ಸತ್ಯನಿಷ್ಟವಾದ, ಅನುಭವ ಜನ್ಯವಾದ ಬರಹಕ್ಕೆ ಸಾಮಾಜಿಕ ಬದಲಾವಣೆಯ ಶಕ್ತಿಯಿದೆ ಎಂದು ಕಲಾ ವಿಮರ್ಶಕ ಮಣಿಪಾಲದ ಈಶ್ವರಯ್ಯ ಅವರು ಹೇಳಿದರು.ಅವರು ಗುರುವಾರ ವಿದ್ಯಾಗಿರಿಯಲ್ಲಿ ಆಳ್ವಾಸ್ ಕಾಲೇಜಿನ ಕನ್ನಡ ಸಂಘದ ವತಿಯಿಂದ ನಡೆದ ಬರವಣಿಗೆ ಸರಣಿ ತರಬೇತಿ ಶಿಬಿರ 'ಅಭಿವ್ಯಕ್ತಿ 2011'ರ ಉದ್ಘಾಟನೆ ಮತ್ತು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಅನು ಬೆಳ್ಳೆ ಅವರ ಪತ್ತೇದಾರಿ ಕಾದಂಬರಿ 'ರಾಗದೀಪ'ವನ್ನು ಬಿಡುಗಡೆಗೊಳಿಸಿ ಮಾತನಾಡಿದರು.


ಸತತ ಓದು, ವಿಚಾರದಲ್ಲಿನ ಸ್ಪಷ್ಟತೆ, ವಿವಿಧೆಡೆಗಳಿಂದ ಮಾಹಿತಿ ಸಂಗ್ರಹ ಹಾಗೂ ಭಾಷಾ ಬಳಕೆಯ ಕೌಶಲ್ಯ ಇವು ಬರವಣಿಗೆಯನ್ನು ಮಹತ್ವದ್ದಾಗಿಸುತ್ತವೆ. ಕನ್ನಡದಲ್ಲಿ ವಿಡಂಬನೆಯನ್ನು ಸಶಕ್ತವಾಗಿ ಬಳಸಿಕೊಂಡದ್ದು ಕಡಿಮೆ. ಅದನ್ನು ಬಳಸಿಕೊಂಡಾಗ ಭ್ರಷ್ಟಾಚಾರ, ಸಾಮಾಜಿಕ ಅನ್ಯಾಯಗಳ ಕಡೆಗೆ ಮಾತಿನ ಕತ್ತಿಯನ್ನು ಸಶಕ್ತವಾಗಿ ಬೀಸಬಹುದು ಎಂದು ಅವರು ಹೇಳಿದರು.


ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಅಧ್ಯಕ್ಷತೆ ವಹಿಸಿದ್ದರು.ಭಾಷೆಯ ಬಳಕೆಯಲ್ಲಿ ಸರಾಗತೆ ಸಾಧ್ಯವಾಗಬೇಕಾದರೆ ಅಭಿವ್ಯಕ್ತಿ ಕೌಶಲವನ್ನು ವೃದ್ಧಿಸಿಕೊಳ್ಳುವುದು ಅಗತ್ಯ. ಕೇವಲ ಫಲಿತಾಂಶದ ಕಡೆಗೆ ಮಾತ್ರ ನೋಡದೆ ಅನುಭವ ನಿಷ್ಠ ಜ್ಞಾನಕ್ಕೆ ವಿದ್ಯಾರ್ಥಿಗಳು ತಮ್ಮನ್ನು ತೆರೆದುಕೊಳ್ಳಬೇಕು ಎಂದರು. ಆಡಳಿತಾಧಿಕಾರಿ ಸ್ಮಿತಾ ಪಿ.ಐತಾಳ್, ಕಾದಂಬರಿಕಾರ ಅನುಬೆಳ್ಳೆ, ಕನ್ನಡ ಸಂಘದ ಸಂಚಾಲಕ ಡಾ.ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು.
ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ಉಪನ್ಯಾಸಕ ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಚಂದ್ರಶೇಖರ ಗೌಡ ವಂದಿಸಿದರು. ವಿದ್ಯಾರ್ಥಿ ಶರತ್ ಹಣತೆ ಹಚ್ಚುತ್ತೇವೆ ನಾವು ಕವನವನ್ನು ವಾಚನ ಮಾಡಿದರು.
ಚಿತ್ರ: ಯಶೋಧರ ಮೂಡಬಿದಿರೆ

0 comments:

Post a Comment