ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಸ್ತ್ರೀ ತನ್ನ ಕೇಶದತ್ತ ಹೆಚ್ಚಿನ ಕಾಳಜಿ ವಹಿಸುತ್ತಾಳೆ. ಮಹಿಳೆಯರಿಗೆ ನೀಳ ಕೂದಲಿದ್ದರೆ ಚೆನ್ನ. ಆ ಕೂದಲಿಗೊಪ್ಪುವ ವಿನ್ಯಾಸ, ಅದಕ್ಕೊಪ್ಪುವ ಸುಂದರ ಪುಷ್ಪಗಳ ಅಲಂಕಾರ...ವ್ಹಾವ್...ಇವಿಷ್ಟೇ ಸಾಲವೆ ಸಂಪ್ರದಾಯಸ್ಥ ಹೆಣ್ಣುಮಗಳ ಲಕ್ಷಣಕ್ಕೆ... ಹೌದು...ಕೇಶ ವಿನ್ಯಾಸ ಎಂಬುದು ಒಂದು ಕಲೆ. ಸ್ತ್ರೀಯರು ಈ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾರೆ... ಮದುವೆ, ಶುಭ ಸಮಾರಂಭಗಳಿಗೆ ತೆರಳುವಾಗ ತಮ್ಮ ಕೇಶವನ್ನು ಒಪ್ಪ ಓರಣವಾಗಿ ಶೃಂಗರಿಸುವ ರೀತಿ ಒಂದಾದರೆ, ಇತರೆ ಕಾರ್ಯಕ್ರಮಗಳಿಗೆ ಒಂದು ವಿಭಿನ್ನ ರೀತಿಯ ಶೃಂಗಾರವಿರುತ್ತದೆ. ಮತ್ತೆ ಕೆಲವೊಮ್ಮೆ ಮಾಮೂಲಿಯಾಗಿ ಸರಳವಾದ ಶೃಂಗಾರದೊಂದಿಗೆ ಮಹಿಳೆ ಕಾಣಿಸಿಕೊಳ್ಳುತ್ತಾಳೆ. ಒಟ್ಟಿನಲ್ಲಿ ಕೇಶದ ಆರೈಕೆ..ಜೊತೆಗೆ ಅದಕ್ಕೊಪ್ಪುವ ಸುಂದರ ಶೃಂಗಾರ ಮಹಿಳೆಗೆ ಅಚ್ಚುಮೆಚ್ಚಿನ ಸಂಗತಿ.ಇಂದಿನ ಟೀನೇಜ್ ಯುವತಿಯರು ಕೇಶವನ್ನು ಶೃಂಗರಿಸುವ ನೆಪದಲ್ಲಿ ವಿಕೃತಗೊಳಿಸುತ್ತಿದ್ದಾರೆ. ವಿವಿಧ ರೀತಿಯ ಪಾಶ್ಚಾತ್ಯ ಶೈಲಿಯ ಕೇಶ ವಿನ್ಯಾಸಗಳನ್ನು ಮಾಡುತ್ತಾ ಸಂಸ್ಕೃತಿಯ ನಾಶಕ್ಕೆ ನಾಂದಿಯಾಗುತ್ತಿದ್ದಾರೆ. ಉದ್ದ ಕೂದಲಿನ ಸುಂದರ ಕೇಶರಾಶಿಗೆ ಕತ್ತರಿಯಿಕ್ಕಿ ಅದರ ವಿಕಾರ ವಿನ್ಯಾಸಕ್ಕೆ ಮಾರುಹೋಗುವ ಇಂದಿನ ಯುವತಿಯರ ಈ ವರ್ತನೆಗೆ ಏನೆನ್ನಬೇಕೋ...ಕೇಶವಿನ್ಯಾಸ ಮಾಡುವಾಗ ಒಂದಂಶವನ್ನು ನೆನಪಿನಲ್ಲಿರಿಸಿಕೊಳ್ಳಬೇಕು. ಯಾವುದೇಬಗೆಯ ಕೇಶ ವಿನ್ಯಾಸ ಮಾಡಿಸಿಕೊಳ್ಳಿ.ಆದರೆ ಆ ಕೇಶ ವಿನ್ಯಾಸ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆಯೋ ಅಥವಾ ವಿರೂಪಗೊಳಿಸುತ್ತದೆಯೋ ಎಂಬ ಬಗ್ಗೆ ಗಮನವಿರಲಿ.ವಿನ್ಯಾಸಗಳು ನಿಮ್ಮ ಮುಖಕ್ಕೆ ಒಪ್ಪುವ ರೀತಿಯಲ್ಲಿ ಅಲಂಕರಿಸಿಕೊಂಡರೆ ಅದು ಸೌಂದರ್ಯವೃದ್ಧಿಗೆ ಕಾರಣವಾಗಬಹುದು.ಕೊಂಚ ಎಡವಿದರೂ ನಿಮ್ಮ ಸೌಂದರ್ಯಕ್ಕೆ ನೀವೇ ಅಡ್ಡಿಯಾಗುವುದರಲ್ಲಿ ಸಂದೇಹವಿಲ್ಲ...

0 comments:

Post a Comment