ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ: ಪ್ರಸಿದ್ಧವಾದ ಕ್ಷೇತ್ರಗಳ ಸ್ನಾನಘಟ್ಟಗಳಲ್ಲಿ ಸ್ನಾನಮಾಡುವಲ್ಲಿ ಸರಪಣಿಗಳನ್ನು ಜೋಡಿಸಿರುತ್ತಾರೆ.ಅದನ್ನು ಹಿಡಿದುಕೊಂಡೇ ಸ್ನಾನವನ್ನು ಮಾಡಿ ಕೃತಾರ್ಥರಾಗಬೇಕಾಗುತ್ತದೆ.ಆ ಸರಪಣಿಯನ್ನು ಅವಲಂಬಿಸದಿದ್ದರೆ ರಭಸವಾದ ಪ್ರವಾಹದಲ್ಲಿ ಕೊಚ್ಚಿಹೋಗುವ ಭೀತಿ ತಪ್ಪಿದ್ದಲ್ಲ.
ಅದರಂತೆಯೇ ಗುರುಪೀಠ ಸಹ.ಈ ಸಂಸಾರಪ್ರವಾಹವು ನಮ್ಮನ್ನು ಎತ್ತಲೋ ಒಯ್ಯದಂತೆ ಬಲವಾಗಿ ಇದನ್ನು ಹಿಡಿದುಕೊಂಡರೆ ಮಾತ್ರ ಬದುಕಿನಲ್ಲಿ ಸೆಳೆತಕ್ಕೊಳಗಾಗಿ ಹೋಗುವುದನ್ನು ತಡೆಯಬಹುದು.ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಹೇಳಿದ್ದಾರೆ.ಅಶೋಕೆಯಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದಲ್ಲಿ ಶ್ರೀ ತಲೆಂಗಳ ಶ್ಯಾಮ ಭಟ್ ಇವರ ಶ್ರೀಗುರುದೇವತಾಸೇವೆ ಹಾಗೂ ಬೋವಿಸಮಾಜದ ಗುರುಪಾದುಕಾಪೂಜೆಗಳನ್ನು ಸ್ವೀಕರಿಸಿ ಅನುಗ್ರಹಸಂದೇಶವನ್ನು ನೀಡಿದರು.

ಸಂಸಾರವನ್ನು ಬಿಡಲು ಸಾಧ್ಯವಿಲ್ಲ. ಆದರೆ ಅದರಲ್ಲಿಯೇ ಮುಳುಗಿ ಕೊಚ್ಚಿ ಹೋಗಬಾರದು.ಅವಲಂಬನೆಯೇ ಬೇಕಾದಾಗ ಚಿಕ್ಕಪುಟ್ಟ ವಸ್ತುವನ್ನು ಆಶ್ರಯಿಸದೆ ಶಾಶ್ವತವಾದ ಪರಮಾತ್ಮನ ಅವಲಂಬನೆಯನ್ನು ಬಯಸುವುದು ಒಳಿತು. ಎಂದು ಹೇಳಿ ನಮ್ಮ ಸನಾತನ ಸಂಸ್ಕೃತಿಯಲ್ಲಿ ಹಲವು ಹಬ್ಬಗಳಿವೆ.ಅನೇಕ ಉತ್ಸವಗಳಿವೆ. ನಿರಂತರವಾದ ಅರವತ್ತುದಿನಗಳ ಚಾತುರ್ಮಾಸ್ಯವಿದೆ. ಈ ಎಲ್ಲವೂ ಆ ಸರಪಣಿಯ ರೂಪವಾದ ಪರಮಾತ್ಮನನ್ನು ಸ್ಮರಿಸಿಕೊಳ್ಳಲೆಂದೇ ವಿಹಿತವಾಗಿದೆ.ವ್ಯಾಸಪೂರ್ಣಿಮೆಯ ಶುಭದಿನದಂದು ಶ್ರೀಗುರುಗಳನ್ನು ಸಂದರ್ಶಿಸಿ ತೀರ್ಥಮಂತ್ರಾಕ್ಷತೆಗಳನ್ನು ಪಡೆಯಬೇಕು. ತಪ್ಪಿದರೆ ಚಾತುರ್ಮಾಸ್ಯದ ಒಂದುದಿನದಲ್ಲಿಯಾದರೂ ಗುರುಗಳನ್ನು ನೋಡಿ ಆಶೀರ್ವಾದವನ್ನು ಸ್ವೀಕರಿಸಬೇಕು. ಇದು ಪರಂಪರಾಗತವಾದ ಪದ್ಧತಿ.ಇಂದು ಗುರುದೇವತಾಸೇವೆಯನ್ನು ಸಲ್ಲಿಸಿದ ಬೋವಿ ಸಮಾಜ ಗುರುಗಳನ್ನು ತಮ್ಮ ಹೆಗಲಮೇಲೆ ಇಟ್ಟುಕೊಂಡು ಹೋಗುವ ಸಮುದಾಯ. ಕಾಲ ನಮ್ಮ ಬದುಕಿನಲ್ಲಿ ಅನೇಕರೀತಿಯ ಬದಲಾವಣೆಗಳನ್ನು ತಂದರೂ ಈ ಸಮಾಜ ಮಾತ್ರ ಎಂದೂ ಗುರುಪೀಠದಿಂದ ದೂರವಾಗದೆ ಅತ್ಯಂತಶ್ರದ್ಧೆಯಿಂದ ತ್ರಿಕರಣಪೂರ್ವಕವಾಗಿ ತಮ್ಮದಾದ ಸೇವೆಯನ್ನು ಸಲ್ಲಿಸುತ್ತಿದೆ. ಈ ಸೇವೆಯನ್ನುಸಮರ್ಪಿಸಿದವರಿಗೂ ಹಾಗೂ ಇನ್ನುಳಿದ ಎಲ್ಲ ಶಿಷ್ಯರಿಗೂ ಎಲ್ಲ ರೀತಿಯ ಮಂಗಳವನ್ನು ಪ್ರಭು ಶ್ರೀರಾಮಚಂದ್ರನು ಅನುಗ್ರಹಿಸಲಿ ಎಂದೂ ಆಶಿಸಿದರು.
ಎಂದಿನಂತೆ ಶ್ರೀ ಮಠದ ಮೂಲಮಠನಿರ್ಮಾಣ,ಗೋಬಂಧು,ಸಾವಿರದೆಡೆ ಅಭಿಯಾನ ವಿದ್ಯಾಬಂಧು ಮೊದಲಾದ ಅನೇಕಯೋಜನೆಗಳಿಗೆ ಶಿಷ್ಯರು ತಮ್ಮ ದೇಣಿಗೆಯನ್ನು ಸಮರ್ಪಿ ಸಿದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೂಜ್ಯಶ್ರೀಗಳು ಪ್ರಶಸ್ತಿಪತ್ರ ನೀಡಿಅನುಗ್ರಹಿಸಿದರು .ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿಪುರಸ್ಕೃತ ಶಿಕ್ಷಕಿ ಬಾಡದ ಜಾಹ್ನವಿ ಭಟ್ಟರನ್ನು ಪೂಜ್ಯಶ್ರೀಗಳು ಸ್ಮರಣಿಕೆಯನ್ನು ನೀಡಿ ಸಮ್ಮಾನಿಸಿದರು.ಶ್ರೀಸವಾರಿಯ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ ಹಾಗೂ ರಾಜಶೇಖರ ಹೆಬ್ಬಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು.

0 comments:

Post a Comment