ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ: ನಮ್ಮ ಬದುಕು ಮುಂದಿನಪೀಳಿಗೆಗೆ ಮಾರ್ಗದರ್ಶಿಯಾಗಬೇಕು.ಅಷ್ಟೇ ಅಲ್ಲ. ನಮಗೆ ಕಾರಣರಾದ ನಮ್ಮ ಪೂರ್ವಜರು ಮೆಚ್ಚುವಂತಿರಬೇಕು.ನಮ್ಮ ಸತ್ಕಾರ್ಯ ಪೂರ್ವಜರನ್ನು ಉನ್ನತಸ್ಥಾನಕ್ಕೇರಿಸುವಂತಿರಬೇಕು,ಅಥವಾ ಅಲ್ಲಿದ್ದವರು ಸಂತೋಷಪಡುವಂತಿರಬೇಕು. ಹಾಗಾದರೆ ಮಾತ್ರ ನಮಗೆ ಇಂತಹ ಉತ್ತಮಮಾನವಜೀವನವನ್ನು ಕರುಣಿಸಿದ ಪರಮಾತ್ಮನಿಗೆ ತೃಪ್ತಿಯಾಗುತ್ತದೆ.ನಾವು ಮಾಡುವ ಒಳ್ಳೆಯ ಕೆಲಸದಿಂದ ನಮ್ಮ ವಂಶದ ಹೆಸರು ಪ್ರಸಿದ್ಧವಾಗುವಂತೆ ನಮ್ಮ ಅಕೃತ್ಯಗಳೂ ಸಹ ನಮ್ಮ ಪೂರ್ವಜರನ್ನು ಪತಿತಗೊಳಿಸುತ್ತವೆ. ಬಗ್ಗೆ ಸದಾ ನಮ್ಮ ಎಚ್ಚರ ಅಗತ್ಯ ಎಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಹೇಳಿದ್ದಾರೆ.


ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಹೊನ್ನಾವರ ಮಂಡಲದ ಕರ್ಕಿ ,ಹೊಸಾಕುಳಿ,ಮತ್ತು ಕಡ್ಲೆ ವಲಯಗಳ ಶ್ರೀಗುರುದೇವತಾಸೇವೆ ಮತ್ತು ಭಂಡಾರಿಸಮಾಜದಶಿಷ್ಯರ ಗುರುಪಾದುಕಾಪೂಜೆಗಳನ್ನು ಸ್ವೀಕರಿಸಿ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಇಂದು ಆಷಾಢದ ಕೊನೆಯ ದಿನ.ಅಮಾವಾಸ್ಯೆ. ಅಮಾವಾಸ್ಯೆಯೆಂದರೆ ಸೂರ್ಯ ಮತ್ತು ಚಂದ್ರ ಸಮಾಗಮ.ಪರಪ್ರಕಾಶಕನಾದ ಚಂದ್ರ ಇಂದು ಸೂರ್ಯನನ್ನು ಸೇರಿ ಒಂದು ತಿಂಗಳಕಾಲ ಬೆಳಗಲು ಬೇಕಾದ ಪ್ರಕಾಶವನ್ನು ಸೂರ್ಯನಿಂದ ಪಡೆಯುತ್ತಾನೆ. ಇದೊಂದು ಸಾಂಕೇತಿಕ ಕ್ರಿಯೆ. ಚಂದ್ರ ಮನಸ್ಸಿಗೆ ಪ್ರತೀಕವಾದರೆ ಸೂರ್ಯ ಪರಮಾತ್ಮನ ಸಂಕೇತ.ಜೀವಿಯು ಪರಮಾತ್ಮನಲ್ಲಿ ದೃಷ್ಟಿಯಿಟ್ಟರೆ ಬೇಕಾದ ಸುಖವನ್ನು ಪಡೆದುಕೊಳ್ಳಬಹದೆಂಬುದನ್ನು ಈ ಅಮಾವಾಸ್ಯೆ ಎಂಬ ಸಂಕೇತ ಧ್ವನಿಸುತ್ತದೆ.ತೆಗೆದಷ್ಟೂ ಮಿಗುವ ಅಗಾಧ ಸಂಪತ್ತು ಅಲ್ಲಿದೆ.ಆದರೆ ಅದನ್ನು ಪಡೆಯಲು ನಮ್ಮ ಮನಸ್ಸು ಅಲ್ಲಿ ಕೇಂದ್ರೀಕೃತವಾಗಬೇಕಷ್ಟೆ ಎಂದು ನುಡಿದ ಶ್ರೀಗಳು ನಮ್ಮ ಬಾಳಿನ ಸಾರ್ಥಕತೆಗೆ ಪ್ರಯತ್ನದಷ್ಟೇ ದೈವಾನುಗ್ರಹವೂ ಅಗತ್ಯ.ಮನಸ್ಸನ್ನು ದೇವರಲ್ಲಿಡುವುದೆಂದರೆ ಯಾವ ಖರ್ಚು ಇಲ್ಲದ ಬಂಡವಾಳದಿಂದ ಅಪಾರಲಾಭವನ್ನು ಗಳಿಸುವ ಒಂದು ಶ್ರೇಷ್ಠವ್ಯಾಪಾರ ಎಂದು ಹೇಳಿನಮ್ಮ ಪೂರ್ವಜರು ಸಂತೋಷಪಡುವ ರೀತಿಯಲ್ಲಿ ಪರಮಾತ್ಮನುಮೆಚ್ಚುವ ಬಗೆಯಲ್ಲಿ ಬದುಕೋಣ.

ಜೀವನದಲ್ಲಿ ಅಕ್ರಮಾಗತವಾಗದ ದೈವೀಕೃಪೆಯಿಂದ ದೊರೆತ ಸಂಪತ್ತು ಮಾತ್ರ ನೈಜವಾದ ಸಂಪತ್ತಾಗಿ ಬದುಕಿಗೆ ಆಧಾರವಾಗುತ್ತದೆ. ಇಲ್ಲವಾದರೆ ಅದು ಘೋರವಿಪತ್ತಾಗಿ ಪರಿಣಮಿಸುತ್ತದೆ.ಈ ಎಚ್ಚರ ಸದಾ ನಮಗಿರಬೇಕು. ಇಂದು ಶ್ರೀಗುರುದೇವತಾಸೇವಾಭಾಗಿಗಳಾದ ಹೊನ್ನಾವರ ಮಂಡಲದ ವಲಯಗಳು ಶ್ರೀಮಠಕ್ಕೆ ಸದಾ ನಿಕಟವಾಗಿರುವ ಸೇವಾಕಾರ್ಯದಲ್ಲಿ ಪ್ರಥಮಸ್ಥಾನದಲ್ಲಿರುವಂತವು. ಹಾಗೆಯೇ ಭಂಡಾರಿಸಮಾಜದಶಿಷ್ಯರು ಎಲ್ಲ ಶುಭ ಶೋಭನಾದಿಕಾರ್ಯಗಳಿಗೆ ಅಗತ್ಯವಾಗಿದ್ದು ಶ್ರೀಪೀಠದ ಎಲ್ಲಾ ಸೇವಾಕಾರ್ಯಗಳಲ್ಲಿ ತ್ರಿಕರಣಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡವರು.ಇವರೆಲ್ಲರಿಗೂ ಪ್ರಭು ಶ್ರೀರಾಮಚಂದ್ರ ಎಲ್ಲ ಸನ್ಮಂಗಳಗಳನ್ನು ಅನುಗ್ರಹಿಸಲಿ ಎಂದು ಆಶೀರ್ವದಿಸಿದರು.ಎಂದಿನಂತೆಶ್ರೀಮಠದ ಸಮಾಜೋನ್ಮುಖಿಯಾದ ಮೂಲಮಠ ನಿರ್ಮಾಣ,ಸಾವಿರದ ಅಭಿಯಾನ,ಗೋಬಂಧು,ವಿದ್ಯಾಬಂಧು ಯೋಜನೆಗಳಿಗೆ ದೇಣಿಗೆಯ ಸಮರ್ಪಣೆ ಹಾಗೂ ಪ್ರತಿಭಾವಂತವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರವಿತರಣೆ ಮತ್ತು ಸಮ್ಮಾನಕಾರ್ಯಕ್ರಮಗಳು ಸಂಪನ್ನಗೊಂಡವು.ಹೊನ್ನಾವರಮಂಡಲದ ರಾಜಶೇಖರ ಹೆಬ್ಬಾರ್ ಹಾಗೂ ಪ್ರೊ.ಎಸ್.ಜಿ.ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.

0 comments:

Post a Comment