ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ:ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ಯಾವುದೇ ಒಂದು ಕುಟುಂಬದ ಅಥವಾ ವಂಶದ ಕುಲದೇವತೆಯಲ್ಲ.


ಲೋಕನಿಯಾಮಕನಾದ ಆತ ವಿಶ್ವಾರಾಧ್ಯ. ಆ ಹಿನ್ನೆಲೆಯಲ್ಲಿಯೇ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ತಮ್ಮ ದಿಗ್ವಿಜಯಕಾಲದಲ್ಲಿ ಗೋಕರ್ಣಕ್ಕೆ ಬಂದು ಆತ್ಮಲಿಂಗರೂಪಿಯಾದ ಶಿವನನ್ನು ಅರ್ಚಿಸಿ ಸನಾತನಧರ್ಮವು ಶಾಶ್ವತವಾಗಿರಬೇಕೆಂಬ ಉದ್ದೇಶದಿಂದ ಸಮೀಪದಲ್ಲಿನ ಈ ಅಶೋಕೆಯಲ್ಲಿ ನಮ್ಮ ಈ ಅವಿಚ್ಛಿನ್ನರಾಜಗುರುಪರಂಪರೆಯ ಶ್ರೀಮಠವನ್ನು ಸ್ಥಾಪಿಸಿದರು.ಅಂದಿನಿಂದಲೂ ಈ ಕ್ಷೇತ್ರದ ಶಿಷ್ಯರು ಸೇವಾಭಾವನೆಯಿಂದ ಗುರುಪೀಠಕ್ಕೆ ನಡೆದುಕೊಳ್ಳುತ್ತಿದ್ದು ಧಾರ್ಮಿಕಮಾರ್ಗದರ್ಶನವನ್ನು ಪಡೆಯುತ್ತ ಬಂದಿದ್ಧಾರೆ.

ಈ ಕ್ಷೇತ್ರವು ಶ್ರೀಮಠಕ್ಕೆ ಜನ್ಮಸ್ಥಾನವಾದಂತೆ ನಮ್ಮ ಬದುಕಿನ ಪೂರ್ವಾಶ್ರಮದಲ್ಲಿ ನಮಗೆ ಆಶ್ರಯವನ್ನು ನೀಡಿ ವಿದ್ಯಾಭಾಗ್ಯವನ್ನು ಕೊಟ್ಟ ಕ್ಷೇತ್ರವೂ ಹೌದು. ನಮ್ಮ ಮಠದ ಅನೇಕ ಪೀಠಾಧೀಶರಿಗೂ ಸಹ ಗೋಕರ್ಣ ಮಾತೃಭೂಮಿ.ಈ ವಿಷಯವನ್ನು ನಾವು ಎಂದೂ ಮರೆಯುವಂತಿಲ್ಲ.ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಶ್ರೀಕ್ಷೇತ್ರಗೋಕರ್ಣದ ಶಿಷ್ಯಭಕ್ತರ ಶ್ರೀಗುರುದೇವತಾ ಸೇವೆ ಹಾಗೂ ಸ್ಥಳೀಯ ಗೌಡಸಾರಸ್ವತಸಮಾಜದ ಶ್ರೀಗುರುಪಾದುಕಾಪೂಜೆಗಳನ್ನು ಸ್ವೀಕರಿಸಿ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಗುರುಶಿಷ್ಯಸಂಬಂಧವು ಇತರ ಸಂಬಂಧದಂತಲ್ಲ. ಅದು ಶಿಷ್ಯನ ಸರ್ವಸಮರ್ಪಣಾಭಾವ ಹಾಗೂ ಬದುಕಿಗೆ ದಾರಿತೋರುವ ಗುರುವಿನ ಪೂರ್ಣಾನುಗ್ರಹವನ್ನೊಳಗೊಂಡ ಒಂದು ಅವಿನಾಭಾವರೂಪದ್ದು. ಶ್ರೀಮದಾಚಾರ್ಯಶಂಕರ ಭಗವತ್ಪಾದರ ಕಾಲದಿಂದಲೂ ನಡೆದುಕೊಂಡುಬಂದ ಈ ಗುರುಶಿಷ್ಯ ಬಾಂಧವ್ಯ ಮುಂದೆಯೂ ಕೂಡಾ ನಿರಂತರವಾಗಿರಲಿ ಎಂದು ಆಶಿಸಿ ಗೌಡಸಾರಸ್ವತಸಮಾಜ ಗುರುಪೀಠದಲ್ಲಿ ಅತ್ಯಂತ ಶ್ರದ್ಧೆಯನ್ನಿಟ್ಟ ಸಮಾಜ.

ಅಷ್ಟೇ ಅಲ್ಲ,ವಾಣಿಜ್ಯಾದಿ ವ್ಯವಹಾರಗಳಲ್ಲಿ ತುಂಬ ಮುಂದಿರುವ ಸಮಾಜವೂ ಹೌದು. ಇಂದು ಸೇವೆಸಲ್ಲಿಸಿದ ಎಲ್ಲ ಶಿಷ್ಯಭಕ್ತವೃಂದಕ್ಕೂ ವಿದ್ಯಾ,ಸಂಪತ್ತು,ಗೌರವಗಳ ಅಭಿವೃದ್ಧಿಯಾಗಲಿ ಎಂದೂ ಆಶೀರ್ವದಿಸಿದರು.ಇದಕ್ಕೂ ಮೊದಲು ಸಪರಿವಾರ ಶ್ರೀರಾಮಚಂದ್ರಾದಿ ದೇವತೆಗಳು ಹಾಗೂ ಸಂಕಲ್ಪಿತ ಸಾಂಕೇತಿಕ ಅಶ್ವಮೇಧ ಯಾಗದ ಅಶ್ವದ ಜೊತೆ ಅಶೋಕೆಗೆ ಆಗಮಿಸಿ ಅನುಗ್ರಹ ಭಾಷಣ ಮಾಡಿದ ಶ್ರೀ ಸಮರ್ಥ ರಾಮಾಶ್ರಮ ಸಾಕೇತಪುರದ ಶ್ರೀ ರಾಮ ಅವಧೂತರು ಸಂತರಿಗೆ ಸಂತಸ ಬೇಕಿರುವುದು ಸ್ವಂತಕ್ಕಾಗಿ ಅಲ್ಲ. ಅದು ಸಮಾಜಕ್ಕೆ ನೀಡಲೆಂದೇ ಇರುವ ಬಯಸುವ ಸ್ಥಿತಿ.ಗುರುಸೇವೆ ಅದರಲ್ಲಿಯೂ ಚಾತುರ್ಮಾಸ್ಯದಂತಹ ಪುಣ್ಯಕರಸಮಯದಲ್ಲಿ ಮಾಡುವ ಗುರುಶುಶ್ರೂಷೆ ಪರಮಾತ್ಮನ ಸಾನ್ನಿಧ್ಯಕ್ಕೆ ಸುಲಭಸಾಧನ ಎಂದು ಅಭಿಪ್ರಾಯಪಟ್ಟರು.ಶ್ರೀಕ್ಷೇತ್ರಗೋಕರ್ಣದ ಶಿಷ್ಯರ ಪರವಾಗಿ ಖ್ಯಾತ ಶ್ರೌತವಿದ್ವಾಂಸ ವೇ.ಯಜ್ಞಪತಿ ಭಟ್ಟ ಚಿತ್ರಿಗೆಮಠ ಹಾಗೂ ಗೌಡಸಾರಸ್ವತಸಮಾಜದ ಪರವಾಗಿ ಶ್ರೀಧರ ಕಾಮತ್ ತಮ್ಮ ನಿವೇದನೆಯನ್ನು ಸಲ್ಲಿಸಿದರು.ಎಂದಿನಂತೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರವನ್ನು ಅನುಗ್ರಹಿಸುವ ಮೂಲಕ ಪೂಜ್ಯಶ್ರೀಗಳು ವಿಶೇಷಸಾಧನೆಯನ್ನು ಗೈದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.ಶ್ರೀ ಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥ ನಿರ್ವಹಿಸಿದರು.

0 comments:

Post a Comment