ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಇದನ್ನು ಪದ್ಮಾಸನ ಸ್ಥಿತಿಯಲ್ಲಿ ಕುಳಿತುಕೊಂಡು ಅಭ್ಯಾಸ ಮಾಡಿದರೆ ವಿಶೇಷವಾದ ಫಲ ದೊರೆಯುವುದು. ನೇರವಾಗಿ ಕುಳಿತುಕೊಂಡು ಕಿವಿಗಳನ್ನು ಆಯಾ ಕೈಗಳ ತೋರು ಬೆರಳಿನಿಂದ ಮೃದುವಾಗಿ ಮುಚ್ಚ್ಚಿ (ಸರಳ ವಿಧಾನ, ಚಿತ್ರದಲ್ಲಿರುವಂತೆ), ಕಣ್ಣುಗಳನ್ನು ಮುಚ್ಚಿ ನಂತರ ನಿಧಾನವಾಗಿ ದೀರ್ಘವಾಗಿ ಮೂಗಿನ ಮೂಲಕ ಉಸಿರನ್ನು ಎಳೆದುಕೊಂಡು ಮುಚ್ಚಿದ ಬಾಯಿಯಿಂದ ಹೆಣ್ಣು ದುಂಬಿಯತೆ ಮಧುರವಾಗಿ ಶಬ್ಧ ಮಾಡುತ್ತ ಮೂಗಿನಿಂದ ಉಸಿರನ್ನು ನಿಧಾನವಾಗಿ ಹೊರಕ್ಕೆ ಬಿಡಬೇಕು. ಉಸಿರನ್ನು ಹೊರಕ್ಕೆ ಬಿಡುವಾಗ ಶರೀರದಲ್ಲಾಗುವ ಒಂದು ರೀತಿಯ ಕಂಪನವನ್ನು ಅನುಭವಿಸಬಹುದು. ಇದನ್ನು 6 ರಿಂದ 9 ಬಾರಿ ಅಭ್ಯಾಸಿಸಬೇಕು.ಪ್ರಯೋಜನಗಳು :
ವಿಶೇಷವಾಗಿ ಸಂಗೀತ ಅಭ್ಯಾಸ ಮಾಡುವವರಿಗೆ ಈ ಭ್ರಮರೀ ಪ್ರಾಣಾಯಾಮ ಸಹಕಾರಿಯಾಗುತ್ತದೆ. ಹೃದಯ ದೌರ್ಬಲ್ಯ, ಅಧಿಕ ರಕ್ತದೊತ್ತಡ, ತಲೆನೋವು ಇತ್ಯಾದಿ ಸಮಸ್ಯೆ ಇದ್ದವರಿಗೆ ಇದು ಉಪಯುಕ್ತ.''ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್

0 comments:

Post a Comment