ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಶ್ರೀ ರಾಘವೇಶ್ವರ ಶ್ರೀಗಳ ದಿವ್ಯ ಆಶೀರ್ವಚನ

ಗೋಕರ್ಣ: ಅಶೋಕೆಯು ನಮ್ಮ ಶ್ರೀಮಠದ ಜನ್ಮಭೂಮಿ.ಇಲ್ಲಿ ಲೋಕಶಂಕರನಾದ ಆದಿಕಿರಾತ ಮಲ್ಲಿಕಾರ್ಜುನನಿದ್ದಾನೆ.ಶ್ರೀರಾಮಾದಿ ದೇವತಾಸಾನ್ನಿಧ್ಯ ಇಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗುರುಪೀಠದ ಧರ್ಮಾಚಾರ್ಯರ ಚಾತುರ್ಮಾಸ್ಯದ ವಿಶೇಷಸಂದರ್ಭ.ಎಲ್ಲ ಶಿಷ್ಯರೂ ಬಂದು ಗುರುದರ್ಶನವನ್ನು ಮಾಡಿ ಪುನೀತರಾಗುವ ಪುಣ್ಯಕಾಲ. ಗುರುಸೇವೆ,ಸಮಾಜಸೇವೆ ಎರಡೂ ಬದುಕಿನ ಎರಡು ಕಣ್ಣುಗಳು.ಈ ಎರಡನ್ನೂ ಕರ್ತವ್ಯವೆಂದು ತಿಳಿದು ಶ್ರದ್ಧಾಪೂರ್ವಕವಾಗಿ ಅನುಷ್ಠಾನಿಸಿದರೆ ಅದಕ್ಕಿಂತ ಹೆಚ್ಚಿನ ಜೀವನಲಾಭ ಬೇರಿಲ್ಲ. ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.ಇಂದು ಚಾತುರ್ಮಾಸ್ಯದ ನಿಮಿತ್ತ ಹೊನ್ನಾವರಮಂಡಲದ ಭವತಾರಿಣೀ,ಮರವಂತೆ,ಹೊನ್ನಾವರ ಹಾಗೂಭಟ್ಕಳ ವಲಯಗಳ ಶ್ರೀಗುರುದೇವತಾ ಸೇವೆ ಮತ್ತು ಗಾಬಿತಸಮಾಜದ ಪಾದಪೂಜಾಸೇವೆಯನ್ನು ಸ್ವೀಕರಿಸಿ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ನಮ್ಮ ಬದುಕು ಸಂತೆಯಂತೆ.ಜಾತ್ರೆಗೆ ಹೋದ ಮಗು ಬೆಂಡು,ಬತ್ತಾಸು,ಪೀಪಿಗಳಲ್ಲಿಯೇ ಸಮಾಧಾನ ಹೊಂದುವಂತೆ ನಾವೂ ಸಹ ಜೀವನದಲ್ಲಿ ಲಭ್ಯವಾಗುವ ಅಲ್ಪಸಂತೋಷದಲ್ಲಿಯೇ ತೃಪ್ತರಾಗಿಬಿಡುತ್ತೇವೆ. ಈ ಸ್ಥಿತಿ ದೂರಾಗಬೇಕು.ಜಾತ್ರೆಯ ಕೇಂದ್ರ ತೇರು.ತೇರಿನಲ್ಲಿ ದೇವರು.ಇದನ್ನು ಮರೆಯದಿದ್ದರೆ ಬದುಕಿನ ಸಾರ್ಥಕತೆಯನ್ನು ಪಡೆಯಬಹುದು.

ಮಾನವಜೀವನವೇ ಭಗವತ್ಸಾಕ್ಷಾತ್ಕಾರಕ್ಕೆ ಸುಲಭಸಾಧನ ಎಂದೂ ನುಡಿದ ಪೂಜ್ಯಶ್ರೀಗಳು ಗಾಬಿತಸಮಾಜ ನಮ್ಮ ಶ್ರೀಮಠದ ಆರಾಧ್ಯದೈವವಾದ ಪ್ರಭು ಶ್ರೀರಾಮಚಂದ್ರನ ಆತ್ಮಸಖನಾದ ಗುಹನ ಸಂಬಂಧವನ್ನು ಹೊಂದಿದ ಕಡಲಮಕ್ಕಳ ಸಮಾಜ. ಈ ಸಮಾಜವೂ ಸಹ ಶ್ರೀಪೀಠದಲ್ಲಿ ಭಕ್ತಿಶ್ರದ್ಧಾಪೂರ್ವಕವಾದ ನಡವಳಿಕೆಯನ್ನು ಹೊಂದಿದ್ದು ಗುರುಸೇವೆಯಲ್ಲಿ ಭಾಗಿಯಾಗಿದೆ. ಇಂದು ಶ್ರೀ ಗುರುದೇವತಾಸೇವೆಯನ್ನು ಸಲ್ಲಿಸಿದ ಸಮಾಜದ ಎಲ್ಲ ಶಿಷ್ಯರಿಗೂ ಸಹ ಸನ್ಮಂಗಳವಾಗಲಿ ಎಂದೂ ಆಶೀರ್ವದಿಸಿದರು.ಈ ಮೊದಲು ಎಂದಿನಂತೆ ಶ್ರೀಮಠದ ಸಮಾಜೋನ್ಮುಖಿಯಾದ ಸಾವಿರದ ಅಭಿಯಾನ,ಗೋಬಂಧು, ಮೊದಲಾದ ಹಲವಾರುಯೋಜನೆಗಳಿಗೆ ಹಲವಾರು ಶಿಷ್ಯರು ತಮ್ಮ ಕೊಡುಗೆಯನ್ನು ಘೋಷಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೂಜ್ಯಶ್ರೀಗಳು ಪ್ರಶಸ್ತಿಪತ್ರಪೂರ್ವಕವಾಗಿ ಅನುಗ್ರಹಿಸಿದರು.ಶ್ರೀಸವಾರಿಯ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥರು ಕಾರ್ಯಕ್ರಮವನ್ನು ನಿರ್ವಹಿಸಿದರು.

0 comments:

Post a Comment