ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:04 PM

ಹಲಾಸನ

Posted by ekanasu

ವೈವಿಧ್ಯ
ಈ ಆಸನವು ನೇಗಿಲ ಆಕಾರ ಹೋಲುವುದರಿಂದ ಇದಕ್ಕೆ ಹಲಾಸನ ಎಂದು ಹೆಸರು ಬಂದಿರುತ್ತದೆ.ಅಭ್ಯಾಸ ಕ್ರಮ :
ಮೊದಲು ನೆಲದ ಮೇಲಿರುವ ಜಮಖಾನೆಯಲ್ಲಿ ಬೆನ್ನು ಕೆಳಗೆ ಮಾಡಿ ಉದ್ದಕ್ಕೆ ನೇರವಾಗಿ ಮಲಗಬೇಕು. ಉಸಿರನ್ನು ಹೊರಕ್ಕೆ ಬಿಟ್ಟು ಕೈಗಳನ್ನು ಹಾಗೆಯೇ ಇಟ್ಟುಕೊಂಡು ಕಾಲುಗಳನ್ನು ನಿಧಾನವಾಗಿ ಮೇಲಕ್ಕೆತ್ತಿಕೊಂಡು ತಲೆಯ ಹಿಂಭಾಗಕ್ಕೆ ತಂದು ನೆಲಕ್ಕೆ ಇಡಬೇಕು. ಕಾಲುಗಳು ನೇರವಾಗಿಯೇ ಇರಬೇಕು. ಈ ಭಂಗಿಯಲ್ಲಿ ಸಮ ಉಸಿರಾಟ ನಡೆಯುತ್ತಾ ಳಿ ನಿಮಿಷದಿಂದ 3 ನಿಮಿಷದವರೆಗೆ ಇರಬೇಕು. ಹಲಾಸನದಲ್ಲಿ ಹಲವು ವಿನ್ಯಾಸಗಳಿವೆ. ಆಸನಾನಂತರ ತುಸು ವಿಶ್ರಾಂತಿ ಅಗತ್ಯ.

ಉಪಯೋಗಗಳು :
ಸರ್ವಾಂಗಾಸನದಿಂದ ದೊರಕುವ ಎಲ್ಲಾ ಪ್ರಯೋಜನಗಳೂ ಈ ಆಸನದಲ್ಲಿಯೂ ದೊರಕುತ್ತದೆ. ಅಲ್ಲದೆ ಹೊಟ್ಟೆಯ ಎಲ್ಲಾ ಭಾಗಗಳಿಗೂ ಹೆಚ್ಚು ವ್ಯಾಯಾಮ ದೊರಕಿ ತಾರುಣ್ಯ ಭಾವ ಗಳಿಸುತ್ತೇವೆ. ಬೆನ್ನು ಮೂಳೆ ಬಲಗೊಳ್ಳುತ್ತದೆ. ಈ ಆಸನವು ಹೊಟ್ಟೆಯ ಕೊಬ್ಬನ್ನು ಬೇಗ ಕರಗಿಸಲು ಸಹಾಯ ಮಾಡುತ್ತದೆ. ಈ ಆಸನದಿಂದ ಭುಜಗಳಲ್ಲಿನ ನೋವು, ಮೂಳೆ, ಕೈಗಳಲ್ಲಿನ ಸಿಡಿತ ಮತ್ತು ಬೆನ್ನು ನೋವು ಪರಿಹರಿಸಲು ಸಹಕಾರಿಯಾಗುತ್ತದೆ. ಹೆಚ್ಚು ರಕ್ತದೊತ್ತಡ ಇರುವವರಿಗೆ ಇದು ಗುಣಕಾರಿ ಹಾಗೂ ಈ ಆಸನದಿಂದ ಬೇಗನೆ ಲವಲವಿಕೆ ಒದಗಿ ಬರುತ್ತದೆ.-'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು.

0 comments:

Post a Comment