ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಈ ಕನಸು.ಕಾಂ ಗೆ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ವಿಶೇಷ ಸಂದರ್ಶನ

ವಿಶ್ವ ವ್ಯಾಪಿಯಾದ ವಿರಾಟ್ ಗೋರಕ್ಷಾ ಮಹಾಭಿಯಾನದ ಮೂಲ ಪ್ರೇರಣೆ ಮಹಾನಂದಿ.ಆದರೆ ಅದೀಗ ತನ್ನ ಆಯಸ್ಸನ್ನು ಪೂರ್ತಿಯಾಗಿ ಅನುಭವಿಸಿ ತನ್ನ ಮೂಲ ಸೇರಿದೆ. ಮೊದಲು ನಮ್ಮಲ್ಲಿ, ಆನಂತರ ಮಠದಲ್ಲಿ , ಮತ್ತೆ ರಾಜ್ಯದಲ್ಲಿ , ಈಗ ರಾಷ್ಟ್ರದಲ್ಲಿಯೇ ಮಹತ್ ಪರಿವರ್ತನೆಯೊಂದನ್ನು ಮಾತಿಲ್ಲದೇ ತಂದ ಮಹಾಮೌನ ಸಾನಿಧ್ಯ ಇದೀಗ ಚಿರಮೌನವನ್ನು ತಾಳಿದೆ.
ನಮ್ಮ ಮಠದ ಅವಿಭಾಜ್ಯ ಭಾಗವಾಗಿ, ಅನಂತಭಾಗ್ಯವಾಗಿ, ಗೋರಾಷ್ಟ್ರದ ಅನಭಿಷಿಕ್ತಸಾಮ್ರಾಟನಾಗಿ , ಗೋವುಗಳನ್ನು, ಗೋ ಪ್ರೇಮಿಗಳ ಹೃದಯಗಳನ್ನು ಆಳಿ, ಬಾಳಿ , ಬೆಳಗಿ, ಕೊನೆಗಿಂದು ಬೆಳಕಿನಲ್ಲಿ ಬೆಳಕಾಗಿ ಉಳಿದಿದೆ. ಹೊರಗಣ್ಣಿಗೆ ಮರೆಯಾದ ಮಹಾನಂದಿಗಾಗಿ ಕಣ್ಣೀರು ಸುರಿಸೋಣ. ಒಳಗಣ್ಣು ತೆರೆದು ನೋಡಿ, ಆ ಮಹಾಚೇತನದಿಂದ ಪ್ರೇರಿತರಾಗಿ , ನೊಂದ ಗೋವುಗಳ ಕಣ್ಣೀರು ಒರೆಸೋಣವೇ...ಜಗದ್ಗುರು ಶಂಕರಾಚಾರ್ಯಮಹಾಸಂಸ್ಥಾನಮ್, ಶ್ರೀ ಸಂಸ್ಥಾನ ಗೋಕರ್ಣ - ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನುಡಿಮುತ್ತುಗಳು.
ಶ್ರೀ ಶ್ರೀಗಳು ಚಾತುರ್ಮಾಸ್ಯದ ಪೂರ್ವಭಾವಿಯಾಗಿ " ಈ ಕನಸು.ಕಾಂ"ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಚಾರಗಳನ್ನು ತಿಳಿಯಪಡಿಸಿದರು. ತನ್ನ ದೇಹದ ಕಣ್ಣರೆಪ್ಪೆ, ಬಾಲದ ತುದಿ, ಗೊರಸು ಸೇರಿದಂತೆ ಒಂಭತ್ತು ಭಾಗಗಳಲ್ಲಿ ಮಾತ್ರ ಕಪ್ಪು ಬಣ್ಣವನ್ನು ಹೊಂದಿದ್ದು ಉಳಿದ ಭಾಗಗಳಲ್ಲಿ ದೇಹಪೂರ್ತಿ ಶ್ವೇತವರ್ಣದಿಂದ ಕಂಗೊಳಿಸುತ್ತಿದ್ದ ಮಹಾನಂದಿ ನಮ್ಮ ಹಾಗೂ ಇಡೀ ಸಮಾಜದ ಆಸ್ತಿಯಾಗಿತ್ತು. ಇಡೀ ಪರಿವರ್ತನೆ, ಅಭಿವೃದ್ಧಿಗೆ ಈ ಮಹಾನಂದಿ ಮಹಾಪ್ರೇರಣೆ ನೀಡಿತ್ತು.ಇನ್ನು ಮಹಾನಂದಿಯ ನೆನಪನ್ನು ಶಾಶ್ವತಾಗಿಡುವಂತೆ ಮಾಡುವ ಹಿನ್ನಲೆಯಲ್ಲಿ ಜುಲೈ 15ರಿಂದ ಪ್ರಾರಂಭಗೊಳ್ಳುವ ಚಾತುರ್ಮಾಸ್ಯದಿಂದ ಮುಂದಿನ ಚಾತುರ್ಮಾಸ್ಯದ ತನಕ " ಗೋಸೇವಾ " ವರ್ಷವನ್ನಾಗಿ ಆಚರಿಸಲಾಗುವುದು.ಇದು ಮಹಾನಂದಿಗೆ ಸಮರ್ಪಿತ ವರ್ಷ. ಮಹಾ ನಂದಿಯ ನೆನಪಿಗೋಸ್ಕರ ಈ ಒಂದು ವರುಷಗಳ ಕಾಲ ವಿವಿಧ ಜನಪರ, ಗೋ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.ಈಗಾಗಲೇ ಶ್ರೀ ಮಠದಲ್ಲಿರುವ ಗೋ ಶಾಲೆಗೆ "ಮಹಾನಂದಿ ಗೋಶಾಲೆ " ಎಂದು ಪುನರ್ ನಾಮಕರಣ ಮಾಡಲಾಗಿದೆ ಎಂದು ಮಹಾಸ್ವಾಮಿಗಳು ತಿಳಿಸಿದರು.


ಶ್ರೀ ಮಠದ ಗೋಶಾಲೆ ಸನಿಹ ಮಹಾನಂದಿಯ ಬೃಹತ್ ಮೂರ್ತಿ ನಿರ್ಮಾಣ ಕಾರ್ಯ ನಡೆಯಲಿದೆ. ಗೋವಿನ ಬಗೆಗಿನ ಕಾಳಜಿ ಪ್ರತಿಯೊಬ್ಬನ ಹೃದಯಲ್ಲಿ ಮೂಡುವಂತಾಗಬೇಕು. ಅದನ್ನು ಮಹಾನಂದಿಯ ಮಹಾ ಪ್ರೇರಣೆಯ ಮೂಲಕ ಕಾರ್ಯಗತಗೊಳಿಸುವಂತಾಗಬೇಕಾಗಿದೆ. ಪ್ರತಿಯೊಂದು ಮನೆಯಲ್ಲೂ ದಿನಬಳಕೆಯ ವಸ್ತುಗಳಾಗಿ ಗೋ ಉತ್ಪನ್ನಗನ್ನು ಬಳಸುವಂತಾಗಬೇಕು. ಆ ಮೂಲಕ ಗೋವಿನ ಮೇಲೆ ಪ್ರೀತಿ ಮೂಡುವಂತಾಗಬೇಕು.ತನ್ಮೂಲಕ ಮನಸ್ಸಿನ ಪರಿವರ್ತನೆ ಆಗುವಂತಾಗಬೇಕು. ಮನಸ್ಸಿನ ಪರಿವರ್ತನೆ ಮಾಡುವ ಮೂಲಕ ಗೋವಿನ ಗೋ ಮಾತೆಯ ಉಳಿವಿಗೆ ಕಾರಣವಾಬೇಕಾಗಿದೆ. ಅದು ನಮ್ಮ ಕನಸಾಗಿದೆ. "" ಎಂದು ಶ್ರೀಗಳು ತಿಳಿಸಿದರು.

ಅಕ್ಷರ ಆಂದೋಲನ

ಮಾಧ್ಯಮ ರಂಗದಲ್ಲಿ ಧನಾತ್ಮಕತೆಯನ್ನು ಪ್ರೋತ್ಸಾಹಿಸುವುದು, ಸಕಾರಾತ್ಮಕ ಭಾವನೆಯನ್ನು ಒದಗಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ "ಅಕ್ಷರ ಆಂದೋಲನ" ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲು ಚಿಂತಿಸಲಾಗಿದೆ. ಈ ಬಗ್ಗೆ ಕಾರ್ಯಯೋಜನೆ ರೂಪಿಸಲಾಗುತ್ತದೆ ಎಂದು ಶ್ರೀಗಳು ತಿಳಿಸಿದರು.

ಸಂದರ್ಶನ - ಹರೀಶ್ ಕೆ.ಆದೂರು

0 comments:

Post a Comment